Webdunia - Bharat's app for daily news and videos

Install App

ರಕ್ತ ದಾನ ಮಹಾದಾನ: ಆರೋಗ್ಯಕ್ಕೆ ಒಳಿತೇ ಹೊರತು ಕೆಟ್ಟದ್ದಿಲ್ಲ

Webdunia
ಬುಧವಾರ, 26 ನವೆಂಬರ್ 2014 (18:08 IST)
ಭಾರತದಲ್ಲಿ ಬಹುಮಟ್ಟಿನ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಅಭಿಯಾನಗಳನ್ನು ನಡೆಸಿದೆ. ಆದರೆ ಇಲ್ಲಿವರೆಗೆ ಜೀವವುಳಿಸುವ ರಕ್ತದಾನಕ್ಕೆ ಜನಸಮೂಹ ಮುಕ್ತವಾಗಿ ಬಂದಿಲ್ಲ.
 
 1. ರಕ್ತದಾನ ಒಬ್ಬರ ಜೀವ ಉಳಿಸುತ್ತದೆ. ರಕ್ತ ದಾನ ಒಬ್ಬರ ಜೀವವನ್ನು ಉಳಿಸುತ್ತದೆ. ಅದಕ್ಕೆ ಯಾವುದೇ ಪರ್ಯಾಯವಿಲ್ಲ. ಕೇವಲ ಒಂದು ದಾನವು ನಾಲ್ವರ ಜೀವವನ್ನು ಉಳಿಸುತ್ತದೆ.
 
2. ರಕ್ತದಾನದಿಂದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚವರಿ ಕಬ್ಬಿಣಾಂಶದಿಂದ ಅಧಿಕ ರಕ್ತದ ಒತ್ತಡ ಮುಂತಾದ ಅಡ್ಡ ಪರಿಣಾಮಗಳಿರುತ್ತವೆ. ಇದು ಲಿವರ್, ಹೃದಯ ಮತ್ತು ಪಿತ್ತಜನಕಾಂಗದಲ್ಲಿ ಶೇಖರಣೆಯಾಗಿ ಹೃದಯಬೇನೆ, ರಕ್ತದೊತ್ತಡ ಉಲ್ಬಣವಾಗುತ್ತದೆ.
 
 ನಾವು ರಕ್ತದಾನ ಮಾಡಿದರೆ ಈ ವಿಷಯಗಳು ಇತ್ಯರ್ಥವಾಗುತ್ತದೆ.
 3. ನೀವು ಆರೋಗ್ಯ ತಪಾಸಣೆ ಅವಕಾಶ ಪಡೆಯುತ್ತೀರಿ. ರಕ್ತದಾನ ಕೇಂದ್ರದಲ್ಲಿ ವೈದ್ಯರು ಹೃದಯಬಡಿತ, ರಕ್ತದೊತ್ತಡ, ಕೊಲೆಸ್ಟರಾಲ್, ಹೇಮೋಗ್ಲೋಬಿನ್ ಮಟ್ಟವನ್ನು ಪರೀಕ್ಷೆ ಮಾಡುತ್ತಾರೆ. ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯದ ಜಾಡು ಹಿಡಿಯಬಹುದು ಮತ್ತು ಆಹಾರ, ವ್ಯಾಯಾಮ, ಜೀವನಶೈಲಿ ಬದಲಾವಣೆ ಮತ್ತಿತರ ಅಂಶಗಳು ಹೇಗೆ ದೇಹದ ಮೇಲೆ ಪರಿಣಾಮ ಬೀರುತ್ತದೆಂದು ತಿಳಿಯಬಹುದು.

4. ರಕ್ತದ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ರಕ್ತದಾನ ಮಾಡುವುದರಿಂದ ರಕ್ತಕ್ಯಾನ್ಸರ್ ಅಪಾಯ ತಗ್ಗುತ್ತದೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.  ರಕ್ತದಾನ ಮಾಡಿದಾಗ ನಿಮ್ಮ ದೇಹ ಹೊಸ ರಕ್ತ ಪಡೆಯುವ ಅವಕಾಶ ಸಿಗುತ್ತದೆ ಮತ್ತು ರಕ್ತದ ಕ್ಯಾನ್ಸರ್ ಅವಕಾಶ ಕಡಿಮೆಯಾಗುತ್ತದೆ.
 ರಕ್ತದಾನದಿಂದ ನಿಮಗೇನೂ ನಷ್ಟವಾಗುವುದಿಲ್ಲ. ಆದರೆ ನಿಮ್ಮ ಆರೋಗ್ಯ ಮತ್ತು ಸಮುದಾಯದ ಆರೋಗ್ಯದ ಅನುಕೂಲಗಳು ಬೆಲೆಕಟ್ಟಲಾಗದ್ದು. 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments