Webdunia - Bharat's app for daily news and videos

Install App

ವಿಚ್ಛೇದಿತರ ಹೆಮ್ಮಕ್ಕಳಿಗೆ ಮಕ್ಕಳಾಗುವುದು ಇಷ್ಟವಿಲ್ಲ

Webdunia
NDND
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಕಾಲ ಹಳೆಯದಾಯಿತು. ಈಗೇನಿದ್ದರೂ ಮಲಗೇಳುತ್ತಲೂ ಮುಂದುವರಿಯುವ ಜಗಳ ಅಂತ್ಯವಾಗುವುದು ಕೋರ್ಟ್ ಕಟಕಟೆಯಲ್ಲಿ ನಿಂತು ಆತ ಯಾ ಅಕೆಯೊಡೆ ಬಾಳ್ವೆ ಸಾಧ್ಯವಿಲ್ಲದ ಮಾತು ಎಂಬಲ್ಲಿ. ಎಂದಿನಂತೆ ಅಪ್ಪ-ಅಮ್ಮನ ಜಗಳದಲ್ಲಿ ಬಡವಾಗುವುದು ಮಾತ್ರ ಮಕ್ಕಳು.

ಆದರೆ ಇಂತಹ ವಿಚ್ಛೇದಿತರ ಹೆಣ್ಣು ಮಕ್ಕಳಿಗೆ ಮದುವೆಯತ್ತ ಒಲವು ಕಮ್ಮಿ, ಒಂದೊಮ್ಮೆ ವಿವಾಹಿತರಾದರೂ ಮಕ್ಕಳನ್ನು ಹಡೆಯುವಲ್ಲಿ ಅವರು ವಿಳಂಬನೀತಿ ಅನುಸರಿಸುತ್ತಾರೆ ಎಂದು ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. ಇಂತಹ ಹುಡುಗಿಯರು ತಮ್ಮನ್ನು ಸಲಹುವ ಗಂಡನನ್ನು ಹುಡುಕುವುದಕ್ಕಿಂತಹ ಕೆಲಸ ಹೊಂಚಿಕೊಂಡು ಸ್ವಾಲಂಬಿಗಳಾಗಲು ಇಷ್ಟಪಡುತ್ತಾರೆ ಎಂದು ಅಧ್ಯಯನ ಹೇಳುತ್ತಿದೆ.

ವಿವಾಹ ಕಾನೂನುಗಳು ಮಹಿಳೆಯರ ಜೀವನದ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬ ಸಂಶೋಧನೆಯಲ್ಲಿ ಈ ಅಂಶಗಳು ಪತ್ತೆಯಾಗಿವೆ. 1971 ರಿಂದ 1996ರ ವೇಳೆಯಲ್ಲಿ ವಿಚ್ಛೇದನವನ್ನು ಸಿಂಧುವಾಗಿಸಿರುವ ಸ್ಪೇನ್, ಇಟಲಿ, ಪೋರ್ಚುಗಲ್ ಮತ್ತು ಐರ್ಲೆಂಡ್- ಈ ನಾಲ್ಕು ರಾಷ್ಟ್ರಗಳಲ್ಲಿ ಮಹಿಳೆಯರನ್ನು ಈ ಅಧ್ಯಯನಕ್ಕೆ ಗೊತ್ತು ಮಾಡಲಾಗಿತ್ತು.

ಕಾನೂನುಗಳ ಬದಲಾವಣೆಯ ಬಳಿಕ ಮಹಿಳೆಯರ ಜೀವನದ ವಿವಿಧ ರೂಪಗಳ, ಅಂದರೆ, ವಿವಾಹದ ಕುರಿತು ಅವರ ಇಷ್ಟಾನಿಷ್ಟಗಳು, ಮಕ್ಕಳನ್ನು ಹಡೆಯವುದು, ಉದ್ಯೋಗ ಸಂಪಾದನೆ ಮುಂತಾದ ವಿಚಾರಗಳ ಕುರಿತು ತುಲನೆ ಮಾಡಲಾಗಿತ್ತು.

ಬಳಿಕ ಈ ಫಲಿತಾಂಶಗಳನ್ನು ಶತಕಗಳಿಂದ ವಿಚ್ಛೇದನಕ್ಕೆ ಅನುಮತಿ ಇದ್ದ ಬ್ರಿಟನ್‌ನಂತಹ ಇತರ ರಾಷ್ಟ್ರಗಳೊಂದಿಗೆ ಹೋಲಿಸಲಾಯಿತು. ಇಲ್ಲಿನ ವಿಚ್ಛೇದಿತ ಹೆತ್ತವರ ಮಕ್ಕಳು, ತಾವು ಮಕ್ಕಳನ್ನು ಹೊಂದುವುದರಲ್ಲಿ ಕಡಿಮೆ ಆಸಕ್ತಿಯನ್ನು ಹೊಂದಿದ್ದಾರೆ ಎಂಬ ಅಂಶ ಪತ್ತೆಯಾಗಿದೆ.

ಹೆತ್ತವರ ಒಡಕು ಬದುಕನ್ನು ಕಂಡ ಶೇ47ರಷ್ಟು ಮಹಿಳೆಯರು ಅವಲಂಬಿ ಮಕ್ಕಳನ್ನು ಹೊಂದಲು ಅನಾಸಕ್ತರಾಗಿದ್ದಾರೆ. ಅಧ್ಯಯನದ ಈ ಫಲಿತಾಂಶವು ರಾಯಲ್ ಎಕಾನಮಿಕ್ ಸೊಸೈಟಿಯಲ್ಲಿ ಪ್ರಕಟವಾಗಿದೆ. ಇದರ ಪ್ರಕಾರ 1970ರ ಬಳಿಕ ಕಡಿಮೆ ಮಹಿಳೆಯರು ವಿವಾಹವಾಗಲು ಇಚ್ಛಿಸುತ್ತಾರೆ. ಹೆಚ್ಚಿನವರು ಏಕಾಂಗಿಯಾಗಿ ಮಕ್ಕಳನ್ನು ಬೆಳೆಸಲು ಇಚ್ಛಿಸುತ್ತಾರೆ. ಪುಟ್ಟಮಕ್ಕಳ ಎಲ್ಲಾ ತಾಯಂದಿರಲ್ಲಿ ಅರ್ಧಕ್ಕಿಂತ ಹೆಚ್ಚಿನ ಮಂದಿ ಹೊರಗಡೆ ದುಡಿಯಲು ತೆರಳುತ್ತಾರೆ.

ವಿಚ್ಛೇದನವು ನ್ಯಾಯಯುತವಾಗಿರುವ ರಾಷ್ಟ್ರಗಳಲ್ಲಿ ಪುರುಷರು ಮತ್ತು ಮಹಿಳೆಯರು, ವಿಚ್ಛೇದನ ನಿಷೇಧಿಸಿರುವ ರಾಷ್ಟ್ರಗಳಿಗಿಂತ ಶೇ.11ರಷ್ಟು ಕಡಿಮೆ ಆಸಕ್ತಿ ಹೊಂದಿದ್ದಾರೆ. ವಿವಾಹಿತ ಸಂಬಂಧವನ್ನು ಮುರಿದುಕೊಳ್ಳಲು ಅವಕಾಶ ಇರುವ ರಾಷ್ಟ್ರಗಳಲ್ಲಿ ಅವರು ವಿಳಂಬಿತ ವಿವಾಹವನ್ನು ನೆಚ್ಚಿಕೊಳ್ಳುತ್ತಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments