Select Your Language

Notifications

webdunia
webdunia
webdunia
webdunia

ಇಲ್ಲಿ ಕೇಳಿ, ನಿಮ್ಮ ಮಗು ಜೀನಿಯಸ್ಸಾ?

ಮಗು
PTI
ತಮ್ಮ ಪ್ರೀತಿಯ ಮಗು ಒಂದು ದೊಡ್ಡ ಜೀನಿಯಸ್ ಎಂದು ಇತರರಿಗೂ ತಿಳಿಯುವಂತಾಗಬೇಕು, ಅದಕ್ಕಾಗಿ ಆ ಮಗುವಿಗೆ ಒಳ್ಳೆ ಬುದ್ಧಿ, ವಿಶೇಷ ಕಸರತ್ತು ಎಲ್ಲಾ ಕಲಿಸಬೇಕು ಎಂದುಕೊಳ್ಳುವ ಹೆತ್ತವರಿಗೆ ಆಶಾದಾಯಕ ಸುದ್ದಿ ಇಲ್ಲಿದೆ.

ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ಹೆತ್ತವರಿಗೆ ಪೂರಕವಾಗಬಲ್ಲ ಗುಣಾವಗುಣಗಳ ಪಟ್ಟಿಯೊಂದನ್ನು ಬ್ರಿಟಿಷ್ ಸಂಶೋಧಕರೊಬ್ಬರು ರೂಪಿಸಿದ್ದಾರೆ.

"ಡೈಲಿ ಮೇಲ್" ವರದಿ ಪ್ರಕಾರ, ಆಕ್ಸ್‌ಫರ್ಡ್‌ನ ಏಬಲ್ ಪ್ಯುಪಿಲ್ಸ್ ಕೇಂದ್ರದ ಮಾಜಿ ಉಪನ್ಯಾಸಕ ಬರ್ನಾಡ್ ಟಿನಾನ್ ಅವರ ಪ್ರಕಾರ, ಮಗುವೊಂದರ ಪ್ರತಿಭೆಯು ಶಾಲೆಗಳಲ್ಲಿ ಮೊಳಕೆಯೊಡೆಯುವುದಿಲ್ಲ ಮತ್ತು ಶಾಲಾ ಪರೀಕ್ಷೆಗಳಿಂದಾಗಿ ಈ ಪ್ರತಿಭೆಯು ಬಾಹ್ಯ ಜಗತ್ತಿಗೆ ಬರುವುದಲ್ಲ.

ಪೆನ್ನು-ಪೇಪರು ಪರೀಕ್ಷೆಯ ಮೂಲಕ ಎಲ್ಲಾ ಸಾಮರ್ಥ್ಯವನ್ನು ಹೊರಗೆಳೆಯುವುದು ಸಾಧ್ಯವಿಲ್ಲ. ಒಂದು ಮಗು ಏನಾದರೂ ರಚಿಸುವುದರಲ್ಲಿ ಪ್ರಾವೀಣ್ಯ ಹೊಂದಿರಬಹುದು, ಅಥವಾ ಉತ್ತಮ ಕಲ್ಪನಾ ಶಕ್ತಿ ಹೊಂದಿರಬಹುದು, ಇಲ್ಲವೇ ಮಹಾನ್ ನಾಯಕನಾಗಬಹುದು--- ಈ ರೀತಿಯ ಆಂತರಿಕ ಪ್ರತಿಭೆಯನ್ನು ಪರೀಕ್ಷೆಗಳಿಂದ ಅಳೆಯಲಾಗದು ಎನ್ನುತ್ತಾರೆ ಟಿನಾನ್.

ಪ್ರತಿಭೆ ಹೊರಜಗತ್ತಿಗೆ ಸುಲಭವಾಗಿ ತಿಳಿಯಲಾರದ ಆರು ರೀತಿಯ ಮಕ್ಕಳನ್ನು ಆಕೆ ಗುರುತಿಸಿದ್ದಾರೆ. ಗೋಲ್ಡ್‌ಫಿಶ್ ಬೌಲ್‌ಗಳನ್ನು ಮರುವ್ಯವಸ್ಥಿತಗೊಳಿಸಿದವರು ಮತ್ತು ತಮ್ಮ ಸಹಪಾಠಿಗಳ ಆಸನ ವ್ಯವಸ್ಥೆಯನ್ನು ಮರು ಹೊಂದಾಣಿಕೆ ಮಾಡಿದವರು--- ನಾಯಕತ್ವ ಅಥವಾ ಸಾಂಸ್ಥಿಕ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ.

ತಮಗೆ ಸಿಹಿತಿಂಡಿಗಾಗಿ ಮತ್ತು ಪಾಕೆಟ್ ಮನಿ ರೂಪದಲ್ಲಿ ನೀಡುವ ಹಣವನ್ನು ಒಟ್ಟುಗೂಡಿಸಿ, ರಜಾದಿನಗಳಲ್ಲಿ ಮಜಾ ಮಾಡಲೆಂದು ಕೂಡಿಡುವ ಪುಟಾಣಿಗಳು-- ಭವಿಷ್ಯದ ರಿಚರ್ಡ್ ಬ್ರಾನ್ಸನ್‌ಗಳಾಗಬಹುದು ಎಂಬುದು ಆಕೆಯ ತರ್ಕ. ರಿಚರ್ಡ್ ಬ್ರಾನ್ಸನ್ 15ನೇ ವಯಸ್ಸಿಗೇ ಪತ್ರಿಕೆಯೊಂದನ್ನು ಹುಟ್ಟುಹಾಕಿ, ಅತಿದೊಡ್ಡ ದೈತ್ಯ ಉದ್ಯಮಿಯಾಗಿ ಬೆಳೆದು ವರ್ಜಿನ್ ಕಂಪನಿ ರೂಪಿಸಿ, ವರ್ಜಿನ್ ಏರ್‌ವೇಸ್ ಮತ್ತಿತರ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

Share this Story:

Follow Webdunia kannada