Webdunia - Bharat's app for daily news and videos

Install App

ರಷ್ಯಾದಲ್ಲಿ ಎಚ್ಐವಿ ಚುಚ್ಚುಮದ್ದು

Webdunia
ಶನಿವಾರ, 6 ಅಕ್ಟೋಬರ್ 2007 (14:52 IST)
ಇಡೀ ಜಗತ್ತಿನ ಲಕ್ಷಾಂತರ ಜನರನ್ನು ಬಾಧಿಸಿರುವ ಮಾರಕ ಕಾಯಿಲೆ ಏಡ್ಸ್. ಸುಮಾರು 10 ವರ್ಷಗಳ ಕೆಳಗೆ ಏಡ್ಸ್ ಸುಳಿವೇ ಕಂಡಿರದ ನಮ್ಮ ರಾಷ್ಟ್ರದಲ್ಲಿ ಇಂದು ಏಡ್ಸ್ ಕರಾಳ ಹಸ್ತಗಳನ್ನು ಚಾಚಿ ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡಿದೆ.

ಏಡ್ಸ್ ಕಾಯಿಲೆ ಅಂಟಿದ ಸಾವಿರಾರು ಜನರು ಸಾವುಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಈ ರೋಗಕ್ಕೆ ಔಷಧಿ ಕಂಡುಹಿಡಿಯಲು ಜಗತ್ತಿನ ವಿಜ್ಞಾನಿಗಳು ಸತತ ಸಂಶೋಧನೆ ಕೈಗೊಂಡಿದ್ದಾರೆ. ಆದರೆ ಒಂದೊಮ್ಮೆ ಏಡ್ಸ್ ವೈರಸ್‌ಗಳು ದೇಹವನ್ನು ಹೊಕ್ಕಿತೆಂದರೆ ದೇಹದೊಳಗೆ ಸತತವಾಗಿ ದ್ವಿಗುಣಗೊಳ್ಳುತ್ತವೆ.

ಅದಕ್ಕೆ ಪರಿಣಾಮಕಾರಿ ಚುಚ್ಚುಮದ್ದು ಕಂಡುಹಿಡಿಯುವುದು ಕಷ್ಟ ಎನ್ನುವುದು ವಿಜ್ಞಾನಿಗಳ ಅಭಿಮತ. ಇಷ್ಟೆಲ್ಲ ಕಳವಳಕಾರಿ ಸಂಗತಿಗಳಿದ್ದರೂ, ಎಚ್‌ಐವಿ ಬಾಧಿತರು ತಮ್ಮ ದುಃಖದುಮ್ಮಾನಗಳ ನಡುವೆ ಸಂತಸ ಪಡುವ ವಿಚಾರವೊಂದು ಈಗ ವರದಿಯಾಗಿದೆ.

ಪಶ್ಚಿಮ ಸೈಬೀರಿಯದ ವೈರೋಲಜಿ ಮತ್ತು ಜೈವಿಕತಂತ್ರಜ್ಞಾನ ವೆಕ್ಟರ್ ಸಂಶೋಧನೆ ಕೇಂದ್ರದಲ್ಲಿ ಮಾರಕ ಏಡ್ಸ್ ಕಾಯಿಲೆಗೆ ಸಮರ್ಥ ಎಚ್‌ಐವಿ ಚುಚ್ಚುಮದ್ದು ಅಭಿವೃದ್ಧಿಪಡಿಸಿರುವುದಾಗಿ ರಷ್ಯಾದ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಎಚ್‌ಐವಿ ಚುಚ್ಚುಮದ್ದು ಅಭಿವೃದ್ಧಿಪಡಿಸುವುದು ಬಹಳ ಕಷ್ಟ.

ಏಕೆಂದರೆ ವೈರಸ್ ಸೂಕ್ಷ್ಮಾಣು ಸತತವಾಗಿ ದ್ವಿಗುಣಗೊಳ್ಳುತ್ತಾ ಹೋಗುತ್ತದೆ ಎಂದು ವಿಜ್ಞಾನಿ ವ್ಲಾಡಿಮಿರ್ ಶಮ್ನಿ ತಿಳಿಸಿದ್ದಾರೆ. ಸಂಶೋಧನಾ ಕೇಂದ್ರ ಸೃಷ್ಟಿಸಿರುವ ಪಾಲಿಮಾರ್ಫಸ್ ವ್ಯಾಕ್ಸಿನ್ ಎಚ್‌ಐವಿಯನ್ನು ಪರಿಣಾಮಕಾರಿಯಾಗಿ ನಿವಾರಿಸಲು ನೆರವಾಗಬಹುದು ಎಂದು ಶಮ್ನಿ ಹೇಳಿದರು.

ಸುದೀರ್ಘ ಕಾನೂನು ನಿಯಮಗಳು ಅಗತ್ಯ ವೈದ್ಯಕೀಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಸೂಕ್ತವಾಗಿ ನೋಂದಾವಣೆಯಾಗುವ ಅವಕಾಶವನ್ನು ಜಟಿಲಗೊಳಿಸಿದೆ. ಮೊದಲ ಹಂತದ ಪರೀಕ್ಷೆಯು ಕನಿಷ್ಠ 3 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.ಚುಚ್ಚುಮದ್ದಿನ ಪರಿಣಾಮದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಕೇಂದ್ರದ ಸಂಶೋಧಕಿ ತಿಳಿಸಿದ್ದಾರೆ.

ಪರೀಕ್ಷೆಯ ಮೊದಲ ಹಂತ ಇನ್ನೂ ಆರಂಭವಾಗಿಲ್ಲ ಮತ್ತು ಅದರ ಸುರಕ್ಷತೆ ಇನ್ನೂ ರುಜುವಾತುಪಟ್ಟಿಲ್ಲ ಎಂದು ಅವರು ಹೇಳಿದರು.ಇದುವರೆಗೆ 36 ಎಚ್‌ಐವಿ ಚುಚ್ಚುಮದ್ದುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಅವುಗಳಲ್ಲಿ ಯಾವುದೂ ಯಶಸ್ವಿಯಾಗಿಲ್ಲ ಎಂದು ಅವರು ನುಡಿದರು. ಎಚ್‌ಐವಿ ಚುಚ್ಚುಮದ್ದು ಅಬಿವೃದ್ಧಿಗೆ ರಷ್ಯಾ ಸರ್ಕಾರ ಒಂದು ಶತಕೋಟಿ ರೂಬಲ್‌ಗಳನ್ನು ಮೀಸಲಿಟ್ಟಿದೆ.

ಎಚ್‌ಐವಿ ರೋಗದಿಂದ ವಿಶ್ವಾದ್ಯಂತ 40.4 ದಶಲಕ್ಷ ಜನರು ಬಾಧಿತರಾಗಿದ್ದು, ಅವರಲ್ಲಿ 17.5 ದಶಲಕ್ಷ ಮಹಿಳೆಯರು ಮತ್ತು 15 ವರ್ಷದೊಳಗಿನ 2.3 ದಶಲಕ್ಷ ಮಕ್ಕಳೂ ಸೇರಿದ್ದಾರೆ ಎಂದು ಅಧ್ಯಯನದ ವರದಿ ತಿಳಿಸಿದೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments