1)ಪ್ರತಿ ದಿನ ಬೆಳಿಗ್ಗೆ ಉಪಹಾರ ಸೇವನೆಗೆ ಮುನ್ನ 1 ಅಥವಾ ಎರಡು ಲಿಂಬೆ ಹಣ್ಣಿನ ರಸವನ್ನು 250-500 ಮಿಲಿಗ್ರಾಂ ನೀರಿಗೆ ಬೆರೆಸಿ ಕುಡಿಯುವುದರಿಂದ ಹೊಟ್ಟೆ ಸ್ವಚ್ಛವಾಗುತ್ತದೆ.
2)ಆಹಾರ ತಿನ್ನುವಾಗ ತಂಪು ಪಾನೀಯಗಳನ್ನು ಕುಡಿಯಬೇಡಿ. ದೇಹದ ಉಷ್ಣಾಂಶದಲ್ಲಿ ಆಹಾರ ಜೀರ್ಣವಾಗುತ್ತದೆ. ಆದ್ದರಿಂದ ತಂಪು ಪಾನೀಯವು ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತದೆ. ಆಹಾರ ಸೇವನೆ ಸಂದರ್ಭದಲ್ಲಿ ಬಿಸಿ ನೀರು ಅಥವಾ ಹರ್ಬಲ್ ಚಹಾ ಸೇವನೆ ಒಳ್ಳೆಯದು.3. ನಿರ್ದಿಷ್ಟ ಸ್ವಯಂ ಮಸಾಜ್ ಮತ್ತು ವ್ಯಾಯಾಮ ತಂತ್ರಗಳಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.
4)ಆಹಾರವನ್ನು ಚೆನ್ನಾಗಿ ಅಗಿದು ತಿನ್ನುವುದು ಜೀರ್ಣಕ್ರಿಯೆಗೆ ಸಹಾಯಕ. ಅದು ಆಹಾರವನ್ನು ಚೂರು ಮಾಡುವುದಲ್ಲದೇ ಒಳಕ್ಕೆ ಬರುವ ಆಹಾರಕ್ಕೆ ಸಿದ್ಧತೆಗಾಗಿ ಜೀರ್ಣರಸವನ್ನು ಬಿಡಲು ಅಂಗಾಂಗಗಳಿಗೆ ಸೂಚನೆ ನೀಡುತ್ತದೆ.
5)ಕಾರ್ಬೊಹೈಡ್ರೇಟ್ಸ್(ಬ್ರೆಡ್, ಆಲೂಗಡ್ಡೆ, ಅನ್ನ)ಪ್ರೋಟೀನ್(ಮಾಂಸ, ಡೇರಿ ಉತ್ಪನ್ನ, ಸೋಯಾ ಮತ್ತು ನಟ್ಸ್) ಮತ್ತು ಕೊಬ್ಬು(ಅಡುಗೆ ತೈಲ) ಮೂರು ಆಹಾರದ ವಿಧಾನಗಳು. ಇವುಗಳನ್ನು ಒಂದರ ಜತೆ ಇನ್ನೊಂದನ್ನು ಮಿಶ್ರಣ ಮಾಡಬಾರದು. ಉದಾಹರಣೆಗೆ ಕಾರ್ಬೋಹೈಡ್ರೇಟ್ಸ್ ಮಾತ್ರ ಅಥವಾ ಪ್ರೋಟೀನ್ ಮಾತ್ರ ತರಕಾರಿ ಅಥವಾ ಸಲಾಡ್ ಜತೆ ಸೇವಿಸಬಹುದು.
6)ಗಿಡಮೂಲಿಕೆ, ಆಹಾರ ಮತ್ತು ಪೂರಕ ಆಹಾರಗಳ ಮೂಲಕ ಪಿತ್ತಜನಕಾಂಗ ಮತ್ತು ಕರುಳು ಸ್ವಚ್ಛಗೊಳಿಸುವಿಕೆ.