Select Your Language

Notifications

webdunia
webdunia
webdunia
webdunia

ಈ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಕೇವಲ 1 ರೂ.!

ಈ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಕೇವಲ 1 ರೂ.!
NewDelhi , ಶುಕ್ರವಾರ, 12 ಮೇ 2017 (06:57 IST)
ನವದೆಹಲಿ: ಇಂದಿನ ದುಬಾರಿ ಯುಗದಲ್ಲಿ ವೈದ್ಯಕೀಯ ವೆಚ್ಚ ಸಾಮಾನ್ಯರ ಕೈಗೆಟುಕುವಂತಿಲ್ಲ. ಆಸ್ಪತ್ರೆಗೆ ಹೋಗುವುದೆಂದರೆ ಭಯ ಬೀಳುವ ಪರಿಸ್ಥಿತಿ. ಅಂತಹದ್ದರಲ್ಲಿ ಮುಂಬೈಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸಾ ವೆಚ್ಚ ಕೇವಲ 1 ರೂ. ಎಂದರೆ ನೀವು ನಂಬಲೇಬೇಕು.

 
ಮುಂಬೈ ಬಳಿಯ ಕುರ್ಲಾ  ಎಂಬಲ್ಲಿ ರೈಲ್ವೇ ನಿಲ್ದಾಣದ ಪಕ್ಕ ಈ ಅಗ್ಗದ ಆಸ್ಪತ್ರೆ ನಿರ್ಮಿಸಲಾಗಿದೆ. ಡಾ. ರಾಹುಲ್ ಘುಲೆ ಮತ್ತು ಡಾ. ಅಮೋಲ್ ಘುಲೆ ಎಂಬ ಸಹೋದರರ ಕನಸಿನ ಕೂಸು ಈ ಆಸ್ಪತ್ರೆ.

ರೈಲ್ವೇ ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ಮತ್ತು ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಆಸ್ಪತ್ರೆ ನಿರ್ಮಿಸಲಾಗಿದೆ. ಕಡಿಮೆ ವೆಚ್ಚದ ಆಸ್ಪತ್ರೆ ಎಂಬ ಮಾತ್ರಕ್ಕೆ ಇಲ್ಲಿ ವೈದ್ಯರ ಕೊರತೆಯಿಲ್ಲ.

ನುರಿತ ತಜ್ಞ ವೈದ್ಯರು ದಿನ ಪೂರ್ತಿ ರೋಗಿಗಳ ಸೇವೆಗೆ ಸಿದ್ಧರಾಗಿರುತ್ತಾರೆ. ಮೊದಲ ದಿನವೇ ಈ ಆಸ್ಪತ್ರೆಗೆ 60 ರೋಗಿಗಳು ಭೇಟಿಯಾಗಿದ್ದಾರಂತೆ. ಅದರಲ್ಲೂ ಹೆಚ್ಚಿನವರು ಹಿರಿಯ ನಾಗರಿಕರು. ಇದಕ್ಕಿಂತ ದೊಡ್ಡ ಸಮಾಜ ಸೇವೆ ಇದೆಯೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಅಂದ ಹೆಚ್ಚಿಸಲು ಏನೇನು ಮಾಡಬೇಕು?