Webdunia - Bharat's app for daily news and videos

Install App

ವೇಗವಾಗಿ ಊಟ ಮಾಡುತ್ತಿದ್ದೀರಾ? ಜೋಕೆ!

Webdunia
PTI
ಯಾರು ವೇಗವಾಗಿ ಮತ್ತು ಹೊಟ್ಟೆ ಭರ್ತಿಯಾಗುವ ತನಕ ತಿನ್ನುತ್ತಾರೋ ಅವರು ಇತರರಿಗಿಂತ ದಪ್ಪಗಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಜಪಾನ್ ಅಧ್ಯಯನವೊಂದು ತಿಳಿಸಿದೆ.

ಈ ಅಧ್ಯಯನಕ್ಕಾಗಿ 30ರಿಂದ 69ರ ಹರೆಯದ 1122 ಪುರುಷರು, 2165 ಮಹಿಳೆಯರನ್ನು ಬಳಸಿಕೊಳ್ಳಲಾಗಿತ್ತು. ಅವರಲ್ಲಿ ಶೇಕಡಾ 50.9 ಪುರುಷರು ಮತ್ತು ಶೇಕಡಾ 58.4 ಮಹಿಳೆಯರು ತೃಪ್ತಿಯಾಗುವ ತನಕ ತಿನ್ನುವವರು ಹಾಗೂ ಶೇಕಡಾ 45.6 ಪುರುಷರು ಮತ್ತು ಶೇಕಡಾ 36 ಮಹಿಳೆಯರು ವೇಗವಾಗಿ ಊಟ, ತಿಂಡಿ ಸ್ವೀಕರಿಸುವವರು ಎಂದು ಅಧ್ಯಯನ ತಂಡ ಪ್ರಯೋಗಾರ್ಥಿಗಳಿಂದ ತಿಳಿದುಕೊಂಡು ಈ ಫಲಿತಾಂಶವನ್ನು ಬಹಿರಂಗಗೊಳಿಸಿದೆ.

ವೇಗವಾಗಿ ತಿನ್ನುವವರು ಮತ್ತು ತೃಪ್ತಿಯಾಗುವ ತನಕ ತಿಂದು ತೇಗುವವರನ್ನು ಗಮನಿಸಿದಾಗ ಅವರೆಲ್ಲರೂ ಧಡೂತಿ ದೇಹ ಅಥವಾ ಆಕಾರವಿಲ್ಲದ ದೇಹವನ್ನು ಹೊಂದಿದ್ದರು ಮತ್ತು ಶಕ್ತಿವಂತರಲ್ಲ. ಅವರು ಮೂರು ಪಟ್ಟು ಹೆಚ್ಚು ತೂಕ ಹೊಂದಿದ್ದರು ಎಂದು ಸಂಶೋಧನಾಕಾರರು ತಿಳಿಸಿದ್ದಾರೆ.

ಈ ಅಧ್ಯಯನದ ವಿವರ ಅಕ್ಟೋಬರ್ 22ರ ಬ್ರಿಟೀಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಒಸಾಕ ಯುನಿವರ್ಸಿಟಿಯ ಪ್ರೊ. ಹಿರೊಯಸು ಇಸೊ ಮತ್ತು ಸಹೋದ್ಯೋಗಿಗಳು ಸಂಶೋಧನೆಯ ರೂವಾರಿಗಳೆಂದು ಪ್ರಕಟಿಸಲಾಗಿದೆ.

ಹೆಚ್ಚಿನ ವಯಸ್ಕರು ಕೊಬ್ಬು ಶೇಖರಣೆಗೆ ಅವಕಾಶ ಕೊಡದೆ ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಿನ್ನುವ ಗೋಜಿಗೆ ಹೋಗುವುದಿಲ್ಲ. ಆದರೆ ತಿನ್ನುವ ಶೈಲಿ ಬದಲಾಗಿದೆ. ಅಗ್ಗದ ಆಹಾರ ಬಹುಪ್ರಮಾಣದಲ್ಲಿ ತಿನ್ನುವುದು, ಫಾಸ್ಟ್ ಫುಡ್, ಕಡಿಮೆ ಜನರು ಒಟ್ಟಿಗೆ ಕುಳಿತು ಊಟ ಮಾಡುವುದು ಮತ್ತು ಊಟ ಮಾಡುವಾಗ ಗಮನ ಬೇರೆಡೆಗೆ ಹರಿಸುವುದು ಹೆಚ್ಚಾಗುತ್ತಿದೆ. ಉದಾಹರಣೆಗೆ ಕೆಲವರು ಆಹಾರ ಸೇವಿಸುವಾಗ ಟೀವಿ ನೋಡುತ್ತಾರೆ. ಇದರಿಂದ ಕೂಡಾ ದೇಹ ತೂಕ ಹೆಚ್ಚುತ್ತದೆ ಎಂದೂ ಈ ಸಂಶೋಧನೆ ತಿಳಿಸಿದೆ.

ಜಪಾನ್ ಅಧ್ಯಯನದ ಪ್ರಕಾರ ಬೇರೆ ಬೇರೆ ದೇಶಗಳ ಜನರು ತಿನ್ನುವ ಶೈಲಿ ಕೂಡಾ ದೇಹದ ಬೊಜ್ಜು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದೆ. ಆಸ್ಟ್ರೇಲಿಯಾದ ಸೌತ್‌ವೇಲ್ಸ್ ಯುನಿವರ್ಸಿಟಿಯ ಎಲಿಜಬೆತ್ ಡೆನ್ನೀ-ವಿಲ್ಸನ್, ಡೀಕಿನ್ ಯುನಿವರ್ಸಿಟಿಯ ಕರೆನ್ ಕ್ಯಾಂಪ್‌ಬೆಲ್ ಜೊತೆಯಾಗಿ ಲೇಖನವೊಂದರಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.

ಮಕ್ಕಳಲ್ಲಿ ಆರೋಗ್ಯಕರವಾಗಿ ತಿನ್ನುವ ರೀತಿಯನ್ನು ತಿಳಿಸಿಕೊಡುವಲ್ಲಿ ಹೆತ್ತವರ ಜತೆ ವೈದ್ಯರು ಕೂಡಾ ಶ್ರಮಿಸಬೇಕಾಗಿದೆ. ನಿಧಾನವಾಗಿ ಊಟ ಮಾಡುವುದು, ಅಗತ್ಯದಷ್ಟು ಮಾತ್ರ ಸೇವನೆ ಮತ್ತು ಗಮನವಿರಿಸಿ ಕುಟುಂಬ ಸಮೇತ ಆಹಾರ ಸ್ವೀಕರಿಸಲು ಸಲಹೆ, ಪ್ರೋತ್ಸಾಹ ನೀಡಬೇಕು ಎಂದು ವೈದ್ಯರಿಗೆ ಸಂಶೋಧನಾ ತಂಡ ಸಲಹೆ ನೀಡಿದೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments