Select Your Language

Notifications

webdunia
webdunia
webdunia
webdunia

ಬೊಜ್ಜು ದೇಹದವರು ಮೆಣಸುತಿನ್ನಬೇಕಂತೆ‍!

ಮೆಣಸು

ಇಳಯರಾಜ

Bharadwaj
ಉಪ್ಪುಖಾರ ಅತಿಯಾದರೆ ಆರೋಗ್ಯಕ್ಕೆ ಹಿತವಲ್ಲ ಅನ್ನುವವರಿದ್ದಾರೆ. ಆದರೆ ಇಲ್ಲೊಂದು ಅಧ್ಯಯನ ವರದಿ ನೋಡಿ. ಭಾರೀ ಬೊಜ್ಜು ದೇಹದ ಠೊಣಪರು ಮೆಣಸು ತಿಂದರೆ ಬೊಜ್ಜುಕರಗುತ್ತದಂತೆ.

ತೈವಾನ್‌ನ ರಾಷ್ಟ್ರೀಯ ಚಂಗ್ ಹ್ಸಿಂಗ್ ವಿಶ್ವವಿದ್ಯಾನಿಲಯದ ಗವ್ ಚಿನ್ ಯೆನ್ ಹಾಗೂ ಚಿನ್-ಲಿನ್ ಹ್ಸು ಅವರುಗಳು ನಡೆಸಿರುವ ಹೊಸ ಅಧ್ಯಯನವು ಮೆಣಸಿನ ಕಾಯಲ್ಲಿ ಕೊಬ್ಬನ್ನು ಕರಗಿಸುವ ಅಂಶಗಳಿವೆ ಎಂಬುದಾಗಿ ತಿಳಿಸಿದೆ.

ಮೆಣಸಿನಲ್ಲಿರುವ ಖಾರ ಕೊಬ್ಬಿನಾಂಶದ ಜೀವಕೊಶಗಳನ್ನು ಕರಗಿಸುತ್ತದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.ಕೃಷಿ ಮತ್ತು ಆಹಾರ ರಾಸಾಯನಿಕ ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.ಪ್ರಾಚೀನ ಕಾಲದಿಂದಲೇ ಸಂಬಾರ ಪದಾರ್ಥಗಳನ್ನು ರೋಗನಿರೋಧಕಗಳನ್ನಾಗಿ ಮತ್ತು ಕಾಲರಾ ರೋಗಕ್ಕೆ ಚಿಕಿತ್ಸೆಗಾಗಿ ಬಳಸಿಕೊಳ್ಳತ್ತಿದ್ದರು ಎಂಬುದನ್ನು ಸ್ಮರಿಸಬಹುದಾಗಿದೆ.

Share this Story:

Follow Webdunia kannada