Select Your Language

Notifications

webdunia
webdunia
webdunia
webdunia

ಮಗುವಿನ ಕೆಮ್ಮು ಶಮನಕ್ಕೆ ಜೇನುತುಪ್ಪ

ನಿದ್ರೆ
ಚಿಕಾಗೊ , ಮಂಗಳವಾರ, 4 ಡಿಸೆಂಬರ್ 2007 (19:57 IST)
WD
ಹಾಸಿಗೆಯಲ್ಲಿ ಮಗು ಮಲಗುವುದಕ್ಕೆ ಮುಂಚೆ ಒಂದು ಚಮಚ ಜೇನುತುಪ್ಪ ಕುಡಿಸಿದರೆ ಮಕ್ಕಳು ಸುಖವಾಗಿ ನಿದ್ರೆ ಮಾಡುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಜೇನುತುಪ್ಪ ಮಕ್ಕಳಿಗೆ ಕುಡಿಸಬೇಕೆಂದು ಅಜ್ಜಿ ಹೇಳುತ್ತಿದ್ದ ಮಾತು ನಿಜವಾಗಿದೆ ಎಂದು ಈಗ ಅನೇಕ ಕುಟುಂಬಗಳು ಉದ್ಗರಿಸಿವೆ.

"ಮಕ್ಕಳ ಮತ್ತು ಹದಿವಯಸ್ಕರ ಔಷಧಿ" ಎಂಬ ಮ್ಯಾಗಜಿನ್‌ನ ಡಿಸೆಂಬರ್ ಸಂಚಿಕೆಯಲ್ಲಿ ಈ ವಿಷಯ ಪ್ರಕಟವಾಗಿದೆ. 6 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಅತಿಯಾದ ಕೆಮ್ಮು ಮತ್ತು ಶೀತದ ವಿರುದ್ಧ ಔಷಧಿಗಳನ್ನು ಕೊಡಬಾರದು ಎಂದು ಅಮೆರಿಕದ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಕೆಲವು ಔಷಧಿ ಉತ್ಪಾದಕರು ಅಮೆರಿಕದ ಮಾರುಕಟ್ಟೆಯಿಂದ ತಮ್ಮ ಉತ್ಪನ್ನಗಳನ್ನು ಹಿಂಪಡೆದಿದ್ದಾರೆ.

ಪರ್ಯಾಯ ಔಷಧಿಯಾಗಿ ಜೇನುತುಪ್ಪವನ್ನು ಪ್ರಯತ್ನಿಸಲು ಮಕ್ಕಳ ತಜ್ಞರು ಪೋಷಕರಿಗೆ ಸಲಹೆ ಮಾಡಿದ್ದಾರೆ.ಸಂಶೋಧಕರು ಪೆನ್ಸಿಲ್ವೇನಿಯಾ ಕ್ಲಿನಿಕ್‌ನಿಂದ ಉಸಿರಾಟದ ಸೋಂಕಿಗೆ ಒಳಗಾದ 105 ಮಕ್ಕಳನ್ನು ಆಯ್ದುಕೊಂಡರು. ಪೋಷಕರಿಗೆ ಔಷಧ ಸಾಮಗ್ರಿಯಿರುವ ಪೇಪರ್ ಚೀಲ ನೀಡಲಾಯಿತು. ಅವುಗಳಲ್ಲಿ ಕೆಲವು ಖಾಲಿಯಾಗಿತ್ತು. ಕೆಲವು ವಯೋಮಾನಕ್ಕೆ ಸೂಕ್ತವಾದ ಚೇನುತುಪ್ಪದ ಸುವಾಸನೆಯ ಡೆಕ್ಸ್ಟ್ರೋಮೆಥೋರ್ಫಾನ್ ಹೊಂದಿರುವ ಕೆಮ್ಮಿನ ಔಷಧಿ ಹೊಂದಿತ್ತು.

ಇನ್ನೂ ಕೆಲವು ಜೇನುತುಪ್ಪದ ಡೋಸ್ ಹೊಂದಿದ್ದವು. ಮಕ್ಕಳ ನಿದ್ರೆ ಮತ್ತು ಕೆಮ್ಮಿನ ಲಕ್ಷಣಗಳನ್ನು ಹಾಸಿಗೆಯಲ್ಲಿ ಮಲಗುವುದಕ್ಕೆ ಮುನ್ನ ಮತ್ತು ಬಳಿಕ ಗಮನಿಸಲು ಪೋಷಕರಿಗೆ ತಿಳಿಸಲಾಯಿತು. ಜೇನುತುಪ್ಪ ಕುಡಿದ ಮಗುವಿನಲ್ಲಿ ಕೆಮ್ಮಿನ ಲಕ್ಷಣಗಳು ಬೇರೆ ಮಕ್ಕಳಿಗಿಂತ ಇಳಿಮುಖವಾಗಿದ್ದು ಕಂಡುಬಂತು.

ಇದರಿಂದ ಒಂದು ಚಮಚ ಜೇನುತುಪ್ಪದಿಂದ ಮಕ್ಕಳ ಕೆಮ್ಮು ಉಪಶಮನವಾಗುತ್ತದೆಂಬುದು ಸಂಶೋಧನೆಯಿಂದ ಪತ್ತೆಯಾಯಿತು. ಆದರೆ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜೇನುತುಪ್ಪ ಕೊಡುವುದರಿಂದ ಅಜೀರ್ಣ ಉಂಟಾಗುವ ಸಂಭವವಿದ್ದು ಅದನ್ನು ಕೊಡಬಾರದೆಂದು ವೈದ್ಯರು ಎಚ್ಚರಿಸಿದ್ದಾರೆ.

Share this Story:

Follow Webdunia kannada