ಮಾಲಿನ್ಯಯುಕ್ತ ಪರಿಸರಗಳಲ್ಲಿ ವಾಸಿಸುವ ಜನರು ಅನೇಕ ಸೋಂಕುಗಳಿಗೆ ತುತ್ತಾಗುವುದು ಸಾಮಾನ್ಯ. ಆದರೆ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡಿ ರೋಗಗಳನ್ನು ದೂರಮಾಡುವ ಆಸ್ಪತ್ರೆಗಳು ಕೂಡ ಸೋಂಕಿನ ತಾಣವಾಗುತ್ತಿದೆಯೇ ಎಂಬ ಪ್ರಶ್ನೆ ಈಗ ಕಾಡಿದೆ.
ಗುಣಪಡಿಸಲಾಗದ ಆಸ್ಪತ್ರೆ ಸೋಂಕು ಪ್ರತಿ ವರ್ಷ ನೂರಾರು ಜನರನ್ನು ಬಲಿತೆಗೆದುಕೊಳ್ಳುತ್ತಿದೆ ಎಂದು ಲಂಡನ್ ಇಂಪೀರಿಯಲ್ ಕಾಲೇಜಿನ ಪ್ರಮುಖ ತಜ್ಞರೊಬ್ಬರು ಎಚ್ಚರಿಸಿದ್ದಾರೆ. ಸೂಡೋಮಾನಾಸ್ ಕಾಯಿಲೆ ಅಪಾಯಕಾರಿಯೇಕೆಂದರೆ ಇದು ತೀವ್ರ ನಿಗಾ ಘಟಕಗಳಲ್ಲಿ ತೀಕ್ಷ್ಣವಾಗಿರುವುದಷ್ಟೇ ಅಲ್ಲದೇ ಚಿಕಿತ್ಸೆಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ.
ಆಸ್ಪತ್ರೆಗಳಿಗೆ ಇವು ದುಃಸ್ವಪ್ನವಾಗಿದ್ದು, ಅನೇಕ ಸಂದರ್ಭಗಳಲ್ಲಿ ಗುಣಪಡಿಸುವುದು ಸಾದ್ಯವಾಗುವುದಿಲ್ಲ. ಇವು ಅಂಟಿಬಯೋಟಿಕ್ಸ್ಗಳಿಗೆ ಪ್ರತಿರೋಧವಾಗಿರುವುದರಿಂದ ಅನೇಕ ಮಂದಿ ಸಾವಪ್ಪುತ್ತಾರೆ ಎಂದು ಪ್ರೊ, ಎನ್ರೈಟ್ ತಿಳಿಸಿದ್ದಾರೆ. ಸೂಡೋಮೋನಾಸ್ ಬ್ಯಾಕ್ಟೀರಿಯ ನೀರಿನಲ್ಲಿ ಸಂತಾನೋತ್ಪತ್ತಿ ಹೊಂದುತ್ತವೆ ಮತ್ತು ಮಾಲಿನ್ಯಪೂರಿತ ವೈದ್ಯಕೀಯ ಉಪಕರಣಗಳ ಮೂಲಕ ಹರಡುತ್ತದೆ.
ಸೂಡೋಮೋನಿಯಾ ಬ್ಯಾಕ್ಟೀರಿಯಾದಿಂದ ಸತ್ತವರ ಖಚಿತ ಸಂಖ್ಯೆ ತಿಳಿಯದಿದ್ದರೂ ಅವು ನೂರಾರು ಜನರನ್ನು ಪ್ರತಿ ವರ್ಷ ಬಲಿತೆಗೆದುಕೊಳ್ಳುತ್ತದೆ ಎಂದು ಪ್ರೊ. ಎನ್ರೈಟ್ ಹೇಳುತ್ತಾರೆ. ಸೂಡೋಮಾನಿಯಾದಿಂದ ರಕ್ತವಿಷಪೂರಿತಗೊಂಡು ಅನೇಕ ಮಂದಿಯ ಸಾವಿಗೆ ಕಾರಣವಾಗಿದೆ.
ಸೋಂಕಿಗೆ ತುತ್ತಾದ ರೋಗಿಗಳು ವಿಷಪೂರಿತ ರಕ್ತ ಅಥವಾ ಸೆಪ್ಟಿಮೇಸಿಯಾ ಬೆಳೆಸಿಕೊಂಡರೆ ಬದುಕುಳಿಯುವ ಸಾಧ್ಯತೆ ಶೇ. 20ರಷ್ಟು ಕಡಿಮೆ ಎಂದು ಹೇಳಲಾಗಿದೆ.ವಿಶೇಷ ವಾರ್ಡ್ಗಳಲ್ಲಿ ಸೂಡೋಮೋನಾಸ್ ಕಾಯಿಲೆ ಕಂಡುಬಂದಿದ್ದು, ರೋಗಿಗಳ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೆ, ಅಥವಾ ಕ್ಯಾನ್ಸರ್ ರೋಗದ ಅಂಚಿನಲ್ಲಿದ್ದರೆ, ಶ್ವಾಸಕೋಶ ಅಥವಾ ಜೀರ್ಣಕ್ರಿಯೆಗೆ ಪರಿಣಾಮ ಬೀರುವ ಸಿಸ್ಟಿಕ್ ಫೈಬ್ರೋಸಿಸ್ ಅಥವಾ ಎಚ್ಐವಿ ಮತ್ತು ತೀವ್ರ ಸುಟ್ಟಗಾಯದಿಂದ ನರಳುವ ರೋಗಿಗಳಲ್ಲಿ ಈ ಗಂಭೀರ ಸಮಸ್ಯೆಗಳು ಉದ್ಭವಿಸುತ್ತದೆ.
ತೀವ್ರ ನಿಗಾ ಘಟಕದಲ್ಲಿರುವ ವ್ಯಕ್ತಿಗಳಿಗೆ ಸೂಡೋಮೋನಾಸ್ ತೀವ್ರ ನ್ಯುಮೋನಿಯಾ ಕಾಯಿಲೆಯನ್ನು ಉಂಟುಮಾಡುತ್ತದೆ. ಈಜಿದ ಬಳಿಕ ಆಲ್ಕೊಹಾಲ್ ಮತ್ತು ಅಸಿಟಿಕ್ ಆಸಿಡ್ ಮಿಶ್ರಣದಿಂದ ಕಿವಿ ತೊಳೆದುಕೊಳ್ಳುವ ಮೂಲಕ ಸ್ವಿಮ್ಮರ್ಸ್ ಇಯರ್ ಕಾಯಿಲೆಯನ್ನು ತಪ್ಪಿಸಬಹುದು. ಸೂಡೋಮೋನಾಸ್ ಕಣ್ಣು ಸೋಂಕಿಗೆ ಅತ್ಯಂತ ಸಾಂದ್ರಿತ ಆಂಟಿಬಯೋಟಿಕ್ ಹನಿಗಳ ಚಿಕಿತ್ಸೆ ನೀಡಲಾಗುತ್ತದೆ. ಕೆಲವು ಬಾರಿ ಆಂಟಿಬಯಾಟಿಕ್ಸ್ಗಳನ್ನು ಕಣ್ಣಿಗೆ ನೇರವಾಗಿ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ.