Webdunia - Bharat's app for daily news and videos

Install App

ಆರೋಗ್ಯ ಜೀವನಕ್ಕೆ ಇಂಟರ್‌ನೆಟ್ ಕ್ಲಿಕ್

Webdunia
ಬುಧವಾರ, 10 ಅಕ್ಟೋಬರ್ 2007 (21:09 IST)
ಮನೆಯಲ್ಲಿ ಕುಳಿತು ಇಂಟರ್‌ನೆಟ್‌ನಲ್ಲಿ ಕೇವಲ ಒಂದು ಕ್ಲಿಕ್ ಮಾಡಿ, ಆರೋಗ್ಯಕರ ಜೀವನಕ್ಕೆ ತರಬೇತಿಯನ್ನು ಪಡೆಯಿರಿ. ವಿರ್ಜಿನಿಯ ಟೆಕ್ ಕಾಲೇಜಿನ ವಿಜ್ಞಾನಿಗಳು ಉಚಿತ ಇಂಟರ್‌ನೆಟ್ ಆರೋಗ್ಯ ಕಾರ್ಯಕ್ರಮವನ್ನು ರೂಪಿಸಿದೆ.

ಗೈಡ್ ಟು ಹೆಲ್ತ್ ಕಾರ್ಯಕ್ರಮ ನಿಮ್ಮ ದೈಹಿಕ ಕ್ಷಮತೆ ಹೆಚ್ಚಳಕ್ಕೆ, ಪೌಷ್ಟಿಕಾಂಶದ ಆಹಾರ ಸೇವನೆಗೆ ಮತ್ತು ಸ್ಥೂಲದೇಹದ ನಿವಾರಣೆಗೆ ಬೇಕಾದ ಎಲ್ಲ ಮಾಹಿತಿ, ಕೌಶಲ್ಯ ಮತ್ತು ಬೆಂಬಲವನ್ನು ಒದಗಿಸುತ್ತದೆ.

ಅನೇಕ ಮಂದಿ ಅಮೆರಿಕನ್ನರಿಗೆ ತಾವು ಚೆನ್ನಾಗಿ ತಿಂದು ದೈಹಿಕ ಕ್ರಿಯಾಶೀಲರಾಗಬೇಕೆಂದು ಗೊತ್ತಿದೆ. ಆದರೆ ಅದಕ್ಕೆ ತೀಕ್ಷ್ಣ ಬದಲಾವಣೆ ಹೊಂದಬೇಕಿಲ್ಲವೆಂದು ತಿಳಿದಿಲ್ಲ. ಕೆಲವು ಮುಖ್ಯ ಬದಲಾವಣೆಗಳಿಂದ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಉಂಟಾಗುತ್ತದೆಂದು ಆರೋಗ್ಯ ನಡವಳಿಕೆ ಸಂಶೋಧನೆ ಕೇಂದ್ರದ ನಿರ್ದೇಶಕ ರಿಚರ್ಡ್ ವಿನೆಟ್ ತಿಳಿಸುತ್ತಾರೆ.

ಆರೋಗ್ಯಯುಕ್ತ ಮಧ್ಯವಯಸ್ಕರು ಪ್ರತಿವರ್ಷ 2 ಪೌಂಡ್ ತೂಕ ಹೆಚ್ಚಿಸಿಕೊಳ್ಳುತ್ತಾರೆ. 30 ವರ್ಷ ಪ್ರಾಯದಲ್ಲಿ ಸಹಜ ತೂಕವಿದ್ದವರು 50 ವರ್ಷ ತಲುಪುವಷ್ಟರಲ್ಲಿ ಸ್ಥೂಲಕಾಯದ ದೇಹಿಯಾಗುತ್ತಾರೆ.

ಮಧ್ಯವಯಸ್ಕರಲ್ಲಿ ನಿಷ್ಕ್ರಿಯತೆ ಲಕ್ಷಣಗಳು ಮತ್ತು ಕ್ರಮೇಣ ತೂಕ ಹೆಚ್ಚಳವು ಅಧಿಕ ರಕ್ತದ ಒತ್ತಡ, ಹೆಚ್ಚು ಕೊಲೆಸ್ಟರಾಲ್, ಅಧಿಕ ಕೊಬ್ಬು ಮುಂತಾದ ಮಧುಮೇಹ ಪೂರ್ವ ಲಕ್ಷಣಗಳಿಗೆ ಪರಿವರ್ತನೆಯಾಗುತ್ತದೆ ಎಂದು ಅವರು ನುಡಿದರು. ಅದನ್ನು ಹಾಗೇ ಬಿಟ್ಟರೆ ಮಾರಕ ಕಾಯಿಲೆಗೆ ತಿರುಗಿ ಜೀವನವನ್ನು ಮೊಟಕು ಮಾಡುತ್ತದೆ ಅಥವಾ ಭವಿಷ್ಯ ಜೀವನದ ಹರುಷವನ್ನು ಕಸಿಯುತ್ತದೆ ಎಂದರು.

ಈಗ ವಿಜ್ಞಾನಿಗಳ ಹೆಲ್ತ್ ಫೋಕಸ್ ತೂಕದ ಸ್ಥಿರತೆಯನ್ನು ಅವಲಂಬಿಸಿದೆ. ಆಹಾರ ಸೇವನೆಯಲ್ಲಿ ಕೆಲವು ಆಯ್ದ ಬದಲಾವಣೆ ಮತ್ತು ಹೆಚ್ಚು ದೈಹಿಕ ಚಟುವಟಿಕೆ. ಆದರೆ ಅಗತ್ಯವಾದ ಬದಲಾವಣೆ ಸಣ್ಣದಾದರೂ ಅದಕ್ಕೆ ಅಂಟಿಕೊಂಡಿರುವುದು ಅನೇಕ ಮಂದಿಗೆ ಕಷ್ಟ. ಪೌಷ್ಠಿಕತೆ ಮತ್ತು ದೈಹಿಕ ಚಟುವಟಿಕೆ ಮೇಲೆ ಈ ಮಹತ್ವದ ಬದಲಾವಣೆ ಉಂಟುಮಾಡಲು ಬಹುತೇಕ ಮಂದಿ ಕುಶಲತೆ ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ವಿನೆಟ್ ಹೇಳಿದರು.

ವಾಸ್ತವವಾಗಿ ಇದಕ್ಕೆ ಉತ್ತಮ ವಿಧಾನವೆಂದರೆ ನಿಮ್ಮದೇ ಸ್ವಂತ ಕಾರ್ಯಕ್ರಮ ಮತ್ತು ಕೋಚ್ ಇಟ್ಟುಕೊಳ್ಳುವುದು. ಅದೃಷ್ಟವಶಾತ್ ತಂತ್ರಜ್ಞಾನ ಮತ್ತು ಇಂಟರ್‌ನೆಟ್ ಮೂಲಕ ವೈಯಕ್ತಿಕ ಕಾರ್ಯಕ್ರಮ ಒದಗಿಸುವ ವಿಧಾನಗಳಿವೆ ಎಂದು ನುಡಿದರು.ಈ ಕಾರ್ಯಕ್ರಮವು ಆರೋಗ್ಯಕರ ಬದಲಾವಣೆಯನ್ನು ಕಾಯಂ ಜೀವನಶೈಲಿಯಾಗಿ ರೂಪಿಸಿಕೊಳ್ಳುವ ಗುರಿ ಹೊಂದಿದೆ.

ದೈಹಿಕವಾಗಿ ಕ್ರಿಯಾಶೀಲರಾಗಿರದ, ಇಂಟರ್‌ನೆಟ್ ಸೌಲಭ್ಯವಿರುವ 18-64 ರ ವಯೋಮಿತಿಯವರಿಗೆ ಈ ಕಾರ್ಯಕ್ರಮ ನಿಗದಿಯಾಗಿದೆ. ಕಾರ್ಯಕ್ರಮದಲ್ಲಿ ನೋಂದಣಿಯಾದ ಬಳಿಕ ಉಚಿತ ಪಿಡೋಮೀಟರ್ ಮತ್ತು ಸ್ಕೇಲ್ ಸ್ವೀಕರಿಸುತ್ತಾರೆ. ಬಳಿಕ ಗೈಡ್ ಟು ಹೆಲ್ತ್ ಕಾರ್ಯಕ್ರಮಕ್ಕೆ ಆನ್‌ಲೈನ್‌ನಲ್ಲಿ 18 ತಿಂಗಳವರೆಗೆ ಪ್ರತಿವಾರ ತರಬೇತಿ ಪಡೆಯಬಹುದು. ವಾರದ ಆನ್‌ಲೈನ್ ತರಬೇತಿ 10-20 ನಿಮಿಷಗಳ ಕಾಲ ಹಿಡಿಯುತ್ತದೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments