Webdunia - Bharat's app for daily news and videos

Install App

ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ)

Webdunia
ಶನಿವಾರ, 22 ನವೆಂಬರ್ 2014 (11:21 IST)
ಇದನ್ನು ಯಾಕಾಗಿ ಉಪಯೋಗಿಸುತ್ತಾರೆ?
 
ಎಲೆಕ್ಟ್ರೋಕಾರ್ಡಿಯೋಗ್ರಾಮ್ ಅಥವಾ ಇಸಿಜಿ ಎಂಬುದು ಹೃದಯದ ಪರೀಕ್ಷೆಯ ಅತ್ಯಂತ ಸಾಮಾನ್ಯ ವಿಧಾನ. ಹೃದಯದ ವಿವಿಧ ಸಮಸ್ಯೆಗಳ ಪತ್ತೆಗೆ ಇಸಿಜಿಯು ಒಂದು ಉಪಯುಕ್ತ ಪರೀಕ್ಷಣಾ ಉಪಕರಣವಾಗಿದೆ. ಇಸಿಜಿ ಪರೀಕ್ಷೆಯು ಅಪಾಯರಹಿತ, ಕಡಿಮೆ ಬೆಲೆಯ ಮತ್ತು ಸುಲಭವಾಗಿ ನಡೆಸಬಹುದಾದ ಪರೀಕ್ಷೆಯಾಗಿದ್ದು, ಈ ಯಂತ್ರವು ಹೆಚ್ಚಿನ ವೈದ್ಯಕೀಯ ಸೌಲಭ್ಯಗಳಲ್ಲಿ ಸಿದ್ಧವಾಗಿ ದೊರಕುತ್ತದೆ. 
 
ಇಸಿಜಿ ಹೇಗೆ ಕೆಲಸಮಾಡುತ್ತದೆ?
ರೋಗಿಯನ್ನು ಪರೀಕ್ಷಾ ಮಂಚದ ಮೇಲೆ ಮಲಗಿಸಿ, 10 ಎಲೆಕ್ಟ್ರೋಡುಗಳನ್ನು (ಅಥವಾ ಲೆಡ್) ರೋಗಿಯ ತೋಳು, ಎದೆ ಮತ್ತು ಕಾಲಿಗೆ ಹೊಂದಿಸುತ್ತಾರೆ. ಈ ಎಲೆಕ್ಟ್ರೋಡುಗಳು ಹೃದಯದಿಂದ ಉತ್ಪತ್ತಿಯಾಗುವ ವಿದ್ಯುತ್ತಿನ ಒತ್ತಡವನ್ನು(electrical impulses) ಪತ್ತೆ ಮಾಡುತ್ತವೆ. ಈ ಹೃದಯದ ವಿದ್ಯುತ್ ಒತ್ತಡಗಳ ರೇಖಾಚಿತ್ರವನ್ನು ಇಸಿಜಿ ಯಂತ್ರವು ಚಿತ್ರಿಸುತ್ತದೆ. ನಂತರ ಈ ಎಲೆಕ್ಟ್ರೋಡುಗಳನ್ನು ತೆಗೆದುಹಾಕಲಾಗುತ್ತದೆ. ಐದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಈ ಪರೀಕ್ಷೆಯು ಮುಗಿದು ಹೋಗುತ್ತದೆ.
 
ಇಸಿಜಿಯಿಂದ ನಾವು ಏನೆಲ್ಲ ಮಾಹಿತಿಗಳನ್ನು ಪಡೆಯಬಹುದು?
ಇಸಿಜಿ ರೇಖಾಚಿತ್ರದಿಂದ ನಾವು ಕೆಳಕಂಡ ಮಾಹಿತಿಗಳನ್ನು ಕಂಡುಹಿಡಿಯಬಹುದಾಗಿದೆ:
 
- ಹೃದಯದ ಬಡಿತದ ಪ್ರಮಾಣ
- ಹೃದಯದ ಬಡಿತದ ವೇಗ
- ವರ್ತನೆಯ ಅತಿರೇಕತೆ ಇದೆಯೇ?
- ಮೊದಲು ಹೃದಯಾಘಾತ ಆಗಿದೆಯೇ?
- ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆ ಇರಬಹುದೇ?
- ಹೃದಯದ ಸ್ನಾಯುಗಳು ಅನಿಯಮಿತವಾಗಿ ದಪ್ಪವಾಗಿದೆಯೇ?
 
ಈ ಎಲ್ಲಾ ಲಕ್ಷಣಗಳು ಮಹತ್ವದ್ದಾಗಿದೆ.
ಒಂದುವೇಳೆ ಇಸಿಜಿಯು ಹೃದಯಾಘಾತ ಅಥವಾ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಯ ಸಾಧ್ಯತೆಯನ್ನು ಸೂಚಿಸಿದರೆ, ಸಮಸ್ಯೆಯ ಪೂರ್ಣ ಲಕ್ಷಣಗಳನ್ನು ತಿಳಿದುಕೊಳ್ಳಲು ಮತ್ತು ಅತ್ಯುತ್ತಮ ಥೆರಪಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣವಾಗಿ ಮರು ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. (ಈ ಮರು ಪರೀಕ್ಷೆಯು ಹೆಚ್ಚಾಗಿ ಒತ್ತಡ ಪರೀಕ್ಷೆ (Stress test) ಮತ್ತು ಹೃದಯದ ಕ್ಯಾಥರೈಸೇಶನ್ (catheterization) ಒಳಗೊಂಡಿರಬಹುದು). ಒಂದುವೇಳೆ ಹೃದಯದ ಸ್ನಾಯುಗಳು ದಪ್ಪವಾಗಿದ್ದರೆ, ವಾಲ್ವುಲಾರ್(valvular) ಹೃದಯ ಖಾಯಿಲೆ ಅಥವಾ ಇತರ ಅಸಾಧಾರಣ ವಿನ್ಯಾಸಗಳ ಸಾಧ್ಯತೆಯನ್ನು ಕಂಡುಹಿಡಿಯಲು ಇಕೋ ಕಾರ್ಡಿಯೋಗ್ರಾಮ್(echocardiogram)ನ್ನು ನಡೆಸಬೇಕಾಗಬಹುದು. ಹೃದಯದ ವರ್ತನೆಯಲ್ಲಿನ ಏರುಪೇರು ತಲೆತಿರುಗುವಿಕೆ ಅಥವಾ ಇತರ ಹೃದ್ರೋಗದ ಸೂಚನೆಗಳಾಗಿರಬಹುದು.
 
ಇಸಿಜಿಯ ಇತಿ-ಮಿತಿಗಳೇನು?
- ಇಸಿಜಿ ಪರೀಕ್ಷೆಯ ಸಮಯದಲ್ಲಿ ಮಾತ್ರವೇ ಇಸಿಜಿಯು ಹೃದಯದ ಬಡಿತದ ವೇಗ ಮತ್ತು ಪ್ರಮಾಣವನ್ನು ತಿಳಿಸುತ್ತದೆ. ಪದೇ ಪದೇ ಕಾಣಿಸಿಕೊಳ್ಳುವ ಹೃದಯ ಬಡಿತದ ಏರುಪೇರು ನಡೆದರೆ, ಅದನ್ನು ಇಸಿಜಿಯು ಪತ್ತೆ ಹಚ್ಚಲಾರದು. ಅಸ್ಥಿರ ಅರಿತ್ಮಿಯಾಸ್(arrhythmias)ನ್ನು ದಾಖಲು ಮಾಡಲು ಆಂಬ್ಯುಲೇಟರಿ ಮಾನಿಟರ್ ‌(Ambulatory monitor) ಉಪಯೋಗಿಸಬೇಕಾಗುತ್ತದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments