Select Your Language

Notifications

webdunia
webdunia
webdunia
webdunia

ನೀವು 'ಚಿಂತಕ'ರೇ? ದಪ್ಪಾಗುವಿರಿ ಬಿಟ್ಟಾಕಿ!

ಆಲೋಚನೆ
ನೀವು ತುಂಬ ಆಲೋಚನೆ ಮಾಡುತ್ತಿರಾ? ಉತ್ತರ ಹೌದಾದರೆ ಒಸಿ ಇಲ್ಲಿ ಕೇಳಿ. ತುಂಬ ಚಿಂತಿಸುವುದು ಬೊಜ್ಜಿಗೆ ಕಾರಣವಂತೆ! ಹೇಗಂತಿರಾ?

ಹೀಂಗೈತಿ ನೋಡ್ರಿ - ಭೌದ್ಧಿಕ ಕೆಲಸದ ಒತ್ತಡವು ಜನರನ್ನು ಹೆಚ್ಚು ತಿನ್ನುವಂತೆ ಪ್ರಚೋದಿಸುತ್ತದೆ. ಇದರಿಂದಾಗಿ ಕ್ಯಾಲೋರಿ ಸೇವನೆ ಅಧಿಕವಾಗಿ ಇದು ಬೊಜ್ಜಿಗೆ ಕಾರಣ. ಹೀಗೆಂದು ಕೆನಡಾದ ಸಂಶೋಧಕರು ಹೇಳಿದ್ದಾರೆ. ಕ್ಯೂಬೆಕ್ ಸಿಟಿಯ ಲಾವಲ್ ವಿಶ್ವವಿದ್ಯಾನಿಲಯವು ನಡೆಸಿರುವ ಅಧ್ಯಯನ ಈ ಫಲಿತಾಂಶ ನೀಡಿದೆ.

ND
ಮೂರು ಸುಲಭದ ಆದರೆ ವಿವಿಧ ರೀತಿಯ ಕೆಲಸದ ಬಳಿಕ 14 ವಿದ್ಯಾರ್ಥಿಗಳಿಗೆ ಭೋಜನ ಸೇವಿಸಲು ಸಂಶೋಧಕರು ಹೇಳಿದರು. ಕುಳಿತುಕೊಂಡು ವಿಶ್ರಾಂತಿ ಪಡೆಯುವ ಮತ್ತು ಪಠ್ಯಒಂದರ ಸಾರಾಂಶ ಮಾಡುವ ಮತ್ತು ಕಂಪ್ಯೂಟರಿನಲ್ಲಿ ಸ್ಮರಣೆ ಪರೀಕ್ಷೆಯ ಮೂರು ಭಿನ್ನ ಕೆಲಸಗಳನ್ನು ಇವರಿಗೆ ವಹಿಸಲಾಗಿತ್ತು.

ಕುಳಿತು ವಿಶ್ರಾಂತಿ ಪಡೆದ ವಿದ್ಯಾರ್ಥಿಗಳು ಅತಿ ಕಡಿಮೆ ಕ್ಯಾಲೋರಿ ಸೇವಿಸಿದರು. ಆದರೆ, ಪಠ್ಯವನ್ನು ಓದಿ ಅದರ ಸಾರಾಂಶ ಸಂಗ್ರಹಿಸಿದ ವಿದ್ಯಾರ್ಥಿಗಳು 203 ಹೆಚ್ಚುವರಿ ಕ್ಯಾಲೊರಿ ಸೇವಿಸಿದರೆ, ಕಂಪ್ಯೂಟರಿನಲ್ಲಿ ಸ್ಮರಣೆ ಪರೀಕ್ಷೆಯ ಬಳಿಕ 253 ಹೆಚ್ಚುವರಿ ಕ್ಯಾಲೊರಿ ಸೇವಿಸಿದರು ಎಂದು ಅಧ್ಯಯನ ಹೇಳಿದೆ.

ಈ ಮೂರು ಕಾರ್ಯ ಪರೀಕ್ಷೆಯ ಮೊದಲು, ಪರೀಕ್ಷೆಯ ವೇಳೆ ಮತ್ತು ನಂತರ ಅವರ ರಕ್ತದ ಮಾದರಿಗಳನ್ನು ಪಡೆಯಲಾಗಿದ್ದು, ಮಾನಸಿಕ ಒತ್ತಡದ ಕೆಲಸದ ವೇಳೆ ಅವರ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟ ಹೆಚ್ಚಿರುವುದು ಕಂಡು ಬಂದಿತು.

ಯಾವುದೇ ಮಾನಸಿಕ ಅಥವಾ ಭೌದ್ಧಿಕ ಕಾರ್ಯದ ವೇಳೆಗೆ ಮೆದುಳಿಗೆ ಗ್ಲೂಕೋಸ್ ಇಂಧನದಂತೆ ಸರಬರಾಜಾಗುತ್ತದೆ ಎಂದು ಅಧ್ಯಯನ ತಂಡದ ನಾಯಕ ಜೀನ್ ಫಿಲಿಫ್ ಚಾಪುಟ್ ಹೇಳಿದ್ದಾರೆ.

ಈ ಅವಶ್ಯಕತೆಯನ್ನು ಸರಿದೂಗಿಸಲು ಮತ್ತು ಗ್ಲೂಕೋಸ್ ಸಮತೋಲನವನ್ನು ಸಮಸ್ಥಿತಿಯಲ್ಲಿಡಲು ದೇಹವು ಹೆಚ್ಚು ಆಹಾರ, ತನ್ಮೂಲಕ ಹೆಚ್ಚು ಕ್ಯಾಲೋರಿ ಸೇವಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ ಭೌದ್ಧಿಕ ಕಾರ್ಯವೆಸಗುವ ವೇಳೆಕೆ ದೈಹಿಕವಾಗಿ ಕ್ರಿಯಾಶೀಲವಾಗಿಲ್ಲದಿರುವುದೂ ಸಹ ಬೊಜ್ಜಿನ ಸಮಸ್ಯೆಗೆ ಕೊಡುಗೆ ನೀಡುತ್ತಿದ್ದು, ಔದ್ಯಮಿಕ ರಾಷ್ಟ್ರಗಳಲ್ಲಿ ಇದನ್ನು ಗಮನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಶ್ವಾದ್ಯಂತ ಹೆಚ್ಚೆಚ್ಚು ಮಂದಿ ಭೌದ್ಧಿಕ ಕಾರ್ಯಗಳಲ್ಲಿ ತೊಡಗುವ ಕಾರಣ ಭವಿಷ್ಯದಲ್ಲಿ ಬೊಜ್ಜಿನ ಸಮಸ್ಯೆ ಹತೋಟಿ ಮೀರಬಹುದು ಎಂದು ಚಾಪುಟ್ ಎಚ್ಚರಿಸಿದ್ದಾರೆ.

Share this Story:

Follow Webdunia kannada