Webdunia - Bharat's app for daily news and videos

Install App

ಮುಟ್ಟಿನ ಸಂದರ್ಭದ ಹೊಟ್ಟೆ ನೋವು ನಿವಾರಿಸೋಕೆ ಸರಳ ಉಪಾಯಗಳು ಇಲ್ಲಿವೆ

Webdunia
ಬುಧವಾರ, 4 ಆಗಸ್ಟ್ 2021 (15:53 IST)
ಹೆಣ್ಣು ಮಕ್ಕಳಿಗೆ ನಾನಾ ಬಗೆಯ ಆರೋಗ್ಯ ಸಮಸ್ಯೆಗಳು ಇರಬಹುದು. ಕೆಲಸದ ಒತ್ತಡ, ಮನೆಯ ಜವಾಬ್ದಾರಿಯ ಜೊತೆ ಆರೋಗ್ಯದ ಚಿಂತೆ ಕೂಡ.. ಅದರಲ್ಲೂ ಋತುಸ್ರಾವ(ಪಿರಿಯಡ್ಸ್) ದ ಸಮಯದಲ್ಲಿನ ಹೊಟ್ಟೆನೋವು ಜೀವ ಹೋದಂತ ಅನುಭವ ನೀಡುತ್ತದೆ.

ಪ್ರತಿ ತಿಂಗಳು ಸುಮಾರು 3 ರಿಂದ ನಾಲ್ಕು ದಿನ ಈ ನೋವನ್ನು ಅನುಭವಿಸುವ ಕಷ್ಟ ಅವರಿಗೆ ಗೊತ್ತು. ಈ ನೋವಿನ ಹಿಂದಿನ ವೈಜ್ಞಾನಿಕ ಕಾರಣ ಗರ್ಭಾಶಯದ ಒಳಪದರವು ಹೊರ ಬಂದಾಗ ಅದು ಹಿಂಡಿದಂತೆ ಆಗುತ್ತದೆ. ಅದು ಹಿಂಡಿದ ನಂತರವೇ ಯೋನಿಯ ಮೂಲಕ ರಕ್ತದ ರೂಪದಲ್ಲಿ ಹೊರಬರುತ್ತದೆ. ಈ ಕಾರಣದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಅಪರಿಮಿತವಾದ ನೋವನ್ನು ಅನುಭವಿಸುತ್ತಾರೆ. ಆ ನೋವನ್ನು ತಡೆದುಕೊಳ್ಳುವುದು ಸುಲಭವಲ್ಲ . ಅದೊಂದು ರೀತಿಯ ಹಿಂಸೆ. ಇನ್ನು ಹೆಚ್ಚಿನ ಮಹಿಳೆಯರಿಗೆ ಈ ಸಮಯದಲ್ಲಿ ಅವರ ಕೆಳ ಹೊಟ್ಟೆಯ ಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.

ಈ ನೋವಿನಿಂದ ಪರಿಹಾರ ಪಡೆಯಲು ಮಹಿಳೆಯರು ಹಲವು ಔಷಧಗಳ ಮೊರೆ ಹೋಗುತ್ತಾರೆ. ಅಲ್ಲದೇ ಬಿಸಿ ನೀರಿನ ಬ್ಯಾಗ್ (ಊoಣ Wಚಿಣeಡಿ ಃಚಿg) ಅನ್ನು ಹೊಟ್ಟೆಯ ಮೇಲೆ ಇಟ್ಟುಕೊಳ್ಳುವುದು , ಕಷಾಯಗಳನ್ನು ಕುಡಿಯುವುದು ಹೀಗೆ ಮಾಡುತ್ತಾರೆ. ಜೊತೆ ವಿವಿಧ ಮನೆ ಔಷಧಿಗಳನ್ನು ಸಹ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ತಿಂಡಿ ಪದಾರ್ಥಗಳನ್ನು ಸೇವಿಸಿ ಶತಪ್ರಯತ್ನ ಮಾಡುತ್ತಾರೆ. ಅದೆಷ್ಟೇ ಪ್ರಯತ್ನ ಮಾಡಿದರೂ ಸಹ ಈ ನೋವಿನಿಂದ ಮುಕ್ತಿ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಪಿರಿಯಡ್ಸ್ ಹೊಟ್ಟೆ ನೋವಿನಿಂದ ಪರಿಹಾರ ಪಡೆಯಲು ವ್ಯಾಯಾಮ ಮಾಡುವುದು ಕೂಡ ಒಂದು ಉತ್ತಮ ಆಯ್ಕೆ. ಹಾಗಾದ್ರೆ ಯಾವ ಯಾವ 5 ವ್ಯಾಯಾಮಗಳನ್ನು ಮಾಡಿದ್ರೆ ನೋವಿಗೆ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ಯೋಗ
ಯೋಗ ನಮ್ಮ ಆರೋಗ್ಯದ ವಿಚಾರದಲ್ಲಿ ಬಹಳ ಪ್ರಯೋಜಕಾರಿ. ಯಾವುದೇ ಆರೋಗ್ಯ ಸಮಸ್ಯೆಗೆ ಯೋಗದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಯೋಗ ನಮ್ಮ ದೇಹಕ್ಕೆ ಮಾತ್ರವಲ್ಲದೇ ಮನಸ್ಸಿಗೂ ನೆಮ್ಮದಿ ನೀಡುತ್ತದೆ. ಹೆಣ್ಣು ಮಕ್ಕಳಿಗೆ ಈ ಪಿರಿಯಡ್ಸ್ ಸಮಯದಲ್ಲಿ ಮೂಡ್ ಸ್ವಿಂಗ್ಸ್ ಸಾಮಾನ್ಯ. ಆ ಸಮಯದಲ್ಲಿ ಅವರು ಅನುಭವಿಸುವ ನೋವು ಅವರ ಮನದ ಚಂಚಲತೆಗೆ ಕಾರಣವಾಗುತ್ತದೆ. ಆದರೆ ಕೇವಲ 15 ನಿಮಿಷಗಳ ಕಾಲ ಯೋಗಾಸನ ಮಾಡುವುದು ಹೊಟ್ಟೆ ನೋವಿಗೂ ಪರಿಹಾರ ನೀಡಿ, ಮನಸ್ಸಿನ ಚಂಚಲತೆಯನ್ನು ದೂರ ಮಾಡುತ್ತದೆ.
ಸ್ಟ್ರೆಚಿಂಗ್
ನಿಮ್ಮ ದೇಹದಿಂದ ರಕ್ತ ಹೊರಹೋಗುವಾಗ ಸೋಮಾರಿತನದ ಭಾವನೆ ಸಹಜ. ಹಾಗೆಯೇ ನೋವಿನ ಕಾರಣದಿಂದ ಯಾವ ಕೆಲಸ ಮಾಡುವುದರಲ್ಲಿ ಆಸಕ್ತಿ ಸಹ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆದಷ್ಟು ಆರಾಮವಾಗಿರಬೇಕು ಎಂದು ಬಯಸುವುದು ಸಹಜ. ಹಾಸಿಗೆಯ ಮಲಗಿದ್ದರೆ ಅದೇನೋ ನೆಮ್ಮದಿ ಅನಿಸುತ್ತದೆ. ಇಂಥಹ ಸಮಯದಲ್ಲಿ ನಿಮ್ಮ ಸ್ನಾಯುಗಳಿಗೆ ವ್ಯಾಯಾಮದ ಅಗತ್ಯವಿರುತ್ತದೆ. ಹಾಗಾಗಿ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಬಹುದು. ಇದು ಹೊಟ್ಟೆಯ ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಡ್ಯಾನ್ಸ್
ಹೌದು, ಹೊಟ್ಟೆ ನೋವು ಹೆಚ್ಚಿದ್ದಾಗ ಹಾಸಿಗೆಯಿಂದ ಎದ್ದು ಹೊರ ಬರಲು ಹಿಂದು ಮುಂದು ನೋಡುತ್ತೇವೆ. ಆದರೆ ಇಂತಹ ಸಮಯದಲ್ಲಿ ನಮ್ಮ ನೆಚ್ಚಿನ ಹಾಡಿಗೆ ಡ್ಯಾನ್ಸ್ ಮಾಡುವುದು ಮನಸ್ಸಿಗೆ ಮುದ ನೀಡುವುದರ ಜೊತೆಗೆ ಹೊಟ್ಟೆ ನೋವಿಗೆ ಪರಿಹಾರ ನೀಡುತ್ತದೆ. ಹಾಗಾಗಿ ಮುಂದಿನ ಭಾರಿ ನಿಮಗೆ ಹೊಟ್ಟೆ ನೋವು ಆರಂಭವಾದಾಗ ಒಮ್ಮೆ ಡ್ಯಾನ್ಸ್ ಮಾಡಿ, ರಿಲ್ಯಾಕ್ಸ್ ಆಗಿ.
ವಾಕಿಂಗ್
ಒಂದರ್ಥದಲ್ಲಿ ಯಾವುದೇ ರೀತಿಯ ವ್ಯಾಯಾಮ ಮಾಡಿದರೂ ಸಹ ನಮ್ಮ ದೇಹ ರಿಲ್ಯಾಕ್ಸ್ ಆಗುತ್ತದೆ. ಅದರಲ್ಲೂ ಪಿರಿಯಡ್ಸ್ ಸಮಯದಲ್ಲಿ 10 ನಿಮಿಷಗಳ ವಾಕಿಂಗ್ ಮಾಡುವುದು ಹೊಟ್ಟೆನೋವು ಕಡಿಮೆಯಾಗಲು ಸಹಾಯವಾಗುತ್ತದೆ.
ಜಾಗಿಂಗ್
ಜಾಗಿಂಗ್ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ. ನಾವು ಜಾಗಿಂಗ್ ಮಾಡುವಾಗ ಆಮ್ಲಜನಕದ ಚಲನೆ (ಔxಥಿgeಟಿ ಈಟoತಿ) ಸರಿಯಾಗಿ ಆಗುವುದರಿಂದ ದೇಹ ರಿಲ್ಯಾಕ್ಸ್ ಆಗಿ, ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments