Webdunia - Bharat's app for daily news and videos

Install App

10 ನಿಮಿಷ ಮಾತಾಡಿ, ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಿ

Webdunia
ಮಂಗಳವಾರ, 30 ಅಕ್ಟೋಬರ್ 2007 (17:37 IST)
WD
ಬೇರೊಬ್ಬ ವ್ಯಕ್ತಿಯೊಂದಿಗೆ ಕೇವಲ 10 ನಿಮಿಷಗಳ ಕಾಲದ ಮಾತುಕತೆ ನಿಮ್ಮ ಸ್ಮರಣ ಶಕ್ತಿ ಮತ್ತು ಬುದ್ಧಿಶಕ್ತಿಯನ್ನು ವೃದ್ಧಿಗೊಳಿಸುತ್ತದೆಯೇ? ಹೌದೆನ್ನುತ್ತಾರೆ ಮಿಚಿಗನ್ ವಿಶ್ವವಿದ್ಯಾನಿಲಯದ ಸಂಶೋಧಕರು. ಸ್ಮರಣೆ ಮತ್ತು ಬುದ್ಧಿಶಕ್ತಿ ಚೇತರಿಕೆಗೆ ಜನರೊಡನೆ ಬೆರೆಯುವುದೂ ಪರಿಣಾಮಕಾರಿ ಮತ್ತು ಸಾಂಪ್ರದಾಯಿಕ ವಿಧಾನದ ಮಾನಸಿಕ ಪ್ರಕ್ರಿಯೆಯಾಗಿದೆ ಎಂದು ಸಾಮಾಜಿಕ ಸಂಶೋಧನೆಯ ಯು-ಎಂ ಇನ್‌ಸ್ಟಿಟ್ಯೂಟ್ ಮನಶಾಸ್ತ್ರಜ್ಞ ಆಸ್ಕರ್ ವೈಬಾರಾ ತಿಳಿಸಿದ್ದಾರೆ.

ಸಂಶೋಧಕರು ಐಎಸ್‌ಆರ್ ಸಮೀಕ್ಷೆ ಅಂಕಿಅಂಶವನ್ನು ಅಧ್ಯಯನ ಮಾಡಿ ಮಾನಸಿಕ ಕ್ರಿಯಾಶೀಲತೆ ಮತ್ತು ಸಾಮಾಜಿಕ ಸಂಪರ್ಕದ ನಡುವೆ ಸಂಬಂಧವಿದೆಯೇ ಎಂದು ಪರಿಶೀಲನೆ ನಡೆಸಿತು. 24ರಿಂದ 96ರ ವಯೋಮಿತಿಯ 3610 ಜನರ ಮಾಹಿತಿಯು ಈ ಸಮೀಕ್ಷೆ ಅಂಕಿಅಂಶದಲ್ಲಿ ಸೇರಿಕೊಂಡಿತ್ತು.

ಅವರ ಮಾನಸಿಕ ಮಟ್ಟಗಳನ್ನು ಸಣ್ಣ ಮಾನಸಿಕ ಪರೀಕ್ಷೆಯ ಮೂಲಕ ಅಳೆಯಲಾಯಿತು. ಈ ಪರೀಕ್ಷೆಯು ವೈಯಕ್ತಿಕ ಮಾಹಿತಿ ಮತ್ತು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅವರ ಜ್ಞಾನವನ್ನು ಅಳೆಯಿತು.

ಅವರು ಎಷ್ಟು ಬಾರಿ ಸ್ನೇಹಿತರ, ನೆರೆಮನೆಯವರ ಮತ್ತು ಬಂಧುಗಳ ಜತೆ ಮಾತನಾಡಿದ್ದಾರೆಂದು, ಎಷ್ಟು ಬಾರಿ ಜತೆಸೇರಿದ್ದಾರೆಂದು ಭಾಗವಹಿಸಿದವರ ಸಾಮಾಜಿಕ ಸಂವಾದಗಳ ಮಟ್ಟವನ್ನು ಅಳೆಯಲಾಯಿತು.

ಸಮಾಜದ ಜತೆ ಹೆಚ್ಚು ಸಂಪರ್ಕ ಹೊಂದಿದಂತೆಲ್ಲ ವ್ಯಕ್ತಿಯ ಬುದ್ದಿಶಕ್ತಿ ಮತ್ತು ಮಾನಸಿಕ ಶಕ್ತಿಯೂ ವೃದ್ಧಿಯಾಗುತ್ತದೆ ಎಂದು ಅಧ್ಯಯನ ವರದಿ ತಿಳಿಸಿತು. ಇನ್ನೊಂದು ಪ್ರಯೋಗದಲ್ಲಿ ಸಂಶೋಧಕರು ಪ್ರಯೋಗಶಾಲೆ ಪರೀಕ್ಷೆಯೊಂದನ್ನು ಕೈಗೊಂಡು ಸಾಮಾಜಿಕ ಸಂಪರ್ಕ ಮತ್ತು ಬುದ್ಧಿಶಕ್ತಿಯ ಚಟುವಟಿಕೆಗಳು ಸ್ಮರಣೆ ಮತ್ತು ಮಾನಸಿಕ ಚಟುವಟಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆಂದು ಪರಿಶೀಲನೆ ನಡೆಸಿದರು.

18 ರಿಂದ 21ರ ವಯೋಮಿತಿಯ 76 ಕಾಲೇಜು ವಿದ್ಯಾರ್ಥಿಗಳನ್ನು ಅವರು ನಿಯೋಜಿಸಿ ಸಾಮಾಜಿಕ ಸಂವಾದ ತಂಡ, ಬೌದ್ಧಿಕ ಚಟುವಟಿಕೆ ತಂಡ ಮತ್ತು ನಿಯಂತ್ರಣ ತಂಡವೆಂಬ ಮೂರು ತಂಡಗಳನ್ನು ನೇಮಿಸಿದರು.

ಸಾಮಾಜಿಕ ಸಂವಾದ ತಂಡವು ಪರೀಕ್ಷೆ ತೆಗೆದುಕೊಳ್ಳುವ ಮುಂಚೆ ಸಾಮಾಜಿಕ ವಿಷಯಗಳಲ್ಲಿ 10 ನಿಮಿಷಗಳ ಕಾಲ ಚರ್ಚೆಯಲ್ಲಿ ಮುಳುಗಿತು. ಬೌದ್ಧಿಕ ಚಟುವಟಿಕೆ ತಂಡ ಪರೀಕ್ಷೆ ತೆಗೆದುಕೊಳ್ಳುವ ಮುಂಚೆ ಓದುವಿಕೆ, ಗ್ರಹಿಕೆ ಮತ್ತು ಪದಬಂಧ ಬಿಡಿಸುವ ಚಟುವಟಿಕೆಯಲ್ಲಿ ತೊಡಗಿತು. ನಿಯಂತ್ರಣ ತಂಡವು 10 ನಿಮಿಷಗಳ "ಸೈನ್‌ಫೀಲ್ಡ್" ಕ್ಲಿಪ್ ವೀಕ್ಷಿಸಿತು.

ಇದಾದ ಬಳಿಕ ಎಲ್ಲ ಸ್ಪರ್ಧಿಗಳು ಬುದ್ಧಿಶಕ್ತಿಯ ಮಟ್ಚ ಅಳೆಯುವ ಮಾನಸಿಕ ಪ್ರಕ್ರಿಯೆ ವೇಗ ಮತ್ತು ಸ್ಮರಣ ಶಕ್ತಿಯ ಎರಡು ಭಿನ್ನ ಪರೀಕ್ಷೆಗಳನ್ನು ಮುಗಿಸಿದರು. ಬೌದ್ಧಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡವರಿಗಿಂತ 10 ನಿಮಿಷಗಳ ಕಾಲದ ಸಾಮಾಜಿಕ ಸಂವಾದದಲ್ಲಿ ಮುಳುಗಿದವರ ಬುದ್ಧಿಶಕ್ತಿಯ ಮಟ್ಟದಲ್ಲಿ ಚೇತರಿಕೆಯಾಗಿದ್ದು ಪತ್ತೆಯಾಯಿತೆಂದು ವೈಬಾರಾ ತಿಳಿಸಿದರು. "

ಈ ಪ್ರಯೋಗವು ಸಾಮಾಜಿಕ ಸಂಪರ್ಕವು ಸ್ಮರಣೆ ಮತ್ತು ಮಾನಸಿಕ ಚಟುವಟಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಂದು ತೋರಿಸಿದೆಯೆಂದು ಅವರು ಹೇಳಿದರು. ಸಾಮಾಜಿಕ ಏಕಾಂಗಿತನವು ಬುದ್ಧಿಶಕ್ತಿಯ ಸಾಮರ್ಥ್ಯದ ಮೇಲೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೂಡ ನಕಾರಾತ್ಮಕ ಪರಿಣಾಮ ಬೀರಬಹುದೆಂದು ಅವರು ಹೇಳಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments