Select Your Language

Notifications

webdunia
webdunia
webdunia
webdunia

ಪತಿಯ ಮಧುಮೇಹವೂ ಗರ್ಭಪಾತಕ್ಕೆ ಕಾರಣ

ಮಧುಮೇಹ
ND
ಪುರುಷರ ಸಕ್ಕರೆ ಕಾಯಿಲೆ ಹೊಂದಿದ್ದಲ್ಲಿ ಇದು ಅವರ ವೀರ್ಯದ ಗುಣಮಟ್ಟದ ಪ್ರಭಾವ ಬೀರುವುದಲ್ಲದೆ, ಇವರಿಂದ ಗರ್ಭಧರಿಸಿರುವ ಗರ್ಭವತಿಯರು, ಗರ್ಭ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಯನ ಒಂದು ತಿಳಿಸಿದೆ.

ಸಂಶೋಧಕ ಡಾ| ಕಾನ್ ಮಾಲಿಡಿಸ್ ಅವರು "ಹೆಚ್ಚೆಚ್ಚು ಯುವ ವಯಸ್ಸಿನ ವ್ಯಕ್ತಿಗಳಲ್ಲಿ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಪತ್ತೆಯಾಗುತ್ತಿರುವುದು ಅಪಾಯಕಾರಿಯಾಗದಿದೆ" ಎಂದು ಅಭಿಪ್ರಾಯಿಸಿದ್ದಾರೆ. "ಇದರ ಪರಿಣಾಮವಾಗಿ ಸಂತಾನೋತ್ಪತ್ತಿ ಶಕ್ತ ವಯಸ್ಸಿನಲ್ಲಿ ಡಯಾಬಿಟಿಸ್ ಹೊಂದಿರುವವರ ಸಂಖ್ಯೆ ಆಧಿಕವಾಗಿದೆ" ಎಂದೂ ಅವರು ಸೇರಿಸಿದರು.

ಸಹ ಅಧ್ಯಯನಕಾರ ಪ್ರೊಫೆಸರ್ ನೀಲ್ ಮ್ಯಾಕ್ ಕ್ಲೂರ್ ಅವರು ವ್ಯಕ್ತಿಯ ಅರೋಗ್ಯವು ಆತನ ಫಲವತ್ತತೆಯ ಮೇಲೆ ಖಂಡಿತವಾಗಿ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ.

ಅವರು "ಬಹಳ ಸಮಯದಿಂದ ಸಾಮಾನ್ಯ ಅರೋಗ್ಯವು ಪುರುಷರ ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತದೆ ಎಂಬ ಅಂಶವನ್ನು ನಿರ್ಲಕ್ಷಿಸಲಾಗಿತ್ತು" ಎಂದಿದ್ದಾರೆ. "ಕೆಲವೇ ತಪಸಣಾ ಕೇಂದ್ರಗಳು ಬಂಜೆತನದ ಕುರಿತು ಮಹಿಳೆಯರತ್ತಲೇ ಗಮನ ಕೇಂದ್ರೀಕರಿಸುವ ಜೊತೆಗೆ ಪುರುಷರ ಕುರಿತೂ ವಿಸ್ತೃತ ಮಾಹಿತಿ ಪಡೆಯುತ್ತವೆ" ಎಂಬ ಅಂಶವನ್ನು ಹೊರಗೆಡಹಿದ್ದಾರೆ.

ಇಂತಹ ವಿಭಾಗಗಳಲ್ಲಿ ದುಡಿಯುತ್ತಿರುವವರು ಪುರುಷರಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಮತ್ತು ಅವರು ಉತ್ತಮ ದೇಹ ರಚನೆ ಹಾಗು ಅರೋಗ್ಯವನ್ನು ಹೊಂದಿರುವರೆಂದು ದೃಢಪಡಿಸುವ ಮೂಲಕ ಯಶಸ್ವಿ ಗರ್ಭಧಾರಣೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು." ಎಂದು ಪ್ರೊಫೆಸರ್ ನೈಲ್ ಮ್ಯಾಕ್ ಕ್ಲೂರ್ ತಿಳಿಸಿದ್ದಾರೆ.

Share this Story:

Follow Webdunia kannada