Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಅತಿಹೆಚ್ಚು ಹೃದಯ ಸ್ತಂಭನ

ಚಳಿಗಾಲ
ಹೃದ್ರೋಗಿಗಳು ಚಳಿಗಾಲದಲ್ಲಿ ಸಾಧ್ಯವಿರುವಷ್ಟೂ ಚಳಿಗೆ ಹೊರಗಡೆ ಸುತ್ತಾಡದಿರುವುದು ಉತ್ತಮ. ಉಳಿದ ಸಮಯಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ಹೃದಯ ಸ್ತಂಭನ ಪ್ರಕರಣಗಳು ಹೆಚ್ಚು ದಾಖಲಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ.
WD

ಚಳಿಗಾದಲ್ಲಿ ಹೃದ್ರೋಗಿಗಳು ಹೆಚ್ಚಿನ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸುತ್ತಿರುವುದು ಪ್ರಮುಖ ಸಮಸ್ಯೆ. ಇದು ರಕ್ತದೊತ್ತಡ ನಿಯಂತ್ರಣದ ಔಷಧಿ ಸೇವನೆಯ ಪ್ರಮಾಣವನ್ನು ಹೆಚ್ಚಿಸುವಂತೆ ಮಾಡುತ್ತದೆ ಎಂಬುದಾಗಿ ಹೃದ್ರೋಗ ತಜ್ಞ ವಿಶಾಲ್ ರಸ್ತೋಗಿ ಹೇಳಿದ್ದಾರೆ.

ಚಳಿಗಾಲದಲ್ಲಿನ ಕಡಿಮೆ ಉಷ್ಣಾಂಶವು ಹೃದಯಕ್ಕೆ ರಕ್ತಪೂರೈಕೆ ಮಾಡುವ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತವೆ. ಇದರಿಂದಾಗಿ ರಕ್ತಸಂಚಾರದ ವೇಳೆ ಹೃದಯದ ಮೇಲೆ ಒತ್ತಡಬೀರುವ ಕಾರಣ ರಕ್ತದೊತ್ತಡ ಮಟ್ಟವು ಹೆಚ್ಚಲು ಕಾರಣವಾಗಿದ್ದು, ಇದು ಹೃದಯ ಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕೃತಕವಾಗಿ ನಿಯಂತ್ರಿತ ಹವಾಮಾನದಲ್ಲಿ ಜೀವಿಸ ಕಾರಣ ಭಾರತೀಯರಲ್ಲಿ ಇಂತಹ ಘಟನೆಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಹೃದ್ರೋಗದ ಸಮಸ್ಯೆಯಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಚಳಿಗೆ ಮೈಯೊಡ್ಡದಿರುವುದು ಒಳಿತು ಎಂದು ರಸ್ತೋಗಿಯವರು ಹೇಳುತ್ತಾರೆ.

ಈ ವೇಳೆ ನಸುಕಿನಲ್ಲಿ ವಾಕಿಂಗ್ ಅಭ್ಯಾಸ ಇರುವಂತಹವರು ಇದನ್ನು ಸೂರ್ಯೋದಯದ ನಂತರಕ್ಕೆ ಮುಂದೂಡುವಂತೆಯೂ ಅವರು ಸಲಹೆ ನೀಡುತ್ತಾರೆ. ಚಳಿಗಾಲದಲ್ಲಿ ಬೆಳಿಗ್ಗೆ 8.30ರ ನಂತರವೇ ವಾಕಿಂಗ್ ತೆರಳುವುದು ಸೂಕ್ತ ಎಂಬುದಾಗಿ ಇನ್ನೋರ್ವ ಹೃದ್ರೋಗತಜ್ಞ ಉಮೇಶ್ ಗುಪ್ತಾ ಹೇಳುತ್ತಾರೆ.

ಸಾಮಾನ್ಯ ಆರೋಗ್ಯವಂತ ವ್ಯಕ್ತಿಯ ಹೃದಯದ ಮೇಲೆ ಚಳಿಗಾಲದಲ್ಲಿ ಇತರ ಸಮಯಕ್ಕಿಂತ ಕಾರ್ಯದೊತ್ತಡ ಹೆಚ್ಚುತ್ತದೆ. ಹಾಗಿರುವಾಗ ಹೃದ್ರೋಗಿಗಳಿಗೆ ಇದು ಅಪಾಯಕಾರಿ. ಆರೋಗ್ಯವಂತರ ಹೃದಯದ ಮೇಲೆ ಒತ್ತಡವು ಚಳಿಗಾಲದಲ್ಲಿ ಶೇ.400ರಷ್ಟು ಹೆಚ್ಚುತ್ತದೆ.

ಇದಲ್ಲದೆ ಶೀತದಿಂದಾಗುವ ನೆಗಡಿ ಮತ್ತು ಕೆಮ್ಮುಸಹ ಹೃದಯದ ಸ್ತಂಭನಕ್ಕೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಹೃದಯವನ್ನು ಆರೋಗ್ಯವಾಗಿ ಇರಿಸಿಕೊಳ್ಳಬೇಕಾದರೆ, ಶೀತದಿಂದ ಉಂಟಾಗುವ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬೇಕು. ಹೃದಯದ ತೊಂದರೆ ಇರುವವರು ಸಾಮಾನ್ಯ ನೆಗಡಿ, ಕೆಮ್ಮು ಮತ್ತು ಇತರ ಸಮಸ್ಯೆಗಳನ್ನು ತಡೆಗಟ್ಟುವ ಶೀತವಿರೋಧಿ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಉತ್ತಮ ಎಂಬುದು ತಜ್ಞ ವೈದ್ಯರ ಸಲಹೆ.

Share this Story:

Follow Webdunia kannada