ಅಪರೂಪದ ವರ್ಗಕ್ಕೆ ಸೇರಿದ ನೆಗೆಟಿವ್ ರಕ್ತದ ಗುಂಪಿನ ಜನರ ನೆರವಿಗಾಗಿ ಕೋಲ್ಕತ್ತಾದ ಸರ್ಕಾರೇತರ ಸಂಸ್ಥೆಯೊಂದು ಕ್ಲಬ್ವೊಂದನ್ನು ತೆರೆದಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಅಪರೂಪದ ರಕ್ತದ ಗುಂಪಿಗೆ ಸೇರಿದವರಿಗೆ ರಕ್ತದಾನ ಮಾಡುವುದು ಕಷ್ಟವಾದ್ದರಿಂದ ಮೆಡಿಕಲ್ ಬ್ಯಾಂಕ್ ಎಂಬ ಈ ಎನ್ಜಿಒ ನೆಗೆಟಿವ್ ರಕ್ತ ಗುಂಪಿನ ಕ್ಲಬ್ ತೆರೆದಿದೆ. ಸರಾಸರಿ 4000 ಜನರಲ್ಲಿ ಒಬ್ಬರು ಎಬಿ ನೆಗೆಟಿವ್ ರಕ್ತದ ಗುಂಪು ಹೊಂದಿರುತ್ತಾರೆ.
ಎ, ಬಿ ಅಥವಾ ಒ ರಕ್ತದ ಗುಂಪಿನ ನಿಷ್ಪತ್ತಿ 1:1000ದಷ್ಟಿದೆ. ಅಪರೂಪದ ರಕ್ತದ ಗುಂಪಿಗೆ ಸೇರಿದವರಿಗೆ ರಕ್ತದ ಅಗತ್ಯಬೀಳುವಂತ ತುರ್ತು ಸಂದರ್ಭಗಳಲ್ಲಿ ಘೋರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಈ ಬಿಕ್ಕಟ್ಟು ನಿವಾರಿಸುವುದು ಕ್ಲಬ್ ಗುರಿಯಾಗಿದೆ ಎಂದು ಸದಸ್ಯೆ ಸುತಾಪಾ ಚಕ್ರವರ್ತಿ ಹೇಳಿದ್ದಾರೆ .
ಆರ್ಎಚ್ ನಕಾರಾತ್ಮಕ ರಕ್ತದ ಗುಂಪು ಅಪರೂಪದ ವರ್ಗಕ್ಕೆ ಸೇರಿದ್ದು, ತುರ್ತು ಸಂದರ್ಭಗಳಲ್ಲಿ ಅವುಗಳನ್ನು ಪಡೆಯುವುದು ಕಷ್ಟವಾಗುತ್ತದಾದ್ದರಿಂದ ಅಂತಾರಾಷ್ಟ್ರೀಯ ರಕ್ತದಾನಿಗಳ ದಿನವಾದ 2007 ಜೂನ್ 14ರಂದು ನೆಗೆಟಿವ್ ರಕ್ತ ಹೊಂದಿದವರ ಸಂಘಟನೆಯನ್ನು ಆರಂಭಿಸಲು ಮೆಡಿಕಲ್ ಬ್ಯಾಂಕ್ಗೆ ಪ್ರೇರಣೆ ನೀಡಿತು.
ಎ-, ಬಿ-, ಎಬಿ-, ಅಥವಾ ಒ- ಯಾವುದೇ ಗುಂಪಾಗಿರಲಿ ನೆಗೆಟಿವ್ ಗುಂಪಿನ ರಕ್ತ ಪಡೆಯುವುದು ಕಷ್ಟದ ಕೆಲಸ.ಅದರ ಅಗತ್ಯ ಬಿದ್ದಾಗಲೇ ಅದನ್ನು ಹುಡುಕುವಲ್ಲಿರುವ ಕಷ್ಟ ಗೊತ್ತಾಗುತ್ತದೆ ಎಂದು ಮೆಡಿಕಲ್ ಬ್ಯಾಂಕ್ ನಿರ್ದೇಶಕ ಆಶೀಶ್ ಹೇಳುತ್ತಾರೆ. ನೆಗೆಟಿವ್ ರಕ್ತದ ಗುಂಪಿನ ಸದಸ್ಯರು ಅಗತ್ಯಬಿದ್ದಾಗ ಪರಸ್ಪರ ರಕ್ತ ನೀಡುತ್ತಾರೆಂದು ಅವರು ನುಡಿದರು.
ಇಲ್ಲಿಯವರೆಗೆ 200 ವ್ಯಕ್ತಿಗಳು ನೆಗೆಟಿವ್ ರಕ್ತದ ಗುಂಪಿನ ಸದಸ್ಯರಾಗಿದ್ದಾರೆ. ನೆಗೆಟಿವ್ ರಕ್ತದ ಸಂಗ್ರಹಕ್ಕೆ ಕ್ಲಬ್ನ ಸದಸ್ಯರು ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಕೈಗೊಳ್ಳುತ್ತಾರೆ."
ತಾವು ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ತಮ್ಮದು ನೆಗೆಟಿವ್ ರಕ್ತದ ಗುಂಪೆಂದು ವೈದ್ಯರಿಗೆ ತಿಳಿದುಬಂತು. ನನ್ನ ರಕ್ತಕ್ಕೆ ಸರಿಹೊಂದುವ ರಕ್ತವನ್ನು ಪಡೆಯುವುದು ಸವಾಲಾಗಿ ಪರಿಣಮಿಸಿತು ಎಂದು ಕ್ಲಬ್ ಸದಸ್ಯೆ ಸುತಾಪಾ ಚಕ್ರವರ್ತಿ ಹೇಳಿದರು.
ಈ ಕ್ಲಬ್ ಬಗ್ಗೆ ಕೇಳಿದಾಗ ಅದಕ್ಕೆ ಸೇರಲು ನಾನು ನಿರ್ಧರಿಸಿದೆ. ಅದೊಂದು ಭದ್ರತೆಯ ಭಾವನೆಯನ್ನು ನನಗೆ ನೀಡುತ್ತದೆಂದು ಅವರು ಹೇಳಿ ಸದಸ್ಯರು ಒಂದು ಕುಟುಂಬದಂತೆ ಇದ್ದು, ನಾವು ಪರಸ್ಪರ ನೆರವಿಗೆ ಇದ್ದೇವೆಂದು ಅವರು ಹೇಳಿದರು. ನೆಗೆಟಿವ್ ರಕ್ತದ ಗುಂಪಿನ ಕ್ಲಬ್ 033-25540084 ಮತ್ತು 09831062157 ಈ ಸಂಖ್ಯೆಗಳ ಮೂಲಕ ಹೆಚ್ಚಿನ ಮಾಹಿತಿ ನೀಡುತ್ತದೆ.