Select Your Language

Notifications

webdunia
webdunia
webdunia
webdunia

ಮಲೇರಿಯಾ ನಿಯಂತ್ರಣಕ್ಕೆ ಹೊಸ ವೈರಸ್!

ಮಲೇರಿಯಾ ವೈರಸ್ ಅನಾಫಿಲಿಸ್
ಮಲೇರಿಯಾ ರೋಗ ಹರಡುವ ಸೊಳ್ಳೆಗೇ ಸೋಂಕು ತಗುಲಿಸಬಹುದಾದ ವೈರಸ್ ಒಂದನ್ನು ನ್ಯೂಯಾರ್ಕ್ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಮಲೇರಿಯಾ ವೈರಸ್ಸನ್ನು ಹರಡುವ ಅನಾಫಿಲಿಸ್ ಗ್ಯಾಂಬೀ ಎಂಬ ಜಾತಿಯ ಸೊಳ್ಳೆಗೆ ಸೋಂಕು ತಗುಲಿಸುವ AgDNV ಅಥವಾ 'ಡೆನ್ಸೋವೈರಸ್' ಪತ್ತೆಯಾಗಿದ್ದು, ಅದರ ವಂಶವಾಹಿ ಮಾಹಿತಿಗಳು, ವಿಶ್ವಾದ್ಯಂತ ಸಾವಿರಾರು ಜನರನ್ನು ಪ್ರತಿವರ್ಷ ಬಲಿತೆಗೆದುಕೊಳ್ಳುತ್ತಿರುವ ಮಲೇರಿಯಾ ನಿಯಂತ್ರಣ ಕುರಿತ ಸಂಶೋಧನೆಗಳಿಗೆ ನೆರವಾಗಲಿದೆ ಎಂಬುದು ಸಂಶೋಧಕರ ವಿಶ್ವಾಸ.

ವಾಸ್ತವವಾಗಿ ಡೆನ್ಸೋವೈರಸ್, ಸೊಳ್ಳೆ ಮತ್ತಿತರ ಕೀಟಗಳಿಗೆ ಸಾಮಾನ್ಯವಾಗಿ ಬಾಧಿಸುತ್ತದೆ. ಆದರೆ ಮಾನವನಂತಹ ಕಶೇರುಕ ಪ್ರಾಣಿಗಳನ್ನು ಅದು ಬಾಧಿಸುವುದಿಲ್ಲ. ಈ ವೈರಸ್, ಸೊಳ್ಳೆಗಳಿಗೆ ಯಾವುದೇ ಹಾನಿ ಮಾಡುವಂತೆ ತೋರುತ್ತಿಲ್ಲವಾದರೂ, ಇದು ಸೊಳ್ಳೆಯ ಲಾರ್ವಾಕ್ಕೆ ಬಾಧಿತವಾಗುತ್ತದೆ ಮತ್ತು ಮಾನವದೇಹವನ್ನೂ ಪ್ರವೇಶಿಸಬಹುದಾಗಿದೆ ಎನ್ನುತ್ತಾರೆ ಜಾನ್ಸ್ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು.

ಜೇಸನ್ ರಾಗ್ಸನ್ ನೇತೃತ್ವದ ವಿಜ್ಞಾನಿಗಳು ತಂಡವು ನಡೆಸಿದ ಸಂಶೋಧನಾ ವರದಿಯ ಪ್ರಕಾರ, ಅನಾಫಿಲಿಸ್ ಗ್ಯಾಂಬೀ ಸೊಳ್ಳೆಯ ಕೋಶಗಳಿಗೆ ಸೋಂಕು ತಗುಲಿಸಲು ವೋಲ್ಬಾಚಿಯಾ ಎಂಬ ಬ್ಯಾಕ್ಟೀರಿಯಾಗಳನ್ನು ಬಳಸಬಹುದೇ ಎಂಬ ಸಂಶೋಧನೆಯಲ್ಲಿ ನಿರತವಾಗಿದ್ದಾಗ, ಆಕಸ್ಮಿಕವಾಗಿ 'ಡೆನೋವೈರಸ್' ಪತ್ತೆಯಾಗಿದೆ. ಇದು ಆಗಾಗ್ಗೆ ಕಾಣಿಸಿಕೊಂಡ ಕಾರಣದಿಂದ ನಾವು ಇದರ ಮೇಲೆಯೇ ಸಂಶೋಧನೆ ಮಾಡಿದೆವು. ಇದೊಂದು ಹೊಸ ವೈರಸ್ ಎಂದು ತಿಳಿದಾಗ ನಮಗೇ ಅಚ್ಚರಿಯಾಯಿತು ಎಂದು ಸಂಶೋಧಕರು ಹೇಳಿದ್ದು, ಹೊಸ ವೈರಸ್ಸನ್ನು ಸೊಳ್ಳೆಗಳನ್ನು ಕೊಲ್ಲುವಂತೆ ಬದಲಾಯಿಸಬಹುದು ಇಲ್ಲವೇ, ಮಲೇರಿಯಾ ಹರಡದಂತೆ ಮಾಡುವ ಸಾಧ್ಯತೆಗಳ ಕುರಿತು ಸಂಶೋಧನೆ ಮಾಡಲಾಗುತ್ತದೆ ಎಂದಿದ್ದಾರೆ.

ಈ ವೈರಸ್ ಬಳಸಿ ಸೊಳ್ಳೆಯಲ್ಲಿಯೇ ವಿಷಕಾರಿ ಪದಾರ್ಥವನ್ನು ಉತ್ಪಾದಿಸಬಹುದು ಮತ್ತು ಮಲೇರಿಯಾವನ್ನು ಮಾನವರಿಗೆ ಹರಡುವ ಮುನ್ನ, ಅಂದರೆ ಸೊಳ್ಳೆ ಹುಟ್ಟಿದ 10 ದಿನದೊಳಗೆ ಸಾಯುವಂತೆ ಪರಿವರ್ತಿಸಬಹುದು. ಆದರೆ ಇದಕ್ಕೆ ಇನ್ನೂ ಸಾಕಷ್ಟು ವರ್ಷಗಳು ಬೇಕು ಎಂದೂ ಅವರು ಹೇಳಿದ್ದಾರೆ.

Share this Story:

Follow Webdunia kannada