ಪರೋಕ್ಷ ಧೂಮಪಾನವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಕಾರಣ ಬಹುತೇಕ ಭಾರತೀಯರು ಇನ್ನಷ್ಟು ಧೂಮಪಾನ ರಹಿತ ವಲಯಗಳ ಜಾರಿಗೆ ಒಲವು ವ್ಯಕ್ತಪಡಿಸುತ್ತಾರೆ ಎಂಬುದಾಗಿ ಸಮೀಕ್ಷೆಯೊಂದು ಹೇಳಿದೆ.
ನವಿ ಮುಂಬೈಯ ಹೀಲಿಸ್ ಸೆಕ್ಸಾರಿಯಾ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ ಈ ಅಂಶ ವ್ಯಕ್ತವಾಗಿದೆ.
ಧೂಮಪಾನ ಮುಕ್ತ ನೀತಿಗಳಿಗೆ ವ್ಯಕ್ತವಾಗಿರುವ ಬೆಂಬಲವು, ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕಚೇರಿಗಳಲ್ಲಿ ಧೂಮಪಾನ ನಿಷೇಧವನ್ನು ನಿಯಂತ್ರಿಸುವಂತಹ ಕ್ರಮಕ್ಕೆ ಸಾರ್ವತ್ರಿಕ ಬೆಂಬಲ ಸಮೀಕ್ಷೆ ವೇಳೆಗೆ ವ್ಯಕ್ತವಾಗಿದೆ ಎಂಬುದಾಗಿ ಹೀಲಿಯಸ್‌ನ ನಿರ್ದೇಶಕ ಪಿ.ಸಿ.ಗುಪ್ತಾ ಹೇಳಿದ್ದಾರೆ.
ಈ ತಂಬಾಕು ನಿಯಂತ್ರಣ ನೀತಿಗಳು ಧೂಮಪಾನಿಗಳಲ್ಲದವರನ್ನು ಪರೋಕ್ಷ ಧೂಮಪಾನದಿಂದ ರಕ್ಷಿಸುವುದಲ್ಲದೆ, ಧೂಮಪಾನಿಗಳ ತಂಬಾಕು ಸೇವನೆಯನ್ನು ತಗ್ಗಿಸುತ್ತದೆ.
ಭಾರತದಲ್ಲಿ ಸುಮಾರು 12 ಕೋಟಿ ಧೂಮಪಾನಿಗಳಿದ್ದಾರೆ. ಅಕ್ಪೋಬರ್ 2ರಿಂದ ಸಾರ್ವಜನಿಕ ಸ್ಥಳಗಳು ಮತ್ತು ಕಚೇರಿಗಳಲ್ಲಿ ಧೂಮಪಾನವನ್ನು ಕೇಂದ್ರ ಆರೋಗ್ಯ ಸಚಿವಾಲಯವು ನಿಷೇಧಿಸಿದೆ.