Webdunia - Bharat's app for daily news and videos

Install App

ತುಳಸಿಯ ಎಲೆಗಳನ್ನು ಸೇವಿಸುವುದರಿಂದ ಏನೆಲ್ಲಾ ಅಡ್ಡ ಪರಿಣಾಮಗಳಾಗುತ್ತದೆ ಗೊತ್ತಾ?

Webdunia
ಗುರುವಾರ, 2 ಸೆಪ್ಟಂಬರ್ 2021 (07:08 IST)
Tulsi Leaves : ತುಳಸಿ ಪರಿಮಳ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ. ಅದರ ಔಷಧಿಯ ಗುಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಉದ್ದವಾಗಿ ಬೆಳೆಯುತ್ತದೆ. ಆದರೆ ಅಡ್ಡ ಪರಿಣಾಮಗಳಿವೆ.

ಹಲವಾರು ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಅದೆಷ್ಟೋ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಇಂಥಹದೆ ಒಂದು ಅದ್ಭುತ ಗಿಡಮೂಲಿಕೆ ಎಂದರೆ ತುಳಸಿ. ತುಳಸಿಯನ್ನು ಬಳಸಿ ಹಲವಾರು ಔಷಧಿಗಳನ್ನು ತಯಾರು ಮಾಡಲಾಗುತ್ತದೆ. ಕೆಮ್ಮು, ಶೀತ ಹೀಗೆ ಹಲವಾರು ರೋಗಗಳಿಗೆ ಇದು ರಾಮಬಾಣ. ಹೆಚ್ಚಿನ ಜನರು ಪ್ರತಿದಿನ ಒಂದು ತುಳಸಿ  ಸೇವನೆ ಮಾಡುತ್ತಾರೆ. ಆದರೆ ಇದರ ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಹೌದು, ತುಳಸಿ ಕೂಡ ಕೆಲ ಅಡ್ಡ ಪರಿಣಾಮಗಳನ್ನು ಹೊಂದಿದೆ.
 ಗರ್ಭಿಣಿಯರು ತುಳಸಿಯನ್ನು ಬಳಕೆ ಮಾಡಬಾರದು
ತುಳಸಿ ಪರಿಮಳ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ. ಅದರ ಔಷಧಿಯ ಗುಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಉದ್ದವಾಗಿ ಬೆಳೆಯುತ್ತದೆ. ಆದರೆ ಇದರಲ್ಲಿ ಇರುವ ಔಷಧೀಯ ಗುಣ ಮತ್ತು ಪೋಷಕಾಂಶಗಳು  ಗರ್ಭಿಣಿ ಮಹಿಳೆಯರಿಗೆ ಉತ್ತಮವಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಭ್ರೂಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದರ ಹೆಚ್ಚಿನ ಬಳಕೆ  ಗರ್ಭ ಪಾತಕ್ಕೂ ಕಾರಣವಾಗುವ ಸಾಧ್ಯತೆಗಳಿವೆ. ತುಳಸಿ ಗರ್ಭಿಣಿಯರಿಗೆ ಅಪಾಯಕಾರಿ.
ಹಲ್ಲುಗಳಿಗೆ ಹಾನಿಕಾರಕ ತುಳಸಿ
ತುಳಸಿ ಎಲೆ ಹಲ್ಲುಗಳ ಆರೋಗ್ಯಕ್ಕೆ ಹಾನಿಕಾರಕ. ಇದರಲ್ಲಿರುವ ಪಾದರಸದ ಅಂಶ ಹಲ್ಲುಗಳಲ್ಲಿ ಕಲೆ ಬೀಳಲು ಕಾರಣವಾಗುತ್ತದೆ. ಹಾಗಾಗಿಯೇ ಅದನ್ನು ಬೇಯಿಸದೆ ಹೆಚ್ಚು ಸೇವನೆ ಮಾಡುವುದು ಹಲ್ಲುಗಳನ್ನು ಹಾಳುಮಾಡುತ್ತದೆ.  ಅದರಲ್ಲಿ ಇರುವ ಆಮ್ಲೀಯತೆಯು ಹಲ್ಲಿನ ಸ್ವರೂಪ, ದಂತಗಳ ಆರೋಗ್ಯ ಮತ್ತು ಬಾಯಿಯ ಆರೋಗ್ಯವನ್ನು  ಹಾಳು ಮಾಡುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಯಕೃತ್ತಿನ ಆರೋಗ್ಯಕ್ಕೆ ಹಾನಿಕಾರಕ
ತುಳಸಿಯಲ್ಲಿ ಎಷ್ಟು ಆರೋಗ್ಯಕರ ಅಂಶಗಳಿವೆಯೋ ಹಾಗೆಯೇ ಕೆಲವೊಂದು ಕೆಟ್ಟ ಗುಣಗಳಿವೆ. ತುಳಸಿಯಲ್ಲಿ ಸಾಕಷ್ಟು ಯುಜೆನಾಲ್ ಅಂಶಗಳಿವೆ. ಯುಜೆನಾಲ್ ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಯಕೃತ್ತಿಗೆ ಹಾನಿ ಉಂಟಾಗುತ್ತದೆ. ವಾಕರಿಕೆ, ಅತಿಸಾರ, ಹೃದಯ ಬಡಿತ, ನೋವು, ಸೆಳೆತ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ರಕ್ತ ಹೆಪ್ಪುಗಟ್ಟಲು ಬಿಡುವುದಿಲ್ಲ
ತುಳಸಿಯಲ್ಲಿ ದೇಹದ ರಕ್ತವನ್ನು ತೆಳುವಾಗಿಸುವ ಗುಣವಿದೆ. ಆದರೆ ಹೆಪ್ಪುಗಟ್ಟಲು ಬಿಡುವುದಿಲ್ಲ. ರಕ್ತದ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದ ನಂತರ ತುಳಸಿಯನ್ನು ಹಾಗೂ ಅದರ  ಔಷಧಿಯನ್ನು ಸೇವಿಸುವುದು ಒಳ್ಳೆಯದು.
ಬಂಜೆತನ ಸಮಸ್ಯೆಗೆ ಕಾರಣವಾಗುತ್ತದೆ
ಎನ್ಸಿಬಿಐ ನಡೆಸಿದ ಸಂಶೋಧನೆಯ ಪ್ರಕಾರ ತುಳಸಿ ಪುರುಷ ಮತ್ತು ಮಹಿಳೆಯರಲ್ಲಿ ವೀರ್ಯಾಣು ಸಮಸ್ಯೆ ಉಂಟುಮಾಡುತ್ತದೆ.  ತುಳಸಿ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಮಕ್ಕಳಾಗುವ ಸಂಭವ ಕಡಿಮೆ ಇರುತ್ತದೆ. ವೃಷಣ, ಗರ್ಭಾಶಯ ಮತ್ತು ಅಂಡಾಶಯದಂತಹ ಸಂತಾನೋತ್ಪತ್ತಿ ಅಂಗಗಳ ತೂಕವನ್ನು ಕಡಿಮೆ ಮಾಡುತ್ತದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ  ಎಂದು  ಹಲವಾರು ಸಂಶೋಧನೆಗಳು ತಿಳಿಸಿವೆ.
ಮಧುಮೇಹಿಗಳಿಗೆ ತುಳಸಿ ಹಾನಿಕಾರಕ
ಅನೇಕ ಅಧ್ಯಯನಗಳ ಪ್ರಕಾರ ತುಳಸಿ ದೇಹದಲ್ಲಿ ಇರುವ ಸಕ್ಕರೆ ಅಂಶವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿ ಇರುವುದು ಅತಿ ಮುಖ್ಯ. ಸಕ್ಕರೆ ಅಂಶ ಕಡಿಮೆಯಾದಾಗ ಹಲವು ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments