Webdunia - Bharat's app for daily news and videos

Install App

ಲಿವರ್ಗೆ ಹಾನಿ ಮಾಡೋ ಔಷಧಗಳು ಯಾವುವು?

Webdunia
ಶನಿವಾರ, 31 ಜುಲೈ 2021 (08:38 IST)
ಈ ಸಪ್ಲಿಮೆಂಟ್ಗಳಿಗೆ ಅನಿಯಂತ್ರಿತ ಮಾರುಕಟ್ಟೆ ಇದೆ. ಎಲ್ಲರೂ ಅಲ್ಲದಿದ್ದರು, ಕೆಲವು ಆಹಾರ ತಜ್ಞರು, ಜಿಮ್ ಮತ್ತು ಅಲ್ಲಿನ ತರಬೇತಿದಾರರು ಇದನ್ನು ಮಾರುವ ಏಜೆಂಟುಗಳಾಗಿರುತ್ತಾರೆ. ಇಂತಹ ಹೆಚ್ಚಿನ ಸಪ್ಲಿಮೆಂಟ್ಗಳಲ್ಲಿ ‘ಚೈನೀಸ್ ಗಿಡಮೂಲಿಕೆಗಳು’, ‘ಕೊರಿಯನ್ ಗಿಡಮೂಲಿಕೆಗಳು’ ಮತ್ತು ಆಯುರ್ವೇದಿಕ್ ಇತ್ಯಾದಿ ಲೇಬಲ್ಗಳು ಇರುತ್ತವೆ.


ಸ್ನಾಯುಗಳ ಬೆಳವಣಿಗೆ ಹೆಚ್ಚಿಸುತ್ತವೆ ಅಥವಾ ತೂಕ ಇಳಿಸುತ್ತವೆ ಎಂದು ಹೇಳಿಕೊಳ್ಳುವ “ಗಿಡಮೂಲಿಕೆಗಳ” ಮತ್ತು “ಡಯೆಟರಿ” ಸಪ್ಲಿಮೆಂಟ್ಗಳನ್ನು ಬಳಕೆಯಿಂದ ಪಿತ್ತ ಜನಕಾಂಗದ ಹಾನಿಗೆ ಒಳಗಾಗಿ ಆಸ್ಪತ್ರೆಗೆ ಸೇರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ಪರವಾನಗಿ ಇಲ್ಲದ ಔಷಧಿಗಳು ಮತ್ತು ಸಪ್ಲಿಮೆಂಟ್ಗಳು ಯಕೃತ್ತಿಗೆ ತೀವ್ರವಾದ ಹಾನಿಯನ್ನು ಉಂಟು ಮಾಡುತ್ತವೆ. ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ವಿಟಮಿನ್ ಮತ್ತು ಮಿನರಲ್ಗಳು ಪ್ರಕೃತಿಯಿಂದಲೇ ಸುಲಭವಾಗಿ ಪಡೆದುಕೊಳ್ಳಬಹುದು. ಹಣ್ಣುಗಳು, ತರಕಾರಿಗಳು, ಬೇರುಗಳು, ಎಲೆಗಳು, ಹೂವುಗಳು ಮತ್ತು ಕೋಶಗಳು, ಹಾಲು, ಮಾಂಸ, ಮೊಟ್ಟೆ, ಮೀನು, ಸಮುದ್ರ ಜೀವಿಗಳು. ಹೀಗೆ ಎಲ್ಲವೂ ಮನುಷ್ಯನ ಸೇವನೆಗೆ ಲಭ್ಯವಿವೆ. ಆದರೆ ಇವುಗಳಲ್ಲಿ ಕೆಲವು ಪದಾರ್ಥಗಳು ಲಭ್ಯವಿಲ್ಲದ ದೂರದ ಜಾಗಗಳಲ್ಲಿ ಬದುಕುವ ಜನರಿಗೆ ಅಥವಾ ನೈಸರ್ಗಿಕ ವಸ್ತುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹ ಅಸಮರ್ಥವಾದಾಗ ಅಥವಾ ಅಲರ್ಜಿ ಇತ್ಯಾದಿಗಳು ಇದ್ದಾಗ ಬೇರೆಯೇ ರೀತಿಯಲ್ಲಿ ವಿಟಮಿನ್ , ಮಿನರಲ್ಗಳು ಬೇಕಾಗುತ್ತವೆ ಮತ್ತು ಕ್ರೀಡಾ ಪಟುಗಳಿಗೂ ಒಮ್ಮೊಮ್ಮೆ ಇದರ ಅಗತ್ಯ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ವೈದ್ಯರು ಹೆಚ್ಚಿನ ಪೋಷಕಾಂಶಗಳನ್ನು ಪಡೆಯಲು ಪೂರಕವಾಗುವ ಸಪ್ಲಿಮೆಂಟ್ಗಳನ್ನು ಕೊಡಬಹುದು. ಆದರೆ ದೇಹದಲ್ಲಿ ಪೋಷಕಾಂಶಗಳ ಒಂದು ಸೂಕ್ಷ್ಮ ಸಮತೋಲನ ಇದ್ದು, ಅದನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತದೆ.
ಹೊಸ ಅಧ್ಯಯನವೊಂದರ ಪ್ರಕಾರ, ಸ್ನಾಯುಗಳ ಬೆಳವಣಿಗೆ ಅಥವಾ ತೂಕ ಇಳಿಕೆಯ ಉತ್ಪನ್ನಗಳಿಗೆ ಸಂಬಂಧ ಹೊಂದಿರುವ ಗಂಭೀರ ಪಿತ್ತಜನಕಾಂಗದ ಗಾಯದ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವು ತೀವ್ರ ಪ್ರಕರಣಗಳಲ್ಲಿ ಪಿತ್ತಜನಕಾಂಗದ ಕಸಿಯ ಅಗತ್ಯವೂ ಇರುತ್ತದೆ. ಕೆಲವು ಸಪ್ಲಿಮೆಂಟ್ಗಳು ಒಳ್ಳೆಯದನ್ನು ಮಾಡುವುದಕ್ಕಿಂತ ಕೆಟ್ಟದನ್ನೆ ಹೆಚ್ಚು ಮಾಡುತ್ತಿರುವುದು ಏಕೆಂದು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ ಎಂದು ಎಕ್ಸ್ಪ್ರೆಸ್ ಕೋ ಯುಕೆ ಯ ವರದಿ ಮಾಡಿದೆ.
ಸ್ನಾಯುಗಳ ಬೆಳವಣಿಗೆ ಹೆಚ್ಚಿಸುತ್ತವೆ ಅಥವಾ ತೂಕ ಇಳಿಸುತ್ತವೆ ಎಂದು ಹೇಳಿಕೊಳ್ಳುವ “ಗಿಡಮೂಲಿಕೆಗಳ” ಮತ್ತು “ಡಯೆಟರಿ” ಸಪ್ಲಿಮೆಂಟ್ಗಳನ್ನು ಬಳಕೆಯಿಂದ ಪಿತ್ತ ಜನಕಾಂಗದ ಹಾನಿಗೆ ಒಳಗಾಗಿ ಆಸ್ಪತ್ರೆಗೆ ಸೇರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ಸಪ್ಲಿಮೆಂಟ್ಗಳು ಮತ್ತು ಇತರ ಪರ್ಯಾಯ ನೈಸರ್ಗಿಕ ಚಿಕಿತ್ಸೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣದ ಅಗತ್ಯವಿದೆ ಎಂದು , ಈ ಅಧ್ಯಯನ ವರದಿಯ ಸಹ ರಚನಾಕಾರರಾದ ಡಾ,ಕೆನ್ ಲಿಯೂ ಮತ್ತು ಅವರ ತಂಡ ಅಭಿಪ್ರಾಯ ಪಟ್ಟಿದೆ.
ಸಪ್ಲಿಮೆಂಟ್ಗಳ ಕಾರಣದಿಂದ ಯಕೃತ್ತಿನ ಮೇಲೆ ಹಾನಿಯಾಗಿರುವ ಪ್ರಕರಣಗಳು ಕೇವಲ ಯೂಕೆಗೆ ಮಾತ್ರ ಸೀಮಿತವಾಗಿಲ್ಲ, ಭಾರತದಲ್ಲೂ ಈ ಆರೋಗ್ಯ ಸಮಸ್ಯೆ ಎದುರಾಗಿದೆ. ಮುಂಬೈನ ಮೀರಾ ರಸ್ತೆಯಲ್ಲಿರುವ ವೊಕಾರ್ಡ್ ಆಸ್ಪತ್ರೆಯ ನೆಫ್ರಾಲಜಿಸ್ಟ್, ಡಾ. ಮಹೇಶ್ ಪ್ರಸಾದ್ ಅವರ ಪ್ರಕಾರ, “ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ, ಗಿಡಮೂಲಿಕೆಗಳ ಸಪ್ಲಿಮೆಂಟ್ಗಳು, ನೈಸರ್ಗಿಕ ಔಷಧಿಗಳು ಮತ್ತು ಇತರ ‘ನೈಸರ್ಗಿಕ ಉತ್ಪನ್ನಗಳ’ ಬಳಕೆ ಹೆಚ್ಚುತ್ತಿದೆ ಮತ್ತು ಇದು ಜನರಿಗೆ ಅಪಾಯಕಾರಿ ಆಗಬಹುದು. ನಮ್ಮಲ್ಲಿಗೆ ಬರುವ ಬಹಳಷ್ಟು ರೋಗಿಗಳು, ಈ ಹಿಂದೆ ತೂಕ ಇಳಿಸುವ , ಗಿಡಮೂಲಿಕೆಗಳ ಅಥವಾ ಪರೀಕ್ಷೆಗೆ ಒಳಪಡದ ಸಪ್ಲಿಮೆಂಟ್ಗಳನ್ನು ಬಳಸಿದವರಾಗಿದ್ದು, ಹೆಪಟೈಟಿಸ್, ಪಿತ್ತಜನಕಾಂಗದ ಗಾಯಗಳು ಮತ್ತು ಪಿತ್ತಜನಕಾಂಗದ ಹಾನಿ ಮುಂತಾದ ಯಕೃತ್ತಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ”.
ಹೆಚ್ಚಿನವರು ಇಂತಹ ಸಪ್ಲಿಮೆಂಟ್ಗಳನ್ನು ಏಜೆಂಟ್ಗಳು ಅಥವಾ ಮೇಲ್ ಮೂಲಕ ಮತ್ತು ಕೆಲವೊಮ್ಮೆ ಔಷಧಿ ಅಂಗಡಿಗಳಲ್ಲಿ ತೆಗೆದುಕೊಳ್ಳುತ್ತಾರೆ. ಪಿತ್ತಜನಕಾಂಗದ ಸಮಸ್ಯೆ ಅಭಿವೃದ್ಧಿಗೊಳ್ಳಲು ಕೆಲವೊಮ್ಮೆ ತಿಂಗಳುಗಳು ಅಥವಾ ವರ್ಷಗಳೇ ತೆಗೆದುಕೊಳ್ಳಬಹುದು ಮತ್ತು ಗಾಯ ತೀವ್ರ ಆಗುವವರೆಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. “ಈ ರೋಗಿಗಳಲ್ಲಿ ಕಿಬ್ಬೊಟ್ಟೆ ನೋವು, ಊತ, ವಾಕರಿಕೆ, ವಾಂತಿ, ಆಯಾಸ, ಗಾಢ ಬಣ್ಣದ ಮೂತ್ರ, ತುರಿಕೆ, ಕಾಲುಗಳಲ್ಲಿ ಊತ ಮತ್ತು ಕಾಮಾಲೆಯಂತಹ ಲಕ್ಷಣಗಳು ಕಂಡು ಬರುತ್ತವೆ.ಕೆಲವರು ಇದನ್ನು ವೈದ್ಯರಿಗೆ ಹೇಳುತ್ತಾರೆ, ಇನ್ನು ಕೆಲವರು ಮುಜುಗರ ಪಟ್ಟುಕೊಂಡು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ಯಕೃತ್ತಿನ ಹಾನಿಗೆ ಸ್ಪಷ್ಟವಾದ ಕಾರಣ ಏನೆಂದು ತಿಳಿದುಕೊಳ್ಳುವುದು ವೈದ್ಯರಿಗೆ ಕಷ್ಟವಾಗುತ್ತದೆ” ಎನ್ನುತ್ತಾರೆ ಡಾ. ಮಹೇಶ್.
ಈ ಸಪ್ಲಿಮೆಂಟ್ಗಳಿಗೆ ಅನಿಯಂತ್ರಿತ ಮಾರುಕಟ್ಟೆ ಇದೆ. ಎಲ್ಲರೂ ಅಲ್ಲದಿದ್ದರು, ಕೆಲವು ಆಹಾರ ತಜ್ಞರು, ಜಿಮ್ ಮತ್ತು ಅಲ್ಲಿನ ತರಬೇತಿದಾರರು ಇದನ್ನು ಮಾರುವ ಏಜೆಂಟುಗಳಾಗಿರುತ್ತಾರೆ. ಇತಂಹ ಹೆಚ್ಚಿನ ಸಪ್ಲಿಮೆಂಟ್ಗಳಲ್ಲಿ ‘ಚೈನೀಸ್ ಗಿಡಮೂಲಿಕೆಗಳು’, ‘ಕೊರಿಯನ್ ಗಿಡಮೂಲಿಕೆಗಳು’ ಮತ್ತು ಆಯುರ್ವೇದಿಕ್ ಇತ್ಯಾದಿ ಲೇಬಲ್ಗಳು ಇರುತ್ತವೆ.
ತೂಕ ಇಳಿಸುವ ಹಸಿರು ಚಹಾ ಅಸಲಿಗೆ ಚಹಾವೇ ಅಲ್ಲ!!
“ಹಾಗೆಯೇ, ಸಾಮಾನ್ಯವಾಗಿ ತೂಕ ಇಳಿಸುವ ಸಪ್ಲಿಮೆಂಟ್ಗಳಲ್ಲಿ ಕಂಡು ಬರುವ ಹಸಿರು ಚಹಾದ ಸಾರವು ಯಕೃತ್ತಿಗೆ
ಹಾನಿ ಮಾಡುವ ಸಾಮಥ್ರ್ಯವನ್ನು ಹೊಂದಿದೆ. “ ಹಸಿರು ಚಹಾದ ಸಾರವುಳ್ಳ ಪೂರಕಗಳು ,ಎಲೆಗಳನ್ನು ಬಿಸಿನೀರಿನಲ್ಲಿ ಹಾಕಿ ತಯಾರಿಸಿದಂತವುಗಳಲ್ಲ. ಬದಲಿಗೆ ಅವು ಹಸಿರು ಚಹಾದಲ್ಲಿ ಕಂಡುಬರುವ ನಿರ್ದಿಷ್ಟ ಸಂಯುಕ್ತಗಳ ಸಾಂದ್ರೀಕೃತ ಪ್ರಮಾಣಗಳನ್ನು ಹೊಂದಿರುವ ಮಾತ್ರೆಗಳಾಗಿವೆ” ಎನ್ನುತ್ತಾರೆ ಡಾ.ಮಹೇಶ್.
ಯಕೃತ್ತನ್ನು ಕಾಪಾಡುವುದು ಹೇಗೆ?
ಡಾ.ಮಹೇಶ್ ಪ್ರಸಾದ್ ಇದಕ್ಕಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಾರೆ.
1. ನೀವು ಬಳಸುತ್ತಿರುವ ಯಾವುದೇ ಉತ್ಪನ್ನ ಅಥವಾ ಸಪ್ಲಿಮೆಂಟ್ ಎಫ್ಡಿಎ ಪ್ರಮಾಣಪತ್ರ ಹೊಂದಿದೆಯೇ ಎಂದು ಖಾತರಿಪಡಿಸಿಕೊಳ್ಳಿ
2. ನಿಮ್ಮಷ್ಟಕ್ಕೆ ಯಾವುದೇ ಉತ್ಪನ್ನವನ್ನು ಬಳಸಬೇಡಿ. ಯಾವಾಗಲೂ ವೈದ್ಯರ ಸಲಹೆ ಪಡೆಯುವುದು ಉತ್ತಮ.
3. ಸಪ್ಲಿಮೆಂಟ್ ಮತ್ತು ಉತ್ಪನ್ನಗಳ ಮೇಲೆ ಅವಲಂಬಿತವಾಗುವ ಬದಲು, ಒಳ್ಳೆಯ ಆಹಾರ ಕ್ರಮ ಅನುಸರಿಸಿ ಮತ್ತು ವ್ಯಾಯಾಮ ಮಾಡಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments