ತಮ್ಮ ಸೌಂದರ್ಯದ ಬಗ್ಗೆ ಕಾಳಜಿಯಿರುವ ಮಹಿಳೆಯರು ಇನ್ನು ಮುಂದೆ ಮೊಡವೆಗಳೊಂದಿಗೆ ಬದುಕುವುದನ್ನು ಕಲಿಯಬೇಕು, ಕೊನೆ ಪಕ್ಷ ಗರ್ಭಧರಿಸಿರುವಾಗಲಾದರೂ ಇದರೊಂದಿಗೆ ರಾಜಿ ಮಾಡಿಕೊಳ್ಳುವುದು ಒಳಿತು. ಯಾಕೆಂದರೆ, ತಜ್ಞರು ಹೇಳುವಂತೆ ಮೊಡವೆ ನಿರೋಧಕ ಕ್ರೀಮ್‌ಗಳ ಬಳಕೆ ಗರ್ಭಪಾತಕ್ಕೆ ದಾರಿಯಾದೀತು.
"ಮಿಲಿಯಗಟ್ಟಲೆ ಮಹಿಳೆಯರು, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು ಎದುರಿಸುವ ಸಾಮಾನ್ಯ ಸಮಸ್ಯೆ ಮೊಡವೆ. ಆದರೆ ಮೊಡವೆ ನಿರೋಧಕ ಕ್ರೀಮ್‌ಗಳನ್ನು ಗರ್ಭಧರಿಸುವುದಕ್ಕಿಂತ ಒಂದು ತಿಂಗಳು ಮೊದಲು ಬಳಸಿದರೂ ಇದು ಅಸಹಜ ಮಗುವಿನ ಜನನಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು" ಎಂದು ಸ್ತ್ರೀರೋಗ ತಜ್ಞೆ, ಸಮಾಲೋಚಕಿ ಡಾ ಶಿವಾನಿ ಸಚ್‌ದೇವ್ ಗೌರ್ ತಿಳಿಸಿದ್ದಾರೆ.
ಅವರು ಕೆಲವು ಪ್ರಕರಣಗಳಲ್ಲಿ ಮೊಡವೆ ನಿರೋಧಕ ಕ್ರೀಮ್‌ಗಳ ಬಳಕೆಯು ಗರ್ಭಪಾತಕ್ಕೂ ಹಾದಿಯಾಗಬಹುದು ಎಂದು ಹೇಳಿದ್ದಾರೆ.
ಬಹಳಷ್ಟು ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವೈದ್ಯರ ಸೂಚನೆ ಇಲ್ಲದೆ ಇಂತಹ ಔಷಧಗಳನ್ನು ಬಳಸುವ ಮೊದಲು ಮಹಿಳೆಯರು ಎರಡನೇ ಬಾರಿ ಯೋಚಿಸುವ ಗೋಜಿಗೂ ಹೋಗುತ್ತಿಲ್ಲ. ಆದರೆ ಇಂತಹ ಔಷಧಗಳು ಗಂಭೀರ ಅಡ್ಡ ಪರಿಣಾಮಗಳನ್ನು ಹೊಂದಿವೆ ಎಂದೂ ಗೌರ್ ಹೇಳುತ್ತಾರೆ.
"ಚರ್ಮದಿಂದ ಇಂತಹ ಮುಲಾಮುಗಳು ಹಿರಲ್ಪಡುತ್ತದೆ ಮತ್ತು ತಾಯಿಯ ರಕ್ತನಾಳ ಸೇರಿಕೊಂಡು ಹೊಕ್ಕುಳಬಳ್ಳಿ ಅಥವಾ ಮಾಸು ಮೂಲಕ ಬೆಳೆಯುತ್ತಿರುವ ಭ್ರೂಣದ ರಕ್ತದ ಹರಿವಿನೊಂದಿಗೆ ಸೇರಿಕೊಳ್ಳುತ್ತದೆ " ಎಂದು ಅವರು ವಿವರಿಸಿದ್ದಾರೆ.