Select Your Language

Notifications

webdunia
webdunia
webdunia
webdunia

ನಿದ್ರೆ ಮಾತ್ರೆ ಸೇವನೆ ಅಪಾಯಕರ

ನಿದ್ರೆ ಮಾತ್ರೆ
ಇಂದಿನ ಯಾಂತ್ರಿಕ ಯುಗದಲ್ಲಿ ಒತ್ತಡವೂ ಹೆಚ್ಚು. ಇದು ನಿದ್ರಾಹೀನತೆಗೆ ದಾರಿ ಮಾಡಿಕೊಡುತ್ತದೆ. ಹಾಸಿಗೆಯಲ್ಲಿ ಎಷ್ಟು ಉರುಳಾಡಿದರೂ ನಿದ್ದೆ ಬರುತ್ತಿಲ್ಲವಾದರೂ, ಅದೊಂದು ಕಾಯಿಲೆ ಎಂದು ಪರಿಗಣಿಸದೆ ಅದನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ.

ಆದರೆ ನಿದ್ದೆ ಬರುತ್ತಿಲ್ಲ ಎಂದು ನೇರವಾಗಿ ಔಷಧಿ ಅಂಗಡಿಗೆ ಹೋಗಿ ನಿದ್ದೆ ಮಾತ್ರೆ ಸೇವಿಸಿದರೆ ಏನಾಗುತ್ತದೆ? ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು.

ಅದು ತಾತ್ಕಾಲಿಕ ಶಮನ ತಂದರೂ ವೈದ್ಯರ ಸಲಹೆಯಿಲ್ಲದೆ ಮಾತ್ರೆ ಸೇವನೆ ಅಪಾಯಕಾರಿಯೇ. ಈ ರೀತಿ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿದ್ದೆ ಮಂಪರಿನಿಂದ ಆರಂಭಗೊಂಡು ತಲೆನೋವಿನವರೆಗೆ ಸಾಗುವ ಅಡ್ಡಪರಿಣಾಮಗಳು ಉಂಟಾಗುತ್ತವೆ. ಒಂದೆರಡು ದಿನಗಳ ಮಟ್ಟಿಗೆ ಎಂದು ಈ ನಿದ್ದೆ ಮಾತ್ರೆಗಳಿಗೆ ಮರೆ ಹೋಗುವುದು ಕ್ರಮೇಣ ಅಭ್ಯಾಸವಾಗಿ ರೂಪುಗೊಳ್ಳುತ್ತದೆ.

ಎಚ್ಚರತಪ್ಪುವಿಕೆ, ನೆನಪು ಕಳೆದುಕೊಳ್ಳುವುದು ಕೂಡ ಉಂಟಾಗುವುದಲ್ಲದೆ, ಇದರಿಂದ ವ್ಯಕ್ತಿತ್ವ ಮತ್ತು ಪ್ರತಿಕ್ರಿಯೆಯ ಸಕಾಲಿಕತೆ ಬದಲಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ನಿದ್ದೆ ಮಾತ್ರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಉಚಿತವಲ್ಲ.

ಆದ್ದರಿಂದ, ಕೌಂಟರಿನಲ್ಲಿ ದೊರೆಯುವ ಮಾತ್ರೆಗಳಿಂದ ಹಿಡಿದು ಎಲ್ಲಾ ನಿದ್ರೆ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು.

ಸಾಮಾನ್ಯವಾಗಿ ನಿದ್ರಾಹೀನತೆಯಿಂದ ಬಳಲುವವರು ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಅವರೂ ಕೂಡ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದಿರಬೇಕು ಎನ್ನುತ್ತದೆ ಇತ್ತೀಚಿನ ಸಂಶೋಧನೆ. ಆದುದರಿಂದ ಮಾತ್ರೆ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಅಗತ್ಯ.

Share this Story:

Follow Webdunia kannada