Select Your Language

Notifications

webdunia
webdunia
webdunia
webdunia

ಬಾಣಂತಿ ಮಹಿಳೆಗೆ ಕಾಡುವ 'ಬಾಣಂತಿ ಸನ್ನಿ'

ಬಾಣಂತಿ ಮಹಿಳೆಗೆ ಕಾಡುವ 'ಬಾಣಂತಿ ಸನ್ನಿ'
ಚೆನ್ನೈ , ಶನಿವಾರ, 22 ನವೆಂಬರ್ 2014 (12:24 IST)
ಸರಿತಳಿಗದು ಚೊಚ್ಚಲ ಹೆರಿಗೆ. ಮಗು ಕೂಡಾ ಗಂಡು. ಮನೆಯವರ ಸಂಭ್ರಮ ಮತ್ತು ಸಂತಸಕ್ಕೆ ಪಾರವೇ ಇರುವುದಿಲ್ಲ. ತಾಯಿ ಮಗು ಮನೆಯವರ, ಬಂಧುಗಳ ಆರೈಕೆಯಲ್ಲಿ ಸಮಾಧಾನದಿಂದ ಇರುತ್ತಾರೆ.
 
ಇದ್ದಕ್ಕಿಂದಂತೆ ಸರಿತಾ ಖಿನ್ನಳಾಗತೊಡಗುತ್ತಾಳೆ. ಮನೆಯವರ ಕೂಗಿಗೆ ಉತ್ತರಿಸದಷ್ಟು ಮಂಕಾಗಿದ್ದಳೆ. ಮಗು ಅತ್ತು ಕೆರೆದರೂ ಕಿವಿ ಕೇಳಿಸದ ಹಾಗೆ ಎಲ್ಲೋ ನೋಡಿ ಕುಳಿತಿರುತ್ತಾಳೆ. ಸ್ನಾನಕ್ಕೂ ಊಟ ಮಾಡಲೂ ಬಲವಂತ ಮಾಡಬೇಕು. ಎನಾಯಿತು ಎಂದರೆ ಎನಿಲ್ಲ ಎನ್ನುತ್ತಾಳೆ. ರಾತ್ರಿಯಿಡಿ ನಿದ್ದೆ ಮಾಡದೆ ಎಚ್ಚರವಾಗಿದ್ದು, ಸುತ್ತಲೂ ನೋಡುತ್ತಿರುತ್ತಾಳೆ.  
 
ಮನೆಯವರು ಹೆದರಿ ಯಾರದೋ ದೃಷ್ಟಿ ತಾಗಿದೆ ಎಂದು ಮಂತ್ರವಾದಿಯ ತಾಯಿತ ತಂದು ಕಟ್ಟುತ್ತಾರೆ. ಆದರೂ ಸರಿತಾಳ ಬವಣೆ ಕಡಿಮೆಯಾಗುವುದಿಲ್ಲ.
 
ಬಾಣಂತಿ ಸನ್ನಿ
ಹೆರಿಗೆಯಾದ ನಂತರ ಬಾಣಂತಿಯರಲ್ಲಿ ಕಂಡುಬರುವ ಮೇಲಿನ ಎಲ್ಲಾ ರೀತಿಯ ಚುಟುವಟಿಕೆಗಳಿಗೆ ಬಾಣಂತಿ ಸನ್ನಿ ಕಾರಣ. ಇದು ಬಾಣಂತಿಯರಲ್ಲಿ ಕಂಡು ಬರುವ ತೀವ್ರ ರೀತಿಯ ಮಾನಸಿಕ  ಖಾಯಿಲೆ ಇದನ್ನು(puereperal psychossis) ಅಥವಾ ಬಾಣಂತಿ ಸನ್ನಿ ಎಂದು ಗುರುತಿಸುತ್ತಾರೆ. 
 
ಅನುವಂಶಿಕವಾಗಿರುವ ಕಾರಣಗಳು, ದೈಹಿಕ ಕಾಯಿಲೆಗಳು,ಮಾನಸೀಕ ಒತ್ತಡ, ಗರ್ಭಧಾರಣೆ ಮತ್ತು ಹೆರಿಗೆಯು ವ್ಯಕ್ತಿಯ ಮೇಲೆ ಮಾಡುವ ದುಷ್ಪರಿಣಾಮವನ್ನು ಬಾಣಂತಿ ಸನ್ನಿ ಎಂದು ತಿಳಿಯಲಾಗಿದೆ.
 
ಕೆಲವರಲ್ಲಿ ಇದು ಸ್ವಲ್ಪ ಸಮಯ ಇದ್ದು ಹೋಗುತ್ತದೆ. ಆದರೆ ಕೆಲವೊಮ್ಮೆ ವಿಪರೀತಕ್ಕೆ ತಲುಪಿ ಸ್ಕಿಜೋಫ್ರೇನಿಯಾ ಮತ್ತು ಅಫೆಕ್ಟಿವ್ ಡಿಸಾರ್ಡರ್ ಆಗಿ ಪರಿವರ್ತಿತಗೊಳ್ಳಬಹುದು.
 
ಸಾಮಾನ್ಯ ಲಕ್ಷಣಗಳು,
*ಹೆರಿಗೆ ನಂತರದ 8ನೇ ಅಥವಾ 10 ನೇ ದಿನದಲ್ಲಿ ಕಾಣಿಸಿಕೊಳ್ಳುತ್ತದೆ.
* ಮಂಕುತನ ಚಡಪಡಿಕೆ ಮತ್ತು ಅತೀ ಚಟುವಟಿಕೆ
* ಭಾವನೆಗಳ ಏರುಪೇರು, ವಿನಾ ಕಾರಣ ಅಳು- ನಗು-ಕೋಪ ಮತ್ತು ಭಯ
*ಭ್ರಮೆಗಳು ತಪ್ಪು ಕಲ್ಪನೆ
* ಶಿಶುವಿನ ಮತ್ತು ತನ್ನ ಬೇಕು ಬೇಡಗಳ ಬಗ್ಗೆ ಉದಾಸಿನ
*ವಿಚಿತ್ರ ನಡೆನುಡಿ
*ಆಹಾರ ಮತ್ತು ನಿದ್ರೆಯಲ್ಲಿ ವ್ಯತ್ಯಯ
*ಸ್ವಚ್ಚತೆ ಬಗ್ಗೆ ಉದಾಸಿನ
*ಹಿಂಸಾಚಾರ ಮತ್ತು ಆತ್ಮ ಹತ್ಯೆ ಪ್ರಯತ್ನ
* ತೀವ್ರವಾದ ಗೊಂದಲ
 
ಯಾರಲ್ಲಿ ಕಾಣಿಸಿಕೊಳ್ಳುತ್ತದೆ
*ಚೊಚ್ಚಲ ಹೆರಿಗೆ.
*ಇಷ್ಟವಾಗದ ಗರ್ಭಧಾರಣೆ.
*ಕುಟುಂಬದಲ್ಲಿ ಮಾನಸಿಕ ಖಾಯಿಲೆಯಿದ್ದರೆ.
*ಗರ್ಭಧಾರಣಾ ಅವಧಿಯಲ್ಲಿ ಆರೋಗ್ಯದ ಕೊರತೆ.
*ಗರ್ಭಧಾರಣೆಯ ಅಂತಿಮ ಅವಧಿಯಲ್ಲಿ ನಂಜೇರುವುದು, ರಕ್ತದೊತ್ತಡ ಏರುವುದು, ಫೀಟ್ಸ್.
*ಹೆರಿಗೆ ಕಷ್ಟ ಮತ್ತು ನಿಧಾನವಾಗುವುದು.
*ಹೆರಿಗೆಯ ಬಳಿಕ ಆಗುವ ವಿಪರೀತ ರಕ್ತ ಸ್ರಾವ.
*ಹೆರಿಗೆಯ ನಂತರ ಬಾಣಂತಿ ಸೋಂಕಿಗೆ ತುತ್ತಾಗಿ, ಜ್ವರ ಕಾಣಿಸಿಕೊಳ್ಳುವುದು.
*ಹೆರಿಗೆಯ ನಂತರ ಸ್ತ್ರೀ ವಿಪರೀತ ನೋವು, ನಿರಾಶೆ,ಹಿರಿಯರ ನಿರ್ಲಕ್ಷ್ಯ.
*ಅನಾರೋಗ್ಯ ಪೀಡಿತ ಮಗು ಹುಟ್ಟುವ ಕಾರಣದಿಂದ. 
 
ಸನ್ನಿಗೆ ಸುಶ್ರೂಶೆ
*ಬಾಣಂತಿ ಸನ್ನಿ ಕಾಣಿಸಿದ ಕೂಡಲೇ ಸಾಮಾನ್ಯ ವೈದ್ಯರು ಅಥವಾ ಮನೋವೈದ್ಯರಿಗೆ ತೋರಿಸಿ.
*ಚಿತ್ತ ವಿಕಲತೆ ನಿರೋಧಕ ಔಷಧಿ ಖಿನ್ನತೆ ಮತ್ತು ಆತಂಕ ನಿವಾರಣಾ ಔಷಧಿಯನ್ನು ಎರಡರಿಂದ ಮೂರು ದಿನಗಳ ಕಾಲ ನೀಡಬೇಕಾಗುತ್ತದೆ
*ವಿಪರೀತಕ್ಕೆ ತಲುಪಿದ್ದರೆ ವಿದ್ಯುತ್ ಕಂಪನ ಚಿಕಿತ್ಸೆ(ECT)ಯ ಮೂಲಕ ಚಿಕಿತ್ಸೆ ನೀಡಬೇಕಾಗುತ್ತದೆ.
*ಬಾಣಂತಿಯರಿಗೆ ಇರುವ ಅನಿಮಿಯಾ ಖಾಯಿಲೆಯನ್ನು ಸರಿಪಡಿಸಬೇಕು.
*ಮಗುವಿನ ಲಾಲನೆ ಪಾಲನೆಯಲ್ಲಿ ಪ್ರೋತ್ಸಾಹ ನೀಡಿ.
*ಸರಿಯಾಗಿ ಮನೆಯವರ ಆಸರೆ ವಿಶ್ವಾಸ ಸಿಗಲಿ.                                                                                                                  

Share this Story:

Follow Webdunia kannada