Select Your Language

Notifications

webdunia
webdunia
webdunia
webdunia

ಖಿನ್ನತೆಯಲ್ಲಿ ನಿಸರ್ಗ ಮತ್ತು ಪೋಷಣೆಯ ಪಾತ್ರ

ಮನಃಶಾಸ್ತ್ರಜ್ಞ
ಲಂಡನ್ , ಬುಧವಾರ, 16 ಜನವರಿ 2008 (20:49 IST)
ನಿಸರ್ಗ ಮತ್ತು ಪೋಷಣೆ ಎರಡೂ ಖಿನ್ನತೆಯಲ್ಲಿ ಪಾತ್ರವಹಿಸುತ್ತದೆ ಎಂದು ಹೊಸ ಅಧ್ಯಯನದ ವರದಿಯೊಂದು ತಿಳಿಸಿದೆ. ನಾಟ್ರಡಾಮ್ ವಿಶ್ವವಿದ್ಯಾಲಯದ ಮನಃಶಾಸ್ತ್ರಜ್ಞ ಗೆರಾಲ್ಡ್ ಹೇಫೆಲ್ ನಡೆಸಿದ ಅಧ್ಯಯನದಲ್ಲಿ ಖಿನ್ನತೆಯ ಅಪಾಯಕ್ಕೆ ನರೋತ್ತೇಜಕ ಡೋಪಮೈನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿದುಬಂದಿದೆ.

ಖಿನ್ನತೆಯ ವಿದ್ಯಮಾನಗಳ ಮುನ್ಸೂಚನೆಗೆ ಡೋಪಮೈನ್ ಜತೆ ಸಂಬಂಧ ಹೊಂದಿದ ವಂಶವಾಹಿಯು ತಂದೆತಾಯಿಗಳ ಪೋಷಣೆ ಶೈಲಿಯಿಂದ ಪ್ರಭಾವ ಹೊಂದುತ್ತದೆಯೇ ಎಂದು ಸಂಶೋಧಕರು ಅಧ್ಯಯನ ಮಾಡಿದರು. ಬಾಲಪರಾಧಿ ಕೇಂದ್ರದಲ್ಲಿರುವ 177 ಯುವಕರನ್ನು ಈ ಕುರಿತು ಅಧ್ಯಯನ ನಡೆಸಲಾಯಿತು. ಯೌವನದ ಹಂತದಲ್ಲಿ ಖಿನ್ನತೆ ಬೆಳೆಯುವ ಲಕ್ಷಣಗಳಿರುವುದರಿಂದ ಅಧ್ಯಯನಕ್ಕೆ ಅವರು ಸೂಕ್ತವಾದ ವ್ಯಕ್ತಿಗಳು ಎಂದು ತೀರ್ಮಾನಿಸಲಾಯಿತು.

ಸಂಶೋಧಕರು ಖಿನ್ನತೆ ಗುರುತಿಸಲು ರಚನಾತ್ಮಕ ಸಂದರ್ಶನ ನಡೆಸಿದರು ಮತ್ತು ಪೋಷಕರು ಮಕ್ಕಳನ್ನು ಸಾಕುವ ವಿಧಾನದ ಹಲವಾರು ಅಂಶಗಳನ್ನು ಅಂದಾಜು ಮಾಡಲು ಪ್ರಶ್ನೋತ್ತರಗಳನ್ನು ಇಟ್ಟುಕೊಂಡರು. ಪೋಷಕರಿಂದ ದೈಹಿಕ ಶಿಕ್ಷೆ, ತಿರಸ್ಕಾರ, ಮಕ್ಕಳ ದೃಷ್ಟಿಕೋನಕ್ಕೆ ಗೌರವ ನೀಡದಿರುವುದು, ಬೇರೆಯವರ ಎದುರು ಹಂಗಿಸುವುದು ಮುಂತಾದ ಹಲವಾರು ಅಂಶಗಳನ್ನು ಪರಿಶೀಲಿಸಲಾಯಿತು.

ಬಾಲಕರು ವಿಶೇಷವಾಗಿ ತಾಯಿಯನ್ನು ತಿರಸ್ಕರಿಸುವ ಮಕ್ಕಳಲ್ಲಿ ವಿಶೇಷ ರೂಪದ ಡೋಪಮೈನ್ ಸಾಗಿಸುವ ವಂಶವಾಹಿಯ ಕೊರತೆಯಿಂದ ಖಿನ್ನತೆ ಮತ್ತು ಆತ್ಮಹತ್ಯೆಯ ಪ್ರವೃತ್ತಿ ಕಾಣಿಸಿಕೊಳ್ಳುವ ಅಪಾಯದಲ್ಲಿರುತ್ತಾರೆ. ಮೆದುಳಿನಲ್ಲಿ ಡೋಪಮೈನ್ ಚಟುವಟಿಕೆ ಹೆಚ್ಚಿಸುವ ಮೂಲಕ, ಹೊಸ ಗುರಿಗಳನ್ನು ಗುರುತಿಸಲು ಮತ್ತು ಶೋಧಿಸಲು ರೋಗಿಗಳಿಗೆ ನೆರವು ನೀಡುವ ಮೂಲಕ ಖಿನ್ನತೆ ಪ್ರಮಾಣವನ್ನು ತಗ್ಗಿಸಬಹುದೆಂದು ತೀರ್ಮಾನಿಸಲಾಯಿತು.

Share this Story:

Follow Webdunia kannada