ಸಾಮಾಗ್ರಿ:
ಟೋಮೇಟೊ- 100 ಗ್ರಾಂ
ಇಂಗು- 1 ಚಿಟಿಕೆ
ಸಾಸಿವೆ-1/4 ಟೀ ಚಮಚ
ಮೊಸರು-1 ಕಪ್
ಉಪ್ಪು-1/4 ಟೀ ಚಮಚ
ಹಸಿಮೆಣಸು-4
ಕೊತ್ತಂಬರಿ ಸೊಪ್ಪು-1ಟೇಬಲ್ ಚಮಚ
ಎಣ್ಣೆ-1/2ಚಮಚ
ವಿಧಾನ:
ಟೋಮೇಟೊವನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿ.ಎಣ್ಣೆಯನ್ನು ಕುದಿಸಿ ಅದಕ್ಕೆ ಸಾಸಿವೆಯನ್ನು ಹಾಕಿ ಹುರಿಯಿರಿ.
ಅದು ಒಡೆಯಲು ಶುರುವಾಗುವಾಗ ಹಸಿಮೆಣಸು ,ಇಂಗು ,ಉಪ್ಪನ್ನು ಸೇರಿಸಿ ಹಿತವಾಗಿ ಹುರಿಯಿರಿ.
ಇದಕ್ಕೆ ಟೊಮಟೋ ತುಂಡುಗಳನ್ನು ಹಾಕಿ ಎರಡು ನಿಮಿಶಗಳ ಕಾಲ ಹುರಿಯಿರಿ.ಇದನ್ನು ಒಲೆಯಿಂದ ತೆಗೆದು ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ.ಇದಕ್ಕೆ ಕೊತ್ತಂಬರಿ ಎಲೆಗಳನ್ನು ಸೇರಿಸಿ ಬಿಸಿಯಾಗಿ ಚಪಾತಿಯೊಂದಿಗೆ ಬಡಿಸಿ.