Select Your Language

Notifications

webdunia
webdunia
webdunia
webdunia

ಆರೋಗ್ಯಯುಕ್ತ ಮೆದುಳಿಗೆ ಕೆಲವು ಟಿಪ್ಸ್‌ಗಳು

ಕ್ರಿಯಾಶೀಲ
, ಗುರುವಾರ, 29 ನವೆಂಬರ್ 2007 (19:18 IST)
ಮಾನವನ ಮೆದುಳು ಇಡೀ ಜೀವನವನ್ನು ನಿಯಂತ್ರಿಸುತ್ತದೆನ್ನುವುದು ಅಕ್ಷರಶಃ ಸತ್ಯ ಸಂಗತಿ. ನಮ್ಮ ದೇಹದ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವ ಹಾಗೇ ಮೆದುಳಿನ ಆರೋಗ್ಯವನ್ನು ಕಾಪಾಡುವುದು ಅಷ್ಟೇ ಅವಶ್ಯಕವಾಗಿದೆ. ನಿಮ್ಮ ಮೆದುಳನ್ನು ಮತ್ತು ದೇಹವನ್ನು ಚೈತನ್ಯಶೀಲವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕಾದರೆ ಕೆಲವು ಟಿಪ್ಸ್‌ಗಳನ್ನು ಅನುಸರಿಸುವುದು ಅಗತ್ಯವಾಗಿದೆ.

ನಿಮ್ಮ ದೇಹಾರೋಗ್ಯ ರಕ್ಷಣೆಗೆ ನಿಯಮಿತವಾಗಿ ವ್ಯಾಯಾಮ ಮಾಡಿ. ಅದರ ಜತೆಗೆ ಮೆದುಳಿಗೆ ವ್ಯಾಯಾಮ ನೀಡಲು ಕ್ರಿಯಾಶೀಲ ಕಲಿಯುವಿಕೆಯಲ್ಲಿ ಜೀವಮಾನವಿಡೀ ನಿರತರಾಗಿ. ಹೊಸ, ಹೊಸ ಅನುಭವಗಳನ್ನು ಪಡೆಯಲು ಪ್ರಯತ್ನಿಸಿ. ಸ್ನೇಹಿತರು,ಕುಟುಂಬ ಮತ್ತು ಸಮುದಾಯದ ಜನರೊಡನೆ ಸಾಮಾಜಿಕವಾಗಿ ಪಾಲ್ಗೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಸದಾ ಸಕಾರಾತ್ಮಕ ಮನೋಭಾವ ಕಾಯ್ದುಕೊಂಡು ಜೀವನದ ಬಗ್ಗೆ ನಿಯಂತ್ರಣದ ಪ್ರಜ್ಞೆ ಬೆಳೆಸಿಕೊಳ್ಳುವುದು ಒಳ್ಳೆಯದು. ಮಾನಸಿಕ ಒತ್ತಡ ನಿರ್ವಹಣೆಗೆ ಕೆಲವು ಕ್ರಮಗಳನ್ನು ಕೈಗೊಳ್ಳುವುದು. ಸಮತೋಲಿತ ಆಹಾರ ಸೇವನೆ, ಮೆದುಳಿಗೆ ಆರೋಗ್ಯಕರವಾದ ಆಹಾರ ಸೇವನೆ. ಕೊಲೆಸ್ಟರಾಲ್ ಪ್ರಮಾಣ ಹೆಚ್ಚಿದ್ದರೆ ಅದನ್ನು ಇಳಿಸಲು ಪ್ರಯತ್ನಿಸಿ, ರಕ್ತದ ಗ್ಲುಕೋಸ್ ಮತ್ತು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಿ. ಸಾಕಷ್ಟು ನಿದ್ರೆಯನ್ನು ಮಾಡಿ. ಆರೋಗ್ಯದ ಸಮಸ್ಯೆಗಳಿಗೆ ಕೂಡಲೇ ಚಿಕಿತ್ಸೆ ಮತ್ತು ವೈದ್ಯರ ನೆರವು ಪಡೆಯಿರಿ. ಮೇಲಿನ ಟಿಪ್ಸ್ ನೀವು ಮಾಡಬೇಕಾದ ಕೆಲಸಗಳು.

ಮಾಡಬಾರದ ಕೆಲಸಗಳು

ಅತಿಯಾದ ಧೂಮಪಾನ, ಮಾದಕವಸ್ತು ಸೇವನೆ, ಮಾನಸಿಕ ಸ್ಥಿತಿಗತಿಯಲ್ಲಿ ದಿಢೀರ್ ಬದಲಾವಣೆಯನ್ನು ಅಸಡ್ಡೆಮಾಡುವುದು, ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ವೈದ್ಯರಲ್ಲಿ ಹೋಗದಿರುವುದು, ಔಷಧಿಗಳ ಸೇವನೆಯಿಂದ ಮಾನಸಿಕ ನಿರ್ವಹಣೆಯ ಮೇಲೆ ದುಷ್ಪರಿಣಾಮ ಉಂಟಾದರೆ ನಿರ್ಲಕ್ಷ್ಯವಹಿಸುವುದು, ಮನೆಯಲ್ಲಿ ಒಂಟಿಯಾಗಿ ಕಾಲಕಳೆಯುವುದು,

ಯಾವುದೇ ಹೊಸ ಕೆಲಸ ಮಾಡಲು ವಯಸ್ಸು ಮೀರಿಹೋಗಿದೆ ಎಂದು ಭಾವಿಸುವುದು ಇವು ಮಾಡಬಾರದ ಕೆಲಸಗಳು. ಮೆದುಳಿನ ಆರೋಗ್ಯ ಕಾಪಾಡಲು ಮೇಲಿನ ಟಿಪ್ಸ್‌ಗಳನ್ನು ಅನುಸರಿಸಿದರೆ ದೇಹದ ಆರೋಗ್ಯವೂ ತಾನೇತಾನಾಗಿ ಸುಧಾರಿಸುವುದರಲ್ಲಿ ಸಂಶಯವಿಲ್ಲ.

Share this Story:

Follow Webdunia kannada