Webdunia - Bharat's app for daily news and videos

Install App

ಹಳದಿ ಹಲ್ಲುಗಳ ಸಮಸ್ಯೆ: ಇಲ್ಲಿದೆ ಮನೆಮದ್ದಿನ ಪರಿಹಾರ

Webdunia
ಭಾನುವಾರ, 25 ಜುಲೈ 2021 (10:00 IST)
ಬೆಳ್ಳಗೆ ಪಳಪಳನೆ ಹೊಳೆಯುವ  ಹಲ್ಲುಗಳಿಗಾಗಿ ಮನೆಯಲ್ಲಿ ಪ್ರಯತ್ನಿಸಬಹುದಾದ ಈ ಕೆಲವು ಉಪಾಯಗಳು ಇಲ್ಲಿವೆ. ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಹಲ್ಲುಗಳನ್ನು ಬೆಳ್ಳಗೆ ಮಾಡಿಕೊಳ್ಳಿ.


ಜನರು ಮೊದಲು ಗಮನಿಸುವುದೇ ನಮ್ಮ ಸ್ಮೈಲ್(ನಗು). ನಮ್ಮ ಹಲ್ಲುಗಳು ಹೃದಯಸ್ಪರ್ಶಿ ಸ್ಮೈಲ್ನ ಅವಶ್ಯಕ ಭಾಗವಾಗಿದೆ. ನಾವು ಹೆಚ್ಚಾಗಿ ಮುತ್ತಿನಂತೆ ಇರುವ ನಮ್ಮ ಹಲ್ಲುಗಳನ್ನು ನಿರ್ಲಕ್ಷಿಸುತ್ತೇವೆ. ನಮ್ಮ ಹಲ್ಲುಗಳು ಮತ್ತು ಬಾಯಿಯ ಆರೋಗ್ಯದ ಸ್ಥಿತಿ ನಮ್ಮ ಒಟ್ಟಾರೆ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ನಾವು ದಿನಕ್ಕೆ ಒಂದು ಅಥವಾ ಎರಡು ಬಾರಿ ಹಲ್ಲುಜ್ಜುತ್ತೇವೆ. ಆದರೆ ಕನ್ನಡಿಯಲ್ಲಿ ನಮ್ಮ ಹಲ್ಲುಗಳು ಹಳದಿ ನಕ್ಷತ್ರದಂತೆ ಕಾಣಿಸುತ್ತವೆ. ಆದರೆ , ನಾನು ದಿನಕ್ಕೆ ಎರಡು ಬಾರಿ ಹಲ್ಲುಜ್ಜುತ್ತಿದ್ದೇನೆ ಎಂದು ನೀವು ವಾದಿಸಬಹುದು. ಅದು ಸಾಕಾಗುವುದಿಲ್ಲ. ಹಲ್ಲುಗಳು ಏಕೆ  ಹಾಗೂ ಹೇಗೆ ಕಲೆಯಾಗುತ್ತವೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು.

ಹಳದಿ ಹಲ್ಲುಗಳಿಗೆ ಕಾರಣಗಳು:
ಹಲವಾರು ಆಹಾರ ಪದಾರ್ಥಗಳು ಹಲ್ಲುಗಳ ಮೇಲೆ ಕಲೆಗಳನ್ನು ಉಂಟುಮಾಡಬಹುದು. ಅವುಗಳಲ್ಲಿ ಕಾಫಿ, ಚಹಾ, ಕೋಲಾ, ವೈನ್ ಮತ್ತು ಕೆಲವು ಹಣ್ಣುಗಳು ಮತ್ತು ತರಕಾರಿಗಳು ಸೇರಿವೆ.
ತಂಬಾಕಿನ ಬಳಕೆ: ಧೂಮಪಾನ ಮಾಡುವುದರಿಂದ ಅಥವಾ ತಂಬಾಕನ್ನು ಅಗಿಯುವುದರಿಂದ ಹಲ್ಲುಗಳು ಕಲೆ ಆಗುತ್ತವೆ. ಹಲ್ಲುಜ್ಜಲು ಅಥವಾ ಸ್ನಾನ ಮಾಡಲು, ಅಡುಗೆ ಮಾಡಲು, ಕುಡಿಯಲು ಹಾಗೂ ಇತ್ಯಾದಿಗಳಿಗೆ ಗಡುಸಾದ ನೀರು ಅಥವಾ ಅಶುದ್ಧ ನೀರನ್ನು ಬಳಸುವುದೂ ಒಂದು ಕಾರಣವಾಗಬಹುದು.
ಕಳಪೆ ಹಲ್ಲಿನ ನೈರ್ಮಲ್ಯ, ಕೆಲವು ಆರೋಗ್ಯ ಪರಿಸ್ಥಿತಿಗಳು ಅಥವಾ ಕೆಲವು ಔಷಧಿಗಳನ್ನು ಸಹ ಕಾರಣವಾಗಬಹುದು. ವಯಸ್ಸಾದ ಅಥವಾ ಜೀನ್ಗಳ ಅಂಶವು ಕಾರಣವಾಗಬಹುದು.ನೀವು ಪರಿಗಣಿಸಬಹುದಾದ ಕೆಲವು ಮನೆಮದ್ದುಗಳಿವೆ. ಬೆಳ್ಳಗೆ ಪಳಪಳನೆ ಹೊಳೆಯುವ  ಹಲ್ಲುಗಳಿಗಾಗಿ ಮನೆಯಲ್ಲಿ ಪ್ರಯತ್ನಿಸಬಹುದಾದ ಈ ಕೆಳಗಿನ ಆಯ್ಕೆಗಳನ್ನು ಪ್ರಯತ್ನಿಸಿ.
ಅಡಿಗೆ ಸೋಡಾದೊಂದಿಗೆ ಬ್ರಷ್ ಮಾಡಿ: ಒಂದು ಬಟ್ಟಲಿನಲ್ಲಿ ಒಂದು ಚಮಚ ಅಡಿಗೆ ಸೋಡಾ ಮತ್ತು ಒಂದು ಚಮಚ ನೀರನ್ನು ಸಣ್ಣ ಬಟ್ಟಲಿನಲ್ಲಿ ಮಿಶ್ರಣ ಮಾಡಿ (ಎರಡು ಪದಾರ್ಥಗಳು ಸರಿಸುಮಾರು ಸಮಾನವಾಗಿರಬೇಕು). ನಿಮ್ಮ ಬೆರಳುಗಳಿಂದ ಅಥವಾ ಮೃದುವಾದ ಹಲ್ಲುಜ್ಜುವ ಬ್ರಷ್ನಿಂದ ನಿಮ್ಮ ಹಲ್ಲುಗಳನ್ನು ಉಜ್ಜಿ. ಸೌಮ್ಯವಾಗಿ ಉಜ್ಜಿ ಮತ್ತು ಬ್ರಷ್ನಿಂದ ಒಸಡುಗಳು ಅಥವಾ ಹಲ್ಲಿನ ದಂತಕವಚವನ್ನು ಹಾನಿ ಮಾಡಬೇಡಿ. ಸುಮಾರು ಎರಡು ನಿಮಿಷಗಳ ಕಾಲ ವೃತ್ತಾಕಾರದ ರೀತಿಯಲ್ಲಿ ಬ್ರಷ್ ಮಾಡಿ. ಹಲ್ಲುಗಳನ್ನು ಮುಚ್ಚಿ ಮತ್ತು ಎರಡು ನಿಮಿಷಗಳ ಕಾಲ ನಿಧಾನವಾಗಿ ಬ್ರಷ್ ಮಾಡಿ. ಅಂತಿಮವಾಗಿ, ನಿಮ್ಮ ಬಾಯಿಯನ್ನು ನೀರು ಅಥವಾ ಮೌತ್ವಾಶ್ನಿಂದ ಚೆನ್ನಾಗಿ ತೊಳೆಯಿರಿ. ಹಲ್ಲುಜ್ಜುವ ಬ್ರಷ್ ಅನ್ನೂ ತೊಳೆಯಿರಿ.

ಎಣ್ಣೆಯಿಂದ ತೊಳೆಯುವುದು: ರೋಗಕಾರಕಗಳು ಬಾಯಿಗೆ ಬರದಂತೆ ನೋಡಿಕೊಳ್ಳಲು ಇದು ಪ್ರಾಚೀನ ಭಾರತೀಯ ವಿಧಾನವಾಗಿದೆ. ಇದಕ್ಕಾಗಿ, ನಿಮ್ಮ ಬಾಯಿ ಮತ್ತು ಹಲ್ಲುಗಳಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ನೀವು 15-20 ನಿಮಿಷಗಳ ಕಾಲ ಒಂದು ಚಮಚ ಎಣ್ಣೆಯಿಂದ ಬಾಯಿಯನ್ನು ತೊಳೆಯಬೇಕು. ಮೆಡಿಕಲ್ ನ್ಯೂಸ್ ಟುಡೆ ವರದಿ ಮಾಡಿರುವ ಪ್ರಕಾರ, ಎಣ್ಣೆಯ ಬಳಕೆಯಿಂದ ಹಲ್ಲುಗಳನ್ನು ಬಿಳುಪಾಗುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಅದು ಹಲ್ಲುಗಳ ಮೇಲ್ಮೈಯಲ್ಲಿರುವ ಕಲೆಗಳನ್ನು ತೆಗೆದುಹಾಕುತ್ತದೆ ಎಂಬುದಕ್ಕೆ ಪುರಾವೆಗಳಿವೆ.
ಹೈಡ್ರೋಜನ್ ಪೆರಾಕ್ಸೈಡ್ ಪೇಸ್ಟ್ ಅಥವಾ ಮೌತ್ವಾಶ್: ಹೈಡ್ರೋಜನ್ ಪೆರಾಕ್ಸೈಡ್ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್. ಅಡಿಗೆ ಸೋಡಾಕ್ಕೆ ಒಂದು ಟೀ ಚಮಚ ಹೈಡ್ರೋಜನ್ ಪೆರಾಕ್ಸೈಡ್ ಸೇರಿಸಿ ಮೊದಲು ಮೃದುವಾದ, ದಪ್ಪವಾದ ರೀತಿಯಲ್ಲಿ ಪೇಸ್ಟ್ ಮಾಡಿಕೊಳ್ಳಿ. ನಂತರ ಹಲ್ಲುಗಳಿಗೆ ಹಚ್ಚಿ, 2-3 ನಿಮಿಷಗಳ ನಂತರ ತೊಳೆಯಿರಿ. ಒಂದೇ ಪ್ರಯತ್ನದಲ್ಲಿ ಫಲಿತಾಂಶಗಳು ಗೊತ್ತಾಗುವುದಿಲ್ಲ. ಕೆಲವು ದಿನಗಳಲ್ಲಿ ಇದೇ ರೀತಿಯ ಪೇಸ್ಟ್ ಬಳಸಿ. ಅಡಿಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಜೊತೆಗೆ ಸ್ವಲ್ಪ ನೀರು ಬಳಸಿ ನೀವು ಮೌತ್ವಾಶ್ ಅನ್ನೂ ಮಾಡಬಹುದು. ಆದರೆ ಮನೆಯಲ್ಲಿ ಇವುಗಳನ್ನು ಪ್ರಯತ್ನಿಸುವ ಮೊದಲು ನಿಮ್ಮ ದಂತವೈದ್ಯರಿಂದ ಅನುಮತಿ ಪಡೆಯಬೇಕೆಂದು ನಾವು ಬಲವಾಗಿ ಸೂಚಿಸುತ್ತೇವೆ.
ಹಣ್ಣಿನ ಸಿಪ್ಪೆಯಿಂದ ಹಲ್ಲು ಉಜ್ಜುವುದು: ಕೆಲವು ಹಣ್ಣುಗಳ ಸಿಪ್ಪೆಗಳು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಸೈದ್ಧಾಂತಿಕವಾಗಿ ಹಲ್ಲುಗಳನ್ನು ಬಿಳುಪುಗೊಳಿಸಲು ಸಹಾಯ ಮಾಡುತ್ತದೆ. ಹಲ್ಲುಗಳನ್ನು ಬಿಳುಪುಗೊಳಿಸುವ ಟ್ರಿಕ್ಗಾಗಿ, ಬಾಳೆಹಣ್ಣು, ಕಿತ್ತಳೆ ಅಥವಾ ನಿಂಬೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಸುಮಾರು 2 ನಿಮಿಷಗಳ ಕಾಲ ಅದನ್ನು ಉಜ್ಜಿಕೊಳ್ಳಿ, ನಂತರ ನಿಮ್ಮ ಬಾಯಿಯನ್ನು ಚೆನ್ನಾಗಿ ತೊಳೆದು ಹಲ್ಲುಜ್ಜಿಕೊಳ್ಳಿ. ಇದು ಬಿಳಿ ಹಲ್ಲುಗಳಿಗೆ ಸಹಾಯವಾಗುತ್ತದೆ.
ನೀವು ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಬೇಕು.
ಪಾನೀಯಗಳನ್ನು ಸೇವಿಸಿದ ನಂತರ ಬಾಯಿ ತೊಳೆಯಿರಿ.
ಕಾಫಿ, ಚಹಾ ಅಥವಾ ಸೋಡಾ ಸೇವಿಸುವಾಗ ಸ್ಟ್ರಾ ಬಳಸಿ.
ತಂಬಾಕು ಅಥವಾ ತಂಬಾಕು ಉತ್ಪನ್ನಗಳ ಯಾವುದೇ ಬಳಕೆಯನ್ನು ಬಿಟ್ಟುಬಿಡಿ.
ವಿಶೇಷವಾಗಿ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments