Select Your Language

Notifications

webdunia
webdunia
webdunia
webdunia

ಕಾಫಿಗೆ ಗರ್ಭಾಶಯ ಕ್ಯಾನ್ಸರ್ ತಡೆಯುವ ಶಕ್ತಿ?

ಗರ್ಭಾಶಯ
WD
ಅತಿ ಹೆಚ್ಚು ಕಾಫಿ ಕುಡಿಯುವ ಚಟವಂಟಿಸಿಕೊಂಡಿರುವ ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ತಗುಲುವ ಸಂಭವಗಳು ಕಡಿಮೆ ಎಂದು ಜಪಾನಿನ ಅಧ್ಯಯನ ಒಂದು ಹೇಳಿದೆ.

ಜಪಾನ್ ಆರೋಗ್ಯ ಸಚಿವಾಲಯದ ನೇತೃತ್ವದಲ್ಲಿ ನಡೆಸಲಾಗಿರುವ ಈ ಅಧ್ಯಯನಕ್ಕಾಗಿ 40ರಿಂದ 69ರ ಹರೆಯದ ಸುಮಾರು 54 ಸಾವಿರ ಮಹಿಳೆಯರನ್ನು ಆಯ್ದುಕೊಳ್ಳಲಾಗಿತ್ತು. ಸುಮಾರು 15 ವರ್ಷಗಳ ಸುದೀರ್ಘ ಕಾಲದ ಪರಿವೀಕ್ಷಣೆಯ ಮೂಲಕ ನಡೆಸಲಾಗಿರುವ ಅಧ್ಯಯನ ಕಾಲದಲ್ಲಿ 117 ಮಹಿಳೆಯರು ಈ ರೋಗಕ್ಕೆ ತುತ್ತಾಗಿದ್ದರು.

ಈ ಮಹಿಳೆಯರು ಕಾಫಿ ಕುಡಿಯುವ ಪ್ರಮಾಣಕ್ಕನುಸಾರವಾಗಿ ಜಪಾನಿನ ರಾಷ್ಟ್ರೀಯ ಕ್ಯಾನ್ಸರ್ ಕೇಂದ್ರವು ಅವರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿತ್ತು.

ದಿನಒಂದರ ಮೂರು ಕಪ್‌ಗಿಂತಲೂ ಅಧಿಕ ಪ್ರಮಾಣದಲ್ಲಿ ಕಾಫಿ ಕುಡಿಯುವ ಮಹಿಳೆಯರಲ್ಲಿ, ದಿನವೊಂದರ ಎರಡು ಕಪ್‌ಗಳಿಗಿಂತ ಕಡಿಮೆ ಕಾಫಿ ಕುಡಿಯುವವರಿಗಿಂತ, ಗರ್ಭಾಶಯ ಕ್ಯಾನ್ಸರ್ ತಗುಲುವ ಪ್ರಮಾಣ ಶೇ.60ರಷ್ಟು ಕಡಿಮೆ ಎಂದು ಅಧ್ಯಯನ ತಿಳಿಸಿದೆ.

ಕಾಫಿಯು ಇನ್ಸುಲಿನ್ ಮಟ್ಟವನ್ನು ಕಡಿಮೆಗೊಳಿಸಬಹುದಾಗಿದ್ದು ಗರ್ಭಾಶಯ ಕ್ಯಾನ್ಸರಿನ ಸಂಭಾವ್ಯತೆಯನ್ನು ಇಳಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ.

Share this Story:

Follow Webdunia kannada