Select Your Language

Notifications

webdunia
webdunia
webdunia
webdunia

ಹೃದಯಬೇನೆ ತಡೆಗೆ ಐದು ಸೂತ್ರಗಳು

ಹೃದಯದ ಮಾತು
, ಶುಕ್ರವಾರ, 14 ಸೆಪ್ಟಂಬರ್ 2007 (19:04 IST)
WDWD
ಭಾವನೆಗಳನ್ನು ವ್ಯಕ್ತಪಡಿಸುವಾಗ ಹೃದಯದ ಮಾತು ಬರುತ್ತದೆ. ಮನಸ್ಸು, ಹೃದಯದ ನಡುವೆ ಸಂಬಂಧಕ್ಕೆ ಇದು ಸಾಕ್ಷಿಯಾಗಿದೆ. ಹೃದಯವೆಂಬುದು ಸದಾ ಚಟುವಟಿಕೆಯ ಕೇಂದ್ರ. ಕಾರ್ಖಾನೆಯಲ್ಲಿ ಯಂತ್ರದ ಸ್ವಿಚ್ ಅದುಮಿದ ಕೂಡಲೇ ಯಂತ್ರ ಚಲಿಸುತ್ತದೆ.

ಹೃದಯದ ಚಾಲನೆಗೆ ಯಾವುದೇ ಗುಂಡಿ ಅದುಮಬೇಕಿಲ್ಲ. ವ್ಯಕ್ತಿ ಬದುಕಿರುವ ತನಕ ಅದು ನಿರಂತರ ಕಾರ್ಯಶೀಲ. ಹೃದಯವೂ ಕೂಡ ದೇಹದ ಒಂದು ಅಂಗ. ಅದಕ್ಕೂ ಕೂಡ ರೋಗ ತಗಲುವ ಸಂಭವವಿದೆ.

ಆರೋಗ್ಯ ಹೃದಯದ ಜೀವನಶೈಲಿ ಅಳವಡಿಸಿಕೊಂಡು ಹೃದಯರೋಗಕ್ಕೆ ಪೂರ್ಣವಿರಾಮ ಹಾಕಿ. ಕೆಳಗೆ ಕೊಟ್ಟಿರುವ ಐದು ಸೂತ್ರಗಳನ್ನು ಅಳವಡಿಸಿಕೊಳ್ಳಿ, ನಿಮ್ಮ ಹೃದಯ ರಕ್ಷಿಸಿಕೊಳ್ಳಿ.

1. ಧೂಮಪಾನ, ತಂಬಾಕು ಉತ್ಪನ್ನಗಳ ಬಳಕೆ ನಿಲ್ಲಿಸಿ

"ನೀವು ಧೂಮಪಾನಿಯಾಗಿದ್ದರೆ ಆ ಚಟವನ್ನು ಬಿಟ್ಟುಬಿಡಿ" ವೈದ್ಯರ ಬಳಿ ಚಿಕಿತ್ಸೆಗೆಂದು ಹೋದಾಗ ಸಲಹೆ ಮಾಡದೇ ಇರುವುದಿಲ್ಲ. ಎಷ್ಟೇ ಪ್ರಮಾಣದ ಧೂಮಪಾನ ಸುರಕ್ಷಿತವಲ್ಲ. ಹೊಗೆರಹಿತ ತಂಬಾಕು ಮತ್ತು ಕಡಿಮೆ ನಿಕೋಟಿನ್ ಸಿಗರೇಟುಗಳು ಕೂಡ ರಿಸ್ಕಿ.

ಧೂಮಪಾನದಲ್ಲಿ 4800 ರಾಸಾಯನಿಕಗಳಿರುತ್ತವೆ. ಬಹಳಷ್ಟು ರಾಸಾಯನಿಕಗಳು ಹೃದಯ ಮತ್ತು ರಕ್ತನಾಳಗಳಿಗೆ ಮಾರಕ. ಇದರಿಂದ ರಕ್ತಧಮನಿಗಳು ಸಂಕುಚಿಸಿ ಹೃದಯಾಘಾತಕ್ಕೆ ದಾರಿಕಲ್ಪಿಸಬಹುದು.

2. ದೈಹಿಕ ಚಟುವಟಿಕೆ

ದೈಹಿಕ ಚಟುವಟಿಕೆ ಒಳ್ಳೆಯದೆಂದು ನಿಮಗೆ ಗೊತ್ತಿದೆ. ಅದು ಎಷ್ಟು ಒಳ್ಳೆಯದೆಂದು ಅರಿವಿರಲಾರದು. ಮಿತವಾದ ದೈಹಿಕ ಚಟುವಟಿಕೆ ಮಾರಕ ಹೃದಯ ಬೇನೆಗೆ ಬ್ರೇಕ್ ಹಾಕುತ್ತದೆ. ದೈಹಿಕ ಚಟುವಟಿಕೆ ಜತೆಗೆ ಆರೋಗ್ಯಕರ ತೂಕದಿಂದ ಪ್ರತಿಫಲ ಇನ್ನಷ್ಟು ಜಾಸ್ತಿ.

ನಿಯಮಿತ ದೈಹಿಕ ಚಟುವಟಿಕೆಯಿಂದ ಹೃದಯಕ್ಕೆ ರಕ್ತಸಂಚಾರ ಹೆಚ್ಚುತ್ತದೆ. ಹೃದಯ ಹೆಚ್ಚೆಚ್ಚು ರಕ್ತವನ್ನು ಪಂಪ್ ಮಾಡುತ್ತದೆ. ದೈಹಿಕ ಚಟುವಟಿಕೆ ತೂಕವನ್ನು ಹತೋಟಿಯಲ್ಲಿಡುತ್ತದೆ.

ಅಧಿಕ ರಕ್ತದ ಒತ್ತಡ, ಕೊಲೆಸ್ಟರಾಲ್ ಹೆಚ್ಚಳ ಮತ್ತು ಮಧುಮೇಹದ ಅಪಾಯಕ್ಕೆ ತೆರೆಎಳೆಯುತ್ತದೆ. ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ. ಪ್ರತಿದಿನ 30ರಿಂದ 60 ನಿಮಿಷಗಳ ಕಾಲ ಮಿತವಾದ ದೈಹಿಕ ಚಟುವಟಿಕೆ ಅತ್ಯವಶ್ಯಕ.

ತೋಟಗಾರಿಕೆ, ಮನೆಕೆಲಸ, ಮೆಟ್ಟಲು ಹತ್ತಿಇಳಿಯುವುದು, ಬಿರುಸಿನ ಕಾಲ್ನಡಿಗೆ ದೈಹಿಕ ವ್ಯಾಯಾಮ ನೀಡುತ್ತದೆ. ಪ್ರತಿಫಲ ಪಡೆಯಲು ಅತ್ಯಂತ ಶ್ರಮದ ದೈಹಿಕ ಚಟುವಟಿಕೆ ಯೋಗ್ಯವಲ್ಲ.

3. ಆರೋಗ್ಯಕರ ಆಹಾರ

ಹಣ್ಣು, ತರಕಾರಿಗಳು, ದವಸಧಾನ್ಯಗಳು, ಕಡಿಮೆ ಕೊಬ್ಬಿನ ಅಂಶದ ಡೈರಿ ಉತ್ಪನ್ನಗಳು ಹೃದಯದ ರಕ್ಷಣೆ ಮಾಡುತ್ತವೆ. ಕೊಬ್ಬಿನ ಅಂಶ ಕಡಿಮೆಯಿರುವ ಪ್ರೊಟೀನ್ ಮೂಲಗಳು ಮತ್ತು ಕೆಲವು ಬಗೆಯ ಮೀನುಗಳು ಕೂಡ ಹೃದಯಬೇನೆಯ ಅಪಾಯ ತಗ್ಗಿಸುತ್ತದೆ.

ಕೆಲವು ಕೊಬ್ಬಿನ ಅಂಶದ ಆಹಾರವನ್ನು ಸೀಮಿತ ಪ್ರಮಾಣದಲ್ಲಿ ಸೇವನೆಯಿಂದ ಹೃದಯಬೇನೆ ತಗ್ಗಿಸಬಹುದು. ಸ್ಯಾಚುರೇಟೆಡ್ ಕೊಬ್ಬಿನಿಂದ ಕೂಡಿದ ದನದ ಮಾಂಸ, ಬೆಣ್ಣೆ, ತುಪ್ಪ, ಹಾಲು, ತೆಂಗಿನಕಾಯಿ ಮತ್ತು ಪಾಮ್ ಎಣ್ಣೆಯ ಅತಿಯಾದ ಸೇವನೆ ವರ್ಜ್ಯ. ಇವು ರಕ್ತದ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಿಸಿ ಹೃದಯಬೇನೆಗೆ ದಾರಿಯಾಗಬಹುದು.

ಅತಿಯಾಗಿ ಕರಿದ ಫಾಸ್ಟ್ ಫುಡ್‌ಗಳು, ಬೇಕರಿ ಉತ್ಪನ್ನಗಳು, ಪ್ಯಾಕೇಜಡ್ ಸ್ನ್ಯಾಕ್ ಫುಡ್‌ಗಳು ಸ್ಯಾಚುರೇಟೆಡ್ ಕೊಬ್ಬಿಗಿಂತ ಅಪಯಾಕಾರಿ.ಹೆಚ್ಚೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿರಿ, ಇವು ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಗೂ ರಾಮಬಾಣ.

ಒಮೇಗಾ-3 ಫ್ಯಾಟಿ ಆಸಿಡ್ ಹೃದಯಬೇನೆಯ ಅಪಾಯ ತಗ್ಗಿಸುತ್ತದೆ. ಅನಿಯಮಿತ ಹೃದಯಬಡಿತ, ಕಡಿಮೆ ರಕ್ತದ ಒತ್ತಡದಿಂದ ರಕ್ಷಣೆ ಮಾಡುತ್ತದೆ. ಕೆಲವು ಮೀನುಗಳು ಒಮೇಗಾ-3ಎಸ್‌ನ ನೈಸರ್ಗಿಕ ಮೂಲವಾಗಿದೆ. ಆದರೆ ಗರ್ಭಿಣಿ ಮಹಿಳೆಯರು ಶಾರ್ಕ್, ಬಂಗುಡೆಮೀನು, ಟೈಲ್‌ಫಿಶ್ ತಿನ್ನುವುದು ಒಳ್ಳೆಯದಲ್ಲ. ಭ್ರೂಣಕ್ಕೆ ಅಪಾಯಕರವಾದ ಪಾದರಸದ ಅಂಶ ಅವುಗಳಲ್ಲಿರುತ್ತದೆ.

4.ಆರೋಗ್ಯಕರ ತೂಕ

ಸಾಮಾನ್ಯವಾಗಿ ಮದ್ಯವಯಸ್ಸಿನಲ್ಲಿ ತೂಕ ಹೆಚ್ಚುತ್ತದೆ. ಆಗ ದೇಹದಲ್ಲಿ ಕೊಬ್ಬಿನ ಅಂಶ ಏರುತ್ತದೆ. ತೂಕ ಹೆಚ್ಚಳದಿಂದ ಅಧಿಕ ರಕ್ತದ ಒತ್ತಡ, ಅಧಿಕ ಕೊಲೆಸ್ಟರಾಲ್ ಮತ್ತು ಮಧುಮೇಹಕ್ಕೆ ಮುಕ್ತ ಬಾಗಿಲು ತೆರೆಯುತ್ತದೆ.

ದೇಹ ತೂಕದ ಆರೋಗ್ಯ ಎಂದು ಗಮನಿಸುವುದು ಹೇಗೆ? ದೇಹ ತೂಕದ ಸೂಚ್ಯಂಕ(ಬಿಎಂಐ) ಲೆಕ್ಕಹಾಕುವುದು ಒಂದು ದಾರಿ. ನಿಮ್ಮ ಎತ್ತರ ಮತ್ತು ತೂಕದ ಆಧಾರದ ಮೇಲೆ ದೇಹದಲ್ಲಿ ಕೊಬ್ಬಿನ ಅಂಶವನ್ನು ಬಿಎಂಐ ಅಳೆಯುತ್ತದೆ.25ಕ್ಕಿಂತ ಹೆಚ್ಚು ಬಿಎಂಐ ಹೊಂದಿದ್ದರೆ ಅಧಿಕ ಕೊಬ್ಬಿನ ಅಂಶ, ಅಧಿಕ ರಕ್ತದ ಒತ್ತಡದಿಂದ ಹೃದಯಬೇನೆ ಮತ್ತು ಸ್ಟ್ರೋಕ್ ಅಪಾಯದ ಅಂಚಿನಲ್ಲೀದ್ದೀರಿ ಎಂದರ್ಥ.

5. ನಿಯಮಿತ ಆರೋಗ್ಯ ಪರೀಕ್ಷೆ

ರಕ್ತದ ಒತ್ತಡದ ಪರೀಕ್ಷೆ ಬಾಲ್ಯದಿಂದಲೇ ಆರಂಭವಾಗುತ್ತದೆ. ವಯಸ್ಕರು ಕನಿಷ್ಠ 2 ವರ್ಷಗಳಿಗೊಮ್ಮೆ ರಕ್ತದ ಒತ್ತಡ ಪರೀಕ್ಷೆ ಮಾಡಿಸಬೇಕು. ಹೃದಯಬೇನೆ ಅಪಾಯ ಹೆಚ್ಚಿಗೆ ಇದ್ದಾಗ ಆಗಾಗ್ಗೆ ಪರೀಕ್ಷೆ ಮಾಡಿಸಲೇಬೇಕು.

ವಯಸ್ಕರು ಕೊಲೆಸ್ಟರಾಲ್ ಮಟ್ಟವನ್ನು ಕನಿಷ್ಠ 5 ವರ್ಷಗಳಿಗೊಮ್ಮೆ ಪರೀಕ್ಷೆ ಮಾಡಿಸಬೇಕು. ರಕ್ತದ ಒತ್ತಡ 120/80 ಮಿಲಿಮೀಟರ್ ಮರ್ಕುರಿಗಿಂತ ಕಡಿಮೆಯಿರುವುದು ಪ್ರಶಸ್ತ ರಕ್ತದ ಒತ್ತಡ. ಕುಟುಂಬದ ಹಿರಿಯರಲ್ಲಿ ಹೃದಯಬೇನೆ ಇತಿಹಾಸವಿದ್ದರೆ ಮಕ್ಕಳಿಗೂ ಕೂಡ ರಕ್ತದ ಕೊಲೆಸ್ಟರಾಲ್ ಪರೀಕ್ಷೆ ಅಗತ್ಯ.


ಕೆಲವು ಬಾರಿ ಹೃದಯಬೇನೆ ತಪ್ಪಿಸಲಾಗುವುದಿಲ್ಲ. "ಹೃದಯ ಆರೋಗ್ಯ" ಜೀವನಶೈಲಿ ಜಟಿಲವಲ್ಲ. ನೀವು ಆತ್ಮವಂಚನೆಯ ಜೀವನ ಮಾಡಬೇಕೆಂದು ಇದರ ಅರ್ಥವಲ್ಲ. ಬದಲಾಗಿ, ಹೃದಯ ಆರೋಗ್ಯ ಅಭ್ಯಾಸಗಳನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ ಜೀವನಪೂರ್ತಿ ಆರೋಗ್ಯಕರವಾಗಿ ಕಳೆಯಬಹುದು.

Share this Story:

Follow Webdunia kannada