ಸಿಂಡ್ರಮ್ -ಎಕ್ಸ್ ಇದು ಮಹಿಳೆಯರನ್ನು ಕಾಡುವ ವಿಲಕ್ಷಣ ಆರೋಗ್ಯ ಸಮಸ್ಯೆ. ನಿಗದಿತವಾಗಿ ವೈದ್ಯ ತಪಾಸಣೆ ಮಾಡುತ್ತಿದ್ದರೂ ಗುರುತರ ರೋಗ ಪತ್ತೆಯಾಗದ ವಿಧಾನವಿದು.
ಸಾಮಾನ್ಯವಾಗಿ ಹೃದಯರೋಗ ಮಹಿಳೆಯರಲ್ಲಿ ವಿರಳ ಎನ್ನುವವರಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತ, ರೋಗಗಳು ಕಡಿಮೆಯೇ.
ಆದರೂ ಮಹಿಳೆಯರಿಗೆ ರೋಗವಿದ್ದರೂ ಪತ್ತೆಯಾಗದಂತೆ ಬಚ್ಚಿಡುವ ಕಾಯಿಲೆಯೇ ಸಿಂಡ್ರಮ್ ಎಕ್ಸ್. ಇತ್ತೀಚಿನ ಅಧ್ಯಯನದಂತೆ ಮಹಿಳೆಯರಲ್ಲಿರುವ ಹೃದ್ರೋಗವಿದ್ದರೂ ಸಿಂಡ್ರೋಮ್ ಎಕ್ಸ್ ಅದನ್ನು ಬಚ್ಚಿಡುತ್ತದಂತೆ. ಹೃತ್‌ಕಾಯಿಲೆ ಇದ್ದರೂ ಕ್ಷಕಿರಣ ಮತ್ತಿತರ ತಪಾಸಣೆಗಳಲ್ಲಿ ನಿರೋಗ ಫಲಿತಾಂಶ ಲಭಿಸುತ್ತದೆ.
ಮಹಿಳೆಯರಲ್ಲಿ ಸಣ್ಣಗಾತ್ರದ ರಕ್ತ ನಾಳಗಳಲ್ಲಿರುವ ಅಡಚಣೆಗಳು ಪತ್ತೆಯಾಗದಂತೆ ಉಳಿಯುತ್ತವೆ. ಇಂತಹ ಸಮಸ್ಯೆ ಇರುವವರಿಗೆ ತೀವ್ರಸ್ವರೂಪದ ಎದೆ ನೋವು ಅನುಭವವಾಗುತ್ತದೆ. ಇದನ್ನು ತಜ್ಞರು ಸಿಂಡ್ರಮ್ ಎಕ್ಸ್ ಎಂದು ಹೆಸರಿಸಿದ್ದಾರೆ.
ತಪಾಸಣೆಗಳಲ್ಲಿ ಪತ್ತೆಯಾಗದ ಈ ರೋಗ ವಿಧಾನವು ಭವಿಷ್ಯದಲ್ಲಿ ಆ ಮಹಿಳೆಗೆ ಗಂಭೀರ ಸ್ವರೂಪದ ಹೃದಯಸಮಸ್ಯೆಗೆ ಕಾರಣವಾಗುತ್ತದೆ. ಮುಟ್ಟು ನಿಂತಿರುವ ಹರೆಯದಲ್ಲಿರುವ( 45ರ ಆಸುಪಾಸು)ಮಹಿಳೆಯರನ್ನು ಇದು ಹೆಚ್ಚಾಗಿ ಕಾಡುತ್ತದೆ.
ಇಂತಹ ಸಮಸ್ಯೆ ಇರುವ ಮಹಿಳೆಯರು ಸಂತಾನ ನಿಯಂತ್ರಣ ಮಾತ್ರೆ, ಕ್ಯಾಪ್ಸೂಲ್‌ಗಳನ್ನು ಸೇವಿಸುವುದು, ಕೊಬ್ಬಿನಂಶವಿರುವ ಆಹಾರ ಸೇವನೆ ತ್ಯಜಿಸಬೇಕು. ಈ ಕುರಿತು ಅಧ್ಯಯನ ನಡೆಸಿದ ಅಮೇರಿಕದ ಹಾರ್ಟ್ ಎಂಡ್ ಲಂಗ್ಸ್ ಬ್ಲಡ್ ಇನ್‌ಸ್ಟಿಟ್ಯೂಟ್ ಈ ಕುರಿತು ವರದಿ ನೀಡಿದೆ.