Select Your Language

Notifications

webdunia
webdunia
webdunia
webdunia

14 ವರ್ಷಗಳು ಹೆಚ್ಚುವರಿ ಆಯಸ್ಸಿಗೆ 4 ಕ್ರಮಗಳು

ವ್ಯಾಯಾಮ
ವಾಷಿಂಗ್ಟನ್ , ಮಂಗಳವಾರ, 8 ಜನವರಿ 2008 (21:10 IST)
WD
ನಿಮಗೆ ಧೂಮಪಾನದ ಅಭ್ಯಾಸವಿಲ್ಲವೇ? ದಿನ ನಿತ್ಯ ವ್ಯಾಯಾಮ ಮಾಡುತ್ತೀರಾ? ಮಿತಪ್ರಮಾಣದಲ್ಲಿ ಆಲ್ಕೊಹಾಲ್ ಸೇವಿಸುತ್ತೀರಾ? ಪ್ರತಿ ದಿನ ಐದು ಬಾರಿ ಹಣ್ಣು ಮತ್ತು ತರಕಾರಿಗಳನ್ನು ತಿನ್ನುತ್ತೀರಾ? ಮೇಲಿನವೆಲ್ಲ ನಿಜವಾಗಲೂ ನೀವು ಆಚರಿಸುತ್ತಿದ್ದರೆ, ಇವೆಲ್ಲ ಆರೋಗ್ಯಕಾರಿ ಅಭ್ಯಾಸ ಇಲ್ಲದವರಿಗಿಂತ 14 ವರ್ಷಗಳಷ್ಟು ಹೆಚ್ಚುವರಿ ಆಯಸ್ಸು ನಿಮ್ಮ ಆಯಸ್ಸಿನ ಅಕೌಂಟಿಗೆ ಸೇರುತ್ತದೆ.

ಕೇಂಬ್ರಿಜ್ ವಿವಿ ಮತ್ತು ವೈದ್ಯಕೀಯ ಸಂಶೋಧನೆ ಮಂಡಳಿಯ ಅಧ್ಯಯನ ವರದಿಯಲ್ಲಿ ಹೀಗೆಂದು ತಿಳಿಸಲಾಗಿದೆ. ಅಧ್ಯಯನ ವರದಿಯಲ್ಲಿ ಸಂಶೋಧಕರು ಆರೋಗ್ಯ ನಡವಳಿಕೆ ಅಂಕವನ್ನು ಬಳಸಿಕೊಂಡರು. 1993 ಮತ್ತು 1997ರ ನಡುವೆ 45ರಿಂದ 79 ವರ್ಷ ವಯಸ್ಸಿನ ಕ್ಯಾನ್ಸರ್ ಮತ್ತು ಹೃದಯ ರೋಗಗಳು ಹತ್ತಿರ ಸುಳಿಯದ 20,000 ಪುರುಷರು ಮತ್ತು ಮಹಿಳೆಯರನ್ನು ಪ್ರಶ್ನೋತ್ತರಕ್ಕೆ ಒಳಪಡಿಸಿ 0 -4 ಅಂಕಗಳನ್ನು ನೀಡಲಾಯಿತು.

ಪ್ರಸಕ್ತ ಧೂಮಪಾನರಹಿತರಾಗಿದ್ದವರು, ದೈಹಿಕವಾಗಿ ನಿಷ್ಕ್ರಿಯರಾಗಿರದ, ಪ್ರತಿವಾರಕ್ಕೆ 1-14 ಯೂನಿಟ್ ಮಿತವಾದ ಆಲ್ಕೊಹಾಲ್ ಸೇವನೆ(ಒಂದು ಯೂನಿಟ್ ಎಂದರೆ ಅರ್ಧ ಪಿಂಟ್ ಬಿಯರ್ ಅಥವಾ ವೈನ್) ಮತ್ತು ದಿನಕ್ಕೆ ಐದು ಬಾರಿ ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ರಕ್ತದ ವಿಟಮನ್ ಸಿ ಮಟ್ಟ ಸ್ಥಿರವಾಗಿರುವ ಪ್ರತಿಯೊಂದು ಕ್ರಿಯೆಗೂ ಒಂದೊಂದು ಅಂಕಗಳನ್ನು ನೀಡಲಾಯಿತು. 2006ರವರೆಗೆ ಅವರ ಸಾವಿನ ಪ್ರಮಾಣವನ್ನು ಕೂಡ ದಾಖಲಿಸಲಾಯಿತು.

ವಿಶ್ಲೇಷಣೆಯಲ್ಲಿ ಕಂಡುಬಂದ ಫಲಿತಾಂಶವೇನೆಂದರೆ ಸರಾಸರಿ 11 ವರ್ಷಗಳ ಕಾಲಾವಧಿಯಲ್ಲಿ, 4 ಅಂಕಗಳನ್ನು ಗಳಿಸಿದ ವ್ಯಕ್ತಿಗಳಿಗಿಂತ 0 ಅಂಕವನ್ನು ಪಡೆದ ಅಂದರೆ ಮೇಲಿನ ಯಾವ ಆರೋಗ್ಯಕಾರಿ ಕ್ರಿಯೆಗಳು ಇಲ್ಲದ ವ್ಯಕ್ತಿಗಳು ನಾಲ್ಕು ಪಟ್ಟು ಹೆಚ್ಚು ಪ್ರಮಾಣದಲ್ಲಿ ಸಾವಪ್ಪಿರುವುದನ್ನು ತೋರಿಸಿದೆ.

ಪ್ರಶ್ನೋತ್ತರದಲ್ಲಿ 4 ಅಂಕಗಳನ್ನು ಗಳಿಸಿ ಅಂದರೆ ಎಲ್ಲಾ ನಾಲ್ಕು ಆರೋಗ್ಯ ಸ್ವರೂಪದ ನಡವಳಿಕೆಯಲ್ಲಿ ನಿರತರಾದ ವ್ಯಕ್ತಿಗಳಿಗೂ ಮತ್ತು 0 ಅಂಕವನ್ನು ಪಡೆದ ಅವರಿಗಿಂತ 14 ವರ್ಷಗಳಷ್ಟು ಕಿರಿಯ ವಯಸ್ಕ ವ್ಯಕ್ತಿಗೂ ಸಾವಿನ ರಿಸ್ಕ್ ಸಮನಾಗಿರುತ್ತದೆ ಎನ್ನುವುದನ್ನು ಸಂಶೋಧಕರು ಅಂದಾಜು ಮಾಡಿದ್ದಾರೆ. ನಾಲ್ಕು ಕಾರ್ಯಸಾಧ್ಯ ಜೀವನಶೈಲಿ ಬದಲಾವಣೆಯಿಂದ ಮಧ್ಯವಯಸ್ಕ ಮತ್ತು ವೃದ್ಧರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆಂದು ಆದ್ದರಿಂದ ಈ ಅಧ್ಯಯನದ ಫಲಿತಾಂಶದಿಂದ ದೃಢಪಟ್ಟಿದೆ.

Share this Story:

Follow Webdunia kannada