Webdunia - Bharat's app for daily news and videos

Install App

ವಿಭಿನ್ನವಾದ ಯೋಗ ಈ ಹ್ಯಾಂಗಿಂಗ್ ಯೋಗಾ

Webdunia
ಮಂಗಳವಾರ, 6 ಜೂನ್ 2017 (15:44 IST)
ನ್ಯೂಯಾರ್ಕ್:ಇತ್ತೀಚೆಗಷ್ಟೆ ನಾವು ಮೇಕೆ ಯೋಗದ ಬಗ್ಗೆ ನೋಡಿದ್ವಿ. ಈಗ ಇನ್ನೊಂದು ರೀತಿಯ ಯೋಗ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅದೇ ’ಜೋಕಾಲಿ ಯೋಗ’ ಅಥವಾ’ ಹ್ಯಾಂಗಿಂಗ್ ಯೋಗ’. ಇದನ್ನು ಆಂಟಿ ಗ್ಯಾವಿಟಿ ಯೋಗಾ ಅಥವಾ ಏರಿಯಲ್ ಯೋಗಾ ಅಂತಲೂ ಕರೆಯುತ್ತಾರೆ. ಸದಾಕಾಲ ಹೊಸದನ್ನು ಯೋಚಿಸುವ ಅಮೆರಿಕನ್ನರು ಇಂತಹ ಒಂದು ವಿಭಿನ್ನವಾದ ಯೋಗಾಸನಗಳತ್ತ ಆಸಕ್ತಿ ತೋರುತ್ತಿದ್ದಾರೆ.
 
ಹವಾನಿಯಂತ್ರಕ ಕೊಠಡಿಯಲ್ಲಿ ಚಾವಡಿಗೆ ನೇತು ಹಾಕಿದ ತೆಳುವಾದ ರೇಷ್ಮೆಯ ಹಗ್ಗದಲ್ಲಿ ನೇತಾಡುತ್ತಾ, ಬಗೆಬಗೆಯ ದೈಹಿಕ ಕಸರತ್ತು ಮಾಡುತ್ತಾ, ದೇಹವನ್ನು ಗಾಳಿಯಲ್ಲಿ ತೇಲಿ ಬಿಡುತ್ತಾ, ದೇಹದ ಮೇಲೆ ನಿಯಂತ್ರಣ ಸಾಧಿಸುವುದೇ ಈ ಜೋಕಾಲಿ ಯೋಗ.  ಗಾಳಿಯಲ್ಲಿಯೇ ಬಗೆಬಗೆಯ ಯೋಗದ ಆಸನಗಳನ್ನು ಮಾಡಲು ಭಿನ್ನವಾದ ಪ್ರಯತ್ನ ಮಾಡುವುದು. ಸುಮಾರು 300ಕಿ. ಲೋ ಗ್ರಾಂವರೆಗೆ ಭಾರವನ್ನು ತಡೆದುಕೊಳ್ಳುವ ಈ ರೇಷ್ಮೆಯ ಬಟ್ಟೆಯನ್ನು ಉಯ್ನಾಲೆಯ ರೀತಿಯಲ್ಲಿ ನೇತು ಹಾಕಿ, ಅದರ ಸಹಾಯದಿಂದ ದೇಹದ ಮೇಲೆ ನಿಯಂತ್ರಣ ಸಾಧಿಸಿ ದೈಹಿಕ ಕಸರತ್ತಿನ ಜೊತೆ ಯೋಗವನ್ನು ಲೀನ ಮಾಡುವ ಕ್ರಿಯೆ ಇದು.
 
1991ರಲ್ಲಿ ನ್ಯೂಯಾರ್ಕ್ ನಲ್ಲಿ ಈ ಹೊಸಬಗೆಯ ಯೋಗ ಆರಂಭವಾಯಿತು. ಇತ್ತೀಚಿನ ದಿನಗಳಲ್ಲಿ ಈ ಯೋಗಕ್ಕೆ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದು, ಕ್ರಮೇಣ ಜರ್ಮನಿ, ಹಾಂಕಾಂಗ್‌, ಇಟಲಿ, ಆಸ್ಟೇಲಿಯ  ಹೀಗೆ ಜಗತ್ತಿನ ಎಲ್ಲೆಡೆ ಪಸರಿಸಿದೆ. ಅಷ್ಟೇ ಅಲ್ಲ ದೆಹಲಿ, ಮುಂಬಯಿ, ಚೆನೈ, ಬರೋಡಾ, ಕೊಲ್ಕತಾ, ಬೆಂಗಳೂರು ಹೀಗೆ ನಮ್ಮ ದೇಶದಲ್ಲಿ ಕೂಡ ಈ ಹ್ಯಾಂಗಿಂಗ್ ಯೋಗ ತನ್ನತ್ತ ಜರನ್ನು ಸೆಳೆಯುತ್ತಿದೆ. ಹಾಗಾಗಿ ಹೊಸಬಗೆಯದನ್ನು ಪ್ರಯತ್ನಿಸಬೇಕೆಂದರೆ ನೀವೂ ಕೂಡ ಈ ಜೋಕಾಲಿ ಯೋಗವನ್ನು ಮಾಡಬಹು.
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments