ಸಾಮಾಗ್ರಿ:
ಪಪ್ಪಾಯಿ -1
ಸ್ಟ್ರೊಬೆರಿ-1 ಕಪ್
ಬಾಳೆಹಣ್ಣು-1
ಕಿತ್ತಳೆ-1
ಜೇನು-3 ಟೇಬಲ್ ಚಮಚ
ಪುದೀನಾ -3 ಚಿಟಿಕೆ
ಬ್ಲೂ ಬೆರ್ರಿ-1 ಕಪ್
ಸಲಾಡ್ ಮಿಕ್ಸ್-2 ಚಮಚ
ವಿಧಾನ:
ಪಪ್ಪಾಯಿಯ ಸಿಪ್ಪೆ ತೆಗೆದುತುಂಡುಗಳನ್ನಾಗಿ ಮಾಡಿ ಅದಕ್ಕೆ ಸ್ಟ್ರೊಬೆರಿ, ಬಾಳೆಹಣ್ಣಿನ ತುಂಡುಗಳನ್ನು ಮಿಶ್ರಮಾಡಿ.
ಕಿತ್ತಳೆಯನ್ನು ಸುಲಿದು ಅದರ ಅರ್ಧ ಹೋಳುಗಳನ್ನು ಕಿವುಚಿ ಅದಕ್ಕೆ ಬೆರಸಿ ಚೆನ್ನಾಗಿ ಮಿಶ್ರಮಾಡಿ.ಬ್ಲೂ ಬೆರ್ರಿ.ಕಿತ್ತಳೆಯ ಹೋಳು ಮತ್ತು ಜೇನನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಸ್ವಲ್ಪ ತಾಸು ಇರಿಸಿ,ಸಲಾಡ್ ಮಿಕ್ಸ್ ಸೇರಿಸಿದ ನಂತರ ಪುದೀನಾವನ್ನು ಅದರ ಮೇಲೆ ಚಿಮುಕಿಸಿ.
ಫ್ರುಟ್ ಸಲಾಡ್ ತಯಾರ್ ಇದನ್ನು ಬೇಕಾದರೆ ಫ್ರಿಡ್ಜ್ನಲ್ಲಿರಿಸಿ ನಂತರ ಸೇವಿಸಬಹುದು ಇಲ್ಲವಾದರೆ ಹಾಗೆಯೇ ಸೇವಿಸಬಹುದು.