Select Your Language

Notifications

webdunia
webdunia
webdunia
webdunia

ವಾಯು ಮಾಲಿನ್ಯ ಮಕ್ಕಳಿಗೆ ಅಪಾಯಕಾರಿ

ಮಾಲಿನ್ಯ
WD
ವಾಹನಗಳ ಮಾಲಿನ್ಯದಿಂದ ಮಕ್ಕಳಲ್ಲಿ ಉಸಿರಾಟದ ತೊಂದರೆಗಳು ಹೆಚ್ಚುತ್ತದೆ ಮತ್ತು ಶ್ವಾಸಕೋಶದ ಗಾತ್ರವನ್ನು ಕುಗ್ಗಿಸುತ್ತದೆ ಎಂದು ಸಂಶೋಧನೆ ವರದಿಯೊಂದು ದೃಢಪಡಿಸಿದೆ. ವಾಹನದಟ್ಟಣೆಯಿರುವ ನಗರಪ್ರದೇಶದ ರಸ್ತೆಯೊಂದರಲ್ಲಿ ಮಕ್ಕಳ ಶ್ವಾಸಕೋಶ ನಿರ್ವಹಣೆ ಮತ್ತು ಉಸಿರಾಟದ ಲಕ್ಷಣಗಳ ಮೇಲೆ ವಾಹನದಟ್ಟಣೆಯ ಪರಿಣಾಮಗಳನ್ನು ಅಮೆರಿಕದ ಸಂಶೋಧಕರು ಅಧ್ಯಯನ ಮಾಡಿ ಆಸ್ತಮಾಪೀಡಿತ ಮಕ್ಕಳಿಗೆ ಉಸಿರಾಟದ ತೊಂದರೆಗಳು ಉಲ್ಬಣಿಸಿದ್ದನ್ನು ಗಮನಿಸಿದರು ಎಂದು ಸೈನ್ಸ್ ಡೇಲಿ ವರದಿ ಮಾಡಿದೆ.

ವಾಹನಗಳು ಹೊರಬಿಡುವ ಹೊಗೆಯ ಮಾಲಿನ್ಯಕ್ಕೆ ಮಕ್ಕಳು ಮನೆಯಲ್ಲಿ ಅಥವಾ ಶಾಲೆಯಲ್ಲಿ ಅತೀ ಸಮೀಪದಲ್ಲಿದ್ದರೆ ಆಸ್ತಮಾ ಪೀಡಿತ ಮಕ್ಕಳ ಉಸಿರಾಟದ ಮೇಲೆ ತೀವ್ರ ತೊಂದರೆಗಳು ಉದ್ಭವಿಸುವುದು ನಮ್ಮ ಫಲಿತಾಂಶದಿಂದ ಸಾಬೀತಾಗಿದೆ ಎಂದು ಎಮೊರಿ ವಿವಿ ವೈದ್ಯ ಶಾಲೆಯ ಅಧ್ಯಯನದ ಮುಖ್ಯ ಲೇಖಕ ಫರ್ನಾಂಡೊ ಹಾಲ್ಗಿನ್ ತಿಳಿಸಿದರು.

ವಾಹನ ಸಂಬಂಧಿತ ಮಾಲಿನ್ಯಗಳು ಆಸ್ತಮಾ ತೀವ್ರತೆಯೊಂದಿಗೆ ನಂಟು ಹೊಂದಿರುವುದು ಇದರಿಂದ ತಿಳಿದುಬಂದಿದೆ. ಆದರೆ ಆಸ್ತಮಾಪೀಡಿತ ಮಕ್ಕಳು ಮತ್ತು ಆಸ್ತಮಾರಹಿತ ಮಕ್ಕಳ ಉಸಿರಾಟ ಮತ್ತು ಶ್ವಾಸಕೋಶದ ಗಾತ್ರದ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆನ್ನುವುದು ಇನ್ನೂ ರುಜುವಾತಾಗಿಲ್ಲ.

ನಿರ್ದಿಷ್ಟ ವಾಹನ ಸಂಬಂಧಿತ ಮಾಲಿನ್ಯವು ಮಕ್ಕಳ ಶ್ವಾಸಕೋಶ ನಿರ್ವಹಣೆ ಮತ್ತು ಉಸಿರಾಟದ ಲಕ್ಷಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆಂದು ತನಿಖೆ ಮಾಡಲು ಸಂಶೋಧಕರು ವಯಸ್ಸು ಮತ್ತು ಲಿಂಗದಲ್ಲಿ ಹೊಂದಿಕೆಯಾಗುವ 6ರಿಂದ 12ರ ವಯೋಮಿತಿಯ 200 ಮಂದಿ ಮಕ್ಕಳನ್ನು ಆಯ್ಕೆಮಾಡಿಕೊಂಡರು. ಒಂದು ವರ್ಷದ ಅವಧಿಯಲ್ಲಿ ಮಕ್ಕಳ ಮನೆಗಳು ಮತ್ತು ಶಾಲೆಗಳಲ್ಲಿ ವಾಹನ ಸಂಬಂಧಿತ ಮಾಲಿನ್ಯಗಳ ಪ್ರಮಾಣ ಮತ್ತು ರಸ್ತೆ ಮತ್ತು ವಾಹನ ದಟ್ಟಣೆಯ ಪ್ರಮಾಣವನ್ನು ಅಳತೆ ಮಾಡಿ ಪ್ರತಿಯೊಂದು ಮಗುವಿನ ಶ್ವಾಸಕೋಶದ ನಿರ್ವಹಣೆ ಮತ್ತು ಉಸಿರಾಟದ ಲಕ್ಷಣಗಳನ್ನು ಕ್ರಮವಾಗಿ ನಾಲ್ಕು ತಿಂಗಳ ಕಾಲ ಮೌಲ್ಯಮಾಪನ ಮಾಡಿದರು.

ಅತ್ಯಂತ ವಾಹನದಟ್ಟಣೆಯ ಪ್ರದೇಶದ ಮನೆಗಳಲ್ಲಿ ವಾಸಿಸುವ ಆಸ್ತಮಾಪೀಡಿತ ಮಕ್ಕಳ ಮೇಲೆ ವಾಯುಮಾಲಿನ್ಯದ ಪರಿಣಾಮ ಉಂಟಾಗಿದ್ದು ಗೋಚರವಾಯಿತು. ಈ ಮಕ್ಕಳಲ್ಲಿ ಅಧಿಕ ಮಟ್ಟದಲ್ಲಿ ನೈಟ್ರಿಕ್ ಆಕ್ಸೈಡ್ ಸೇವನೆ ಹಾಗೂ ಶ್ವಾಸಕೋಶದ ಗಾತ್ರ ಕುಗ್ಗಿದ ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂತು. ಅತ್ಯಂತ ವಾಹನದಟ್ಟಣೆಯ 50 ಮೀಟರ್‌ ವ್ಯಾಪ್ತಿಯೊಳಗೆ ವಾಸಿಸುವ ಆಸ್ತಮಾಪೀಡಿತ ಮಕ್ಕಳಿಗೆ ಉಸಿರಾಟದ ತೊಂದರೆಗಳು ಶೇ. 50ರಷ್ಟು ಹೆಚ್ಚಿದ್ದು ಕಂಡುಬಂತು.

Share this Story:

Follow Webdunia kannada