ಉಲ್ಲಸಿತರಾಗಿರಲು ಏನು ಮಾಡಬೇಕು?
, ಗುರುವಾರ, 13 ಡಿಸೆಂಬರ್ 2007 (13:55 IST)
1)
ಮನಸ್ಸು ಉಲ್ಲಸಿತವಾಗಿರಲು ಚಿಂತೆಯನ್ನು ಬಿಟ್ಟು, ಸಮಸ್ಯೆಗೆ ಪರಿಹಾರ ಹುಡುಕಬೇಕು.2)
ಅತಿಯಾದ ಒತ್ತಡ ಉಂಟಾದಾಗ ಒಂದು ಗಳಿಗೆ ನಕ್ಕರೆ ಮನಸ್ಸು ಪ್ರಪುಲ್ಲವಾಗುತ್ತದೆ. ನಗುವುದನ್ನು ರೂಢಿಸಿಕೊಂಡರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ನಗಬೇಕು, ನಕ್ಕುನಲಿಯಬೇಕು ಎನ್ನುವುದೇ ನಿಮ್ಮ ಧ್ಯೇಯವಾಕ್ಯವಾಗಿರಲಿ.3),
ಸಂಗೀತ, ಚಿತ್ರಗೀತೆಗಳ ಆಲಿಕೆಯಿಂದ ಮನಸ್ಸಿಗೆ ಹಿತ ಉಂಟಾಗುತ್ತದೆ. ಒಂದೇ ಸಮನೇ ಮೌನವ್ರತ ಆಚರಿಸಿದೇ ಆಗಾಗ್ಗೆ ಮಾತನಾಡುವುದು ಕೂಡ ಮನಸ್ಸಿಗೆ ಒಳ್ಳೆಯದು.4)
ಮನಸ್ಸು ಪ್ರಪುಲ್ಲವಾಗಿರಲು ಪ್ರತಿರಾತ್ರಿ ಕ್ರಮಬದ್ಧವಾಗಿ ನಿದ್ರೆ ಅವಶ್ಯಕ. ಕನಿಷ್ಠ 7 ಗಂಟೆಗಳಾದರೂ ರಾತ್ರಿ ನಿದ್ರೆ ಮಾಡಿ.