Select Your Language

Notifications

webdunia
webdunia
webdunia
webdunia

ಒತ್ತಡದ ಪರಿಸ್ಥಿತಿ ನಿರ್ವಹಿಸುವುದು ಹೇಗೆ?

ಭಾಷಣ
, ಬುಧವಾರ, 2 ಜನವರಿ 2008 (21:42 IST)
WD
ಉದ್ಯೋಗದ ಸಂದರ್ಶನಗಳು, ಸಾರ್ವಜನಿಕ ಭಾಷಣ, ಕುಟುಂಬದ ತುರ್ತು ಸಂದರ್ಭಗಳನ್ನು ನಿಭಾಯಿಸುವುದರಲ್ಲಿ ನಮಗೆ ಅಭ್ಯಾಸವಿಲ್ಲದಿದ್ದರೆ ಅದು ಪ್ರತಿಗಳಿಗೆಯೂ ಒತ್ತಡಕಾರಿ ಆಗಿರುತ್ತದೆ. ಒತ್ತಡದ ಸಂದರ್ಭದಲ್ಲಿ ನಾವು ಪ್ರಶಾಂತವಾಗಿ, ನಿರಾಳವಾಗಿ ಇರುವುದನ್ನು ಕಲಿಯುವುದರಿಂದ ಸಮಸ್ಯೆ ಸುಲಭವಾಗಿ ಬಗೆಹರಿಯಬಹುದು ಮತ್ತು ಆರೋಗ್ಯಕಾರಿ ಜೀವನಕ್ಕೂ ಸಹಕಾರಿಯಾಗುತ್ತದೆ. ಮೊದಲಿಗೆ ನಾವು ಒತ್ತಡದ ಕಾರಣಗಳನ್ನು ತಿಳಿಯಬೇಕು.

ಪರಿಸ್ಥಿತಿ ನಿಮ್ಮ ಕೈಮೀರಿ ಹೋಗಿದ್ದರೆ ಅದರ ಬಗ್ಗೆ ಚಿಂತೆ ಬಿಡಿ. ಅದು ಅಷ್ಟು ಸುಲಭವಲ್ಲ ಎಂದು ನಮಗೂ ಗೊತ್ತು, ಹಾಗಾದರೆ ಕೆಳಗಿನಂತೆ ಮಾಡಿ. ಮೂಗಿನ ಮೂಲಕ ಆಳವಾಗಿ ಉಸಿರೆಳೆದುಕೊಳ್ಳಿ. ಮನಸ್ಸಿನಲ್ಲಿ ಐದು ಸೆಕೆಂಡುಗಳ ಕಾಲ ಅಂಕಿಗಳನ್ನು ಎಣಿಸಿ. ಬಳಿಕ ಬಾಯಿಯ ಮೂಲಕ ನಿಧಾನವಾಗಿ ಉಸಿರನ್ನು ಬಿಡಿ. ನಿಮಗೆ ನಿರಾಳ ಅನಿಸುವ ತನಕ ಈ ಕ್ರಮ ಅನುಸರಿಸಿ. ನಿಮ್ಮ ಯೋಚನೆಯನ್ನು ಬೇರೆ ದಿಕ್ಕಿಗೆ ಹರಿಸಿ.

ನಿಮ್ಮನ್ನು ಖುಷಿ ಪಡಿಸುವ ಸಂಗತಿಗಳ ಬಗ್ಗೆ ಯೋಚಿಸಿ. ಸ್ವಲ್ಪ ವ್ಯಾಯಾಮಗಳನ್ನು ಮಾಡಿ. ಓಡುವುದು, ಯೋಗ, ಭಾರ ಎತ್ತುವಿಕೆ, ದೈಹಿಕ ವ್ಯಾಯಾಮ ಯಾವುದಾದರೂ ಚಿಂತೆಯಿಲ್ಲ. ಸಾಕಷ್ಟು ವ್ಯಾಯಾಮವು ಒತ್ತಡದ ಸ್ಥಿತಿಯನ್ನು ನಿಭಾಯಿಸಲು ನೆರವಾಗುತ್ತದೆ.

ಕೆಲವು ಬಾರಿ ಒತ್ತಡವನ್ನು ಕೇವಲ ಒಂದು ಕ್ರಮದಿಂದ ಪರಿಹರಿಸಬಹುದು. ಕೆಲವು ಬಾರಿ ಅನೇಕ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಒಂದೊಂದೇ ಹೆಜ್ಜೆಯನ್ನು ಇಡಿ. ಸಾವಿರಾರು ಮೈಲುಗಳ ಪ್ರಯಾಣವು ಒಂದು ಹೆಜ್ಜೆಯಿಂದ ಆರಂಭವಾಗುತ್ತದೆ ಎನ್ನುವುದನ್ನು ಮರೆಯದಿರಿ.

ಅನೇಕ ಒತ್ತಡ ಪರಿಸ್ಥಿತಿಗಳು ತಪ್ಪಿಸಲು ಸಾಧ್ಯವಾಗುವಂತದ್ದು. ನೀವು ಪೂರ್ವ ತಯಾರಿ ಮಾಡಿಕೊಂಡಿದ್ದರೆ ಆ ಒತ್ತಡದ ಪರಿಸ್ಥಿತಿ ಬರುತ್ತಿರಲಿಲ್ಲ. ರೋಗ ಬಂದ ಬಳಿಕ ಚಿಕಿತ್ಸೆ ನೀಡುವ ಬದಲಿಗೆ ರೋಗಬರದಂತೆ ಎಚ್ಚರವಹಿಸುವುದು ಒಳ್ಳಯದಲ್ಲವೇ. ಚಿವಿಂಗ್ ಗಮ್ ಅಗಿಯುವುದರಿಂದ ಒತ್ತಡ ತಗ್ಗಿಸಬಹುದು. ಅದಕ್ಕಾಗೇ ಸತತ ಒತ್ತಡಕ್ಕೆ ಒಳಗಾಗುವ ಜನರು ಮಿತಿಮೀರಿ ಆಹಾರ ಸೇವಿಸುವುದು.

ಆದರೆ ಚೀವಿಂಗ್ ಗಮ್ ಅಗಿಯುವುದು ಆರೋಗ್ಯಕಾರಿ ವಿಧಾನ. ಸುತ್ತಲಿನ ಜನರ ಜತೆ ಸಮಾಲೋಚಿಸಿ. ಅದರಿಂದ ಮನಸ್ಸನ್ನು ಬೇರೆ ದಿಕ್ಕಿಗೆ ತಿರುಗಿಸಬಹುದು. ಅತಿಯಾದ ಒತ್ತಡವಿದ್ದರೆ ತಲೆದಿಂಬಿಗೆ ಗುದ್ದುವ ಮೂಲಕ ಶಮನ ಮಾಡಿಕೊಳ್ಳಬಹುದು.ಚಿಂತೆ ಮಾಡುತ್ತಾ ಕೂರುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ.

Share this Story:

Follow Webdunia kannada