2023ರ ಹೊಸ ವರ್ಷಕ್ಕೆ ನಿಮಗೆಲ್ಲ ಸುಸ್ವಾಗತ

Webdunia
ಭಾನುವಾರ, 1 ಜನವರಿ 2023 (07:28 IST)
ಹೋಯ್ತು ಹಳೆ ವರ್ಷ.. ಬಂತು ಹೊಸ ವರ್ಷ.. ಬನ್ನಿ ಎಂಜಾಯ್ ಮಾಡೋಣ. ʼನಿನ್ನೆ ನಿನ್ನೆಗೆ.. ನಾಳೆ ನಾಳೆಗೆ.. ಇಂದು ನಮ್ಮದೇ, ಚಿಂತೆ ಏತಕೆ..ʼ ಎಂಬ ಹಾಡು ಎಷ್ಟು ಸೊಗಸಾಗಿದೆ ಅಲ್ವಾ. ಸವಿನೆನಪುಗಳು ಮನದ ಚಿತ್ರಪಟ ಸೇರಲಿ.

ಕಹಿ ನೆನಪುಗಳು ಹಳೆ ಕ್ಯಾಲೆಂಡರ್ನಂತೆ ಕಸದ ಬುಟ್ಟಿಗೆ ಹೋಗಲಿ. ಹೊಸ ಹುರುಪು, ಭರವಸೆ, ಆಸೆ, ಗುರಿಗಳೊಂದಿಗೆ ಹೆಜ್ಜೆ ಇಡೋಣ ಅಂತಾ ಸಂಕಲ್ಪ ಮಾಡುವ ಸಮಯವಿದು.

ಹೊಸ ವರ್ಷವನ್ನು ಖುಷಿ, ಸಂಭ್ರಮಾಚರಣೆ ಮೂಲಕ ಸ್ವಾಗತಿಸುವುದು ಸಾಮಾನ್ಯ. 2022ಕ್ಕೆ ಗುಡ್ಬೈ.. 2023 ಹಾಯ್ ಹಾಯ್ ಹೇಳೋದಕ್ಕೊಂದು ಜೋಶ್ ಅಂತು ಇದ್ದೇ ಇರುತ್ತೆ. ನ್ಯೂ ಇಯರ್ ಅನ್ನು ಆರಂಭದ ದಿನ ಎಲ್ಲರೂ ಖುಷಿಯಿಂದ ಬರಮಾಡಿಕೊಳ್ಳುತ್ತಾರೆ.

ಮನೆ ಹಾಗೂ ಸುತ್ತಮುತ್ತಲ ವಾತಾವರಣ ಕಲರ್ಫುಲ್ ಆಗಿರುತ್ತೆ. ಕುಟುಂಬದವರು, ನೆರೆಹೊರೆಯವರಿಗೆ ಸಿಹಿ ಹಂಚಿ ಸಂಭ್ರಮಿಸುವುದು, ಪ್ರೀತಿ ಪಾತ್ರರಿಗೆ ಶುಭ ಸಂದೇಶ ಕಳುಹಿಸುವುದು, ಕ್ಲಬ್-ಪಬ್ನಲ್ಲಿ ಕುಣಿದು ಕುಪ್ಪಳಿಸುವುದು, ಬಿಯರ್ ಚಿಯರ್ಸ್ ಹೇಳುವುದು,

ಇಷ್ಟದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು.. ಎಲ್ಲ ಕೂಡ ಪ್ರತಿ ವರ್ಷದಂತೆಯೇ. ಆದರೆ ವರ್ಷ ವರ್ಷ ಅದಕ್ಕೊಂದು ಹೊಸ ರೂಪ ಇರುತ್ತೆ. ಪ್ರವಾಸಿ ತಾಣಗಳು ಬದಲಾಗಿರುತ್ತವೆ, ಕೆಲವರಿಗೆ ಸ್ನೇಹಿತರು ಹಾಗೂ ಸಂಭ್ರಮದ ತಾಣಗಳಲ್ಲಿ ಚೇಂಜ್ ಆಗಿರುತ್ತೆ. 

ಒಂದೆಡೆ ನಮ್ಮಲ್ಲೇ ಚಿಂತನ-ಮಂಥನ ಕೂಡ ನಡೆಯುತ್ತೆ. ಹೊಸ ವರ್ಷದ ಹೊಸ್ತಿಲಲ್ಲಿ ಕುಳಿತು ನಾವು ಗಂಭೀರವಾಗಿ ಯೋಚಿಸುತ್ತೇವೆ. ವರ್ಷಗಳು ಎಷ್ಟು ಬೇಗ ಉರುಳುತ್ತಿವೆ? ಹೊಸ ವರ್ಷವನ್ನಂತು ಸಂಭ್ರಮದಿಂದಲೇ ಸ್ವಾಗತಿಸುತ್ತೇವೆ.

ಆದರೆ ವರ್ಷಗಳು ಬದಲಾದಂತೆ ನಾವು ಕೂಡ ಬದಲಾಗಿದ್ದೀವಾ? ಹಿಂದೆ ಅಂದುಕೊಂಡಿದ್ದನ್ನು ಸಾಧಿಸಿದ್ದೀವಾ? ಇಟ್ಟಿದ್ದ ಗುರಿ ಮುಟ್ಟಿದ್ದೀವಾ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಅದಕ್ಕೆ ಉತ್ತರವೂ ಸಿಕ್ಕಿರುತ್ತದೆ. ಒಂದು ವೇಳೆ ನಾವು ಅಂದುಕೊಂಡಿದ್ದು, ಇಟ್ಟಿದ್ದ ಗುರಿಯನ್ನು ಸಾಧಿಸಿಲ್ಲ ಎಂದಾದರೆ ಈ ಬಾರಿ ಅದು ಸಾಧ್ಯವಾಗಬೇಕು ಎಂಬ ಸಂಕಲ್ಪ ತೊಡಬೇಕು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ
Show comments