ಡಾ| ಅನುರಾಧಾ ಮೂರ್ತಿ
ಮಹಿಳೆಯರನ್ನು ಅತಿಹೆಚ್ಚು ಕಾಡುತ್ತಿರುವ ರೋಗಗಳಲ್ಲಿ ಒಂದು ಸ್ತನಕ್ಯಾನ್ಸರ್ ಆದರೆ, ಇನ್ನೊಂದು ಸರ್ವಿಕಲ್ ಕ್ಯಾನ್ಸರ್. ಅಂದರೆ, ಗರ್ಭಕೊರಳಿನ ಕ್ಯಾನ್ಸರ್. ಭಾರತದಲ್ಲಿ 1,30,000 ಮಹಿಳೆಯರು ಸರ್ವಿಕಲ್ ಕಾನ್ಸರ್‌ನಿಂದ ಮೃತರಾಗುತ್ತಾರೆ.
ರೋಗನಿರೋಧಕತೆ ಕಡಿಮೆ ಇರುವ ಮಹಿಳೆಯರು, ಅತಿಯಾದ ಧೂಮಪಾನ, ಲೈಗಿಂಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿರುವ, ಹೆಚ್ಚಿನ ಲೈಂಗಿಕ ಸಂಗಾತಿಗಳನ್ನು ಹೊಂದಿರುವ, ಲೈಂಗಿಕವಾಗಿ ಹರಡುವಂತಹ ಕಾಯಿಲೆಗಳನ್ನು ಹೊಂದಿರುವ ಮಹಿಳೆಯರು ಮತ್ತು ಎಚ್.ಐ.ವಿ ಹೊಂದಿರುವ ಮಹಿಳೆಯರಿಗೆ ಸರ್ವಿಕಲ್ ಕ್ಯಾನ್ಸರ್ ಮತ್ತು ಇತರ ಸರ್ವಿಕಲ್ ಕಾಯಿಲೆಗಳು ಬರುವ ಸಾಧ್ಯತೆ ಅತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಸರ್ವಿಕಲ್ ಕ್ಯಾನ್ಸರ್ ಗೆ ಹ್ಯೂಮನ್ ಪ್ಯಾಪಿಲೋಮ ವೈರಸ್ ಅಥವಾ ಎಚ್.ಪಿ.ವಿ ಕಾರಣವಾಗಿರುತ್ತದೆ. ಎಚ್.ಪಿ.ವಿ ಹೊಂದಿರುವ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಾಗಿ ಇದು ಹರಡಬಹುದು. ಎಲ್ಲಾ ಬಗೆಯ ಎಚ್.ಪಿ.ವಿಗಳು ಸರ್ವಿಕಲ್ ಕ್ಯಾನ್ಸರ್ ಹರಡುವುದಿಲ್ಲ. ನಿಮಗೆ ಅರಿವಿರದಂತೆ ನಿಮ್ಮ ದೇಹದಲ್ಲಿ ಬಹಳಷ್ಟು ವರ್ಷಗಳಿಂದ ಎಚ್.ಪಿ.ವಿ ಇದ್ದಿರಬಹುದು. ಎಚ್.ಪಿ.ವಿ ಸೋಂಕು ತಗಲಿದ ಬಹಳಷ್ಟು ವರ್ಷಗಳ ನಂತರ ಇದು ನಿಮ್ಮಲ್ಲಿ ಸರ್ವಿಕಲ್ ಕ್ಯಾನ್ಸರ್ ಉಂಟಾಗಲು ಕಾರಣವಾಗಬಹುದು. ಆದ್ದರಿಂದ ನಿಯಮಿತವಾದ ಪ್ಯಾಪ್ ಟೆಸ್ಟ್‌ಗಳನ್ನು ಮಾಡಿಸುವುದರಿಂದ ಆರಂಭಿಕ ಹಂತದಲ್ಲೇ ಸರ್ವಿಕಲ್ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಹುದು.
ನಿಮಗೆ ಗೊತ್ತಾ?
* ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ 85 ಪ್ರತಿಶತದಷ್ಟು ಜನ ಸರ್ವಿಕಲ್ ಕಾನ್ಸರ್ ಗೆ ತುತ್ತಾಗುತ್ತಾರೆ (ವಿಶ್ವಾದ್ಯಂತ ಅಂದಾಜು 473,000 ಪ್ರಕರಣ) ಮತ್ತು ಪ್ರತಿವರ್ಷ ಸರ್ವಿಕಲ್ ಕಾನ್ಸರ್ ನಿಂದ ಸಾವಿಗೀಡಾಗುತ್ತಾರೆ (ವಿಶ್ವಾದ್ಯಂತ ಅಂದಾಜು 253,500).
* ಕಾನ್ಸರ್‌ನಿಂದ ಉಂಟಾಗುವ ಸಾವುಗಳಿಗೆ ಕಾರಣವಾಗಿರುವ ಕಾನ್ಸರ್ ಗಳಲ್ಲಿ ಸರ್ವಿಕಲ್ ಕಾನ್ಸರ್ ಗೆ ಪ್ರಥಮ ಸ್ಥಾನ.
* ನಿಯಮಿತವಾಗಿ ಪ್ಯಾಪ್ ಸ್ಮಿಯರ್ ಟೆಸ್ಟ್ ಮಾಡಿಸದೇ ಇರುವುದು ಸರ್ವಿಕಲ್ ಕ್ಯಾನ್ಸರ್ ತೀವ್ರ ಸ್ವರೂಪ ಹೊಂದಲು ಕಾರಣವಾಗಬಲ್ಲುದು.
* ವಿಶ್ವಾದ್ಯಂತದಲ್ಲಿ ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್ ಗಳಲ್ಲಿ ಸರ್ವಿಕಲ್ ಕಾನ್ಸರ್ ಎರಡನೇಯದು. ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು ಐದು ಲಕ್ಷ ಮಹಿಳೆಯರು ಈ ರೋಗಕ್ಕೆ ತುತ್ತಾಗಿರುವುದು ಪತ್ತೆಯಾಗುತ್ತಿದೆ.
* ಸರ್ವಿಕಲ್ ಕಾನ್ಸರ್ ಸೂಕ್ತ ಸಮಯದಲ್ಲಿ ಪತ್ತೆ ಹಚ್ಚದಿದ್ದಲ್ಲಿ ಮಹಿಳೆ ಗರ್ಭಧರಿಸುವುದು ಸಾಧ್ಯವಿಲ್ಲ. ಪ್ರಾಥಮಿಕ ಹಂತದಲ್ಲೆ ಪತ್ತೆ ಹಚ್ಚಿದಲ್ಲಿ ಸೂಕ್ತ ಚಿಕೆತ್ಸೆಯ ನಂತರ ಗರ್ಭಧರಿಸುವುದು ಸಾಧ್ಯವಾಗಬಹುದು.
ಏನಿದು ಪ್ಯಾಪ್ ಸ್ಮಿಯರ್ ಟೆಸ್ಟ್?
ಪ್ಯಾಪ್ ಸ್ಮಿಯರ್ ಟೆಸ್ಟ್ ಎಂದರೆ ಯೋನಿ ಮತ್ತು ಸರ್ವಿಕ್ಸ್‌ನಲ್ಲಿರುವ ಸೆಲ್‌ಗಳನ್ನು ಪರೀಕ್ಷಿಸಲು ಮಾಡಲಾಗುವ ಪರೀಕ್ಷೆ.(ಸರ್ವಿಕ್ಸ್ ಎಂದರೆ ಯೋನಿಯ ಸಂಪರ್ಕಕ್ಕೆ ಬರುವ ಗರ್ಭಕೋಶದ ಕೆಳಭಾಗ ಅಥವಾ ಗರ್ಭಕೊರಳು.) ಪ್ಯಾಪ್ ಟೆಸ್ಟ್‌ನ ಮೂಲಕ ಸೆಲ್‌ಗಳನ್ನು ಪರೀಕ್ಷಿಸಿ ಕ್ಯಾನ್ಸರ್ ಇರುವಂತಹ ಅಥವಾ ಕ್ಯಾನ್ಸರ್‌ಗೆ ಮೊದಲು ಇರುವಂತಹ ರೋಗ ಲಕ್ಷಣಗಳನ್ನು ಪತ್ತೆಹಚ್ಚಬಹುದು. ಸರ್ವಿಕಲ್ ಕ್ಯಾನ್ಸರ್ ಪತ್ತೆ ಹಚ್ಚುವಲ್ಲಿ ಪ್ಯಾಪ್ ಸ್ಮಿಯರ್ ಟೆಸ್ಟ್ ಪ್ರಮುಖ ವಿಧಾನ.
18ನೇ ವಯೋಮಾನದ ನಂತರ ಅಥವಾ ಮಹಿಳೆ ಪ್ರಬುದ್ಧಳಾದ ನಂತರದಿಂದ ಪ್ಯಾಪ್ ಸ್ಮಿಯರ್ ಟೆಸ್ಟ್ ಅನ್ನು ನಿಯಮಿತವಾಗಿ ಮಾಡಿಸಬೇಕು. ಋತುಚಕ್ರ ಕೊನೆಗೊಂಡ ನಂತರವೂ ಮಹಿಳೆಯರು ಪ್ಯಾಪ್ ಟೆಸ್ಟ್ ಅನ್ನು ಮುಂದುವರೆಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ಮೆಟ್ರೊಪಾಲೀಸ್ ಹೆಲ್ತ್ ಸರ್ವೀಸಸ್ ಸಂಸ್ಥೆಯು ಸರ್ವಿಕಲ್ ಕಾನ್ಸರ್ ಪತ್ತೆಹಚ್ಚಲು ಪ್ಯಾಪ್ ಸ್ಮಿಯರ್(Pap smear) ಟೆಸ್ಟ್ ನಡೆಸುತ್ತವೆ. ಇದಲ್ಲದೆ ಸಂಸ್ಥೆಯು ಎಚ್‌ಪಿವಿ ಮತ್ತು ಡಿಎನ್‌ಎ ಪರೀಕ್ಷೆಯನ್ನೂ ನಡೆಸುತ್ತದೆ.
ಹೆಲ್ಪ್‌ಲೈನ್: 022 - 6650 5555
ಪ್ಯಾಪ್ ಟೆಸ್ಟ್ ಅನ್ನು ಎಷ್ಟು ಸಲ ಮಾಡಿಸಬೇಕು?
* ಯಾವಾಗಲೂ ನಿಮ್ಮ ವೈದ್ಯರಲ್ಲಿ ಸಮಾಲೋಚನೆ ನಡೆಸಿ.
* ನೀವು 30ರ ಒಳಗಿನ ವಯೋಮಾನದವರಾಗಿದ್ದರೆ ನೀವು ವರ್ಷಕ್ಕೆ ಒಂದು ಬಾರಿ ಪ್ಯಾಪ್ ಟೆಸ್ಟ್ ಮಾಡಿಸಬೇಕು.
* ನಿಮ್ಮ ವಯಸ್ಸು 30 ಅಥವಾ ಮೇಲ್ಪಟ್ಟಿದ್ದರೆ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಪ್ಯಾಪ್ ಟೆಸ್ಟ್ ನಡೆಸುವ ಬಗ್ಗೆ ನಿಮ್ಮ ವೈದರಲ್ಲಿ ಚರ್ಚಿಸಿ.
*ನಿಮ್ಮ ವಯಸ್ಸು 65 ರಿಂದ 70 ಆಗಿದ್ದು ಕಳೆದ 10 ವರ್ಷಗಳಿಂದ ನಿಮ್ಮ ಟೆಸ್ಟ್ ವರದಿ ಸಾಮಾನ್ಯವಾಗಿದ್ದರೆ ನಿಮ್ಮ ವೈದರಲ್ಲಿ ಪ್ಯಾಪ್ ಟೆಸ್ಟ್ ನಿಲ್ಲಿಸುವ ಬಗ್ಗೆ ಚರ್ಚಿಸಿ.
* ನಿಮ್ಮ ವಯಸ್ಸು ಎಷ್ಟೇ ಆಗಿರಲಿ, ನಿಮ್ಮಲ್ಲಿ ಈ ಕೆಳಗಿನ ಲಕ್ಷಣಗಳಿದ್ದಲ್ಲಿ ನೀವು ಪ್ರತಿವರ್ಷ ಪ್ಯಾಪ್ ಟೆಸ್ಟ್ ಗೆ ಒಳಗಾಗಬೇಕು:
* ಅಂಗ ಕಸಿ , ಕಿಮೊಥೆರಪಿ ಅಥವಾ ಸ್ಟೀರಾಯಿಡ್ ಬಳಕೆಗೆ ಒಳಗಾಗಿ ನಿಮ್ಮ ರೋಗನಿರೋಧಕ ಶಕ್ತಿ ಕುಗ್ಗಿದ್ದರೆ
* ನಿಮ್ಮ ತಾಯಿ ಗರ್ಭದಾರಣೆಯ ಸಂದರ್ಭ ಡಿಇಎಸ್ ಗೆ ಒಳಗಾಗಿದ್ದರೆ
* ನೀವು ಎಚ್ಐವಿ ಪಾಸಿಟಿವ್ ಆಗಿದ್ದರೆ
ಕ್ಯಾನ್ಸರ್ ಎದುರಿಸಲು ಯಾರೊಬ್ಬರೂ ಸನ್ನದ್ಧರಾಗಿರುವುದು ಸಾಧ್ಯವಿಲ್ಲ. ಆದರೆ ನಿಮಗೆ ಉಂಟಾಗುವ ಆಘಾತ ಮತ್ತು ಭಯವನ್ನು ನಿವಾರಿಸಲು ನೀವು ಕೆಲವು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬಹುದು.
ಸರ್ವಿಕಲ್ ಕ್ಯಾನ್ಸರ್‌ನ ಲಕ್ಷಣಗಳು
* ಯೋನಿ ಸ್ರವಿಕೆ ಅಥವಾ ರಕ್ತಸ್ರಾವ ಅಥವಾ ಆಕಾಲಿಕ ಋತುಸ್ರಾವ
* ಲೈಂಗಿಕ ಕ್ರೀಯೆಯ ಸಂದರ್ಭ ರಕ್ತಸ್ರಾವ
* ಲೈಂಗಿಕ ಕ್ರೀಯೆಯ ಸಂದರ್ಭ ನೋವು
* ರಕ್ತವರ್ಣದ ಯೋನಿ ಸ್ರವಿಕೆ
* ಕಿಬ್ಬೊಟ್ಟೆ ನೋವು
* ಸಾಮಾನ್ಯವಲ್ಲದ ಆಧಿಕಸ್ರಾವ
* ದುರ್ವಾಸನೆಯ ಯೋನಿ ಸ್ರಾವ.