Webdunia - Bharat's app for daily news and videos

Install App

ರಕ್ತದೊತ್ತಡ ಭಯಬೇಡ

Webdunia
ಅಧಿಕ ರಕ್ತದೊತ್ತಡವು ಇದೀಗ ಜನಸಾಮಾನ್ಯರ ರೋಗವಾಗಿ ಪರಿವರ್ತಿತಗೊಂಡಿದ್ದು, ವಿಶ್ವದಲ್ಲಿ ಅಧಿಕ ರಕ್ತದೊತ್ತಡದ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಇದು ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುವ ರೋಗಗಳಲ್ಲಿ ಮೊದಲ ಸ್ಥಾನ ಪಡೆಯುತ್ತದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.

ವರದಿಯ ಪ್ರಕಾರ, ಅಮೆರಿಕಾವೊಂದರಲ್ಲಿಯೇ 73 ದಶಲಕ್ಷ ಜನರು ಅಧಿಕ ರಕ್ತದೊತ್ತಡದಲ್ಲಿ ನರಳುತ್ತಿದ್ದು, ಹೆಚ್ಚಿನವರಿಗೆ ತಮಗೆ ರೋಗ ಇರುವ ಕುರಿತು ಇನ್ನೂ ಅರಿವಿಲ್ಲ ಎಂದು ತಿಳಿಸಿದೆ.

ಸಾಮಾನ್ಯ ಭಾಷೆಯಲ್ಲಿ 'ಬಿಪಿ' ಎಂದು ಕರೆಯಲ್ಪಡುವ ಅಧಿಕ ರಕ್ತದೊತ್ತಡ ಪ್ರಕರಣಗಳು ಪ್ರಸ್ತುತ ಹೆಚ್ಚಾಗುತ್ತಿದ್ದು, ಕೆಲವರಿಗೆ ಇದು ತಿಳಿದಿದ್ದರೆ, ಇನ್ನೂ ಕೆಲವರಿಗೆ ರಕ್ತದೊತ್ತಡ ಇರುವುದು ತಿಳಿದಿಲ್ಲ. ಅಂತವರಿಗೆ ರಕ್ತದೊತ್ತಡ ಮಾರಕವಾಗುವುದಲ್ಲದೆ, ಮೌನ ಹಂತಕನಾಗಿ ಪರಿಣಮಿಸುತ್ತದೆ. ಇದು ಸಾವಿನ ಸಂಖ್ಯೆಯ ಸರಾಸರಿಗೆ 'ಬಿಪಿ'ಯ ಕೊಡುಗೆ ಅಪಾರವಾಗಿದೆ ಎಂದು ವರದಿ ವಿವರಿಸುತ್ತದೆ.

ವರದಿಯಲ್ಲಿ ತಿಳಿಸಿರುವಂತೆ ಶೇ.90 ರಷ್ಟು ಜನ ರಕ್ತದೊತ್ತಡದ ಪರೀಕ್ಷೆಗೆ ಒಳಗಾಗಿರುತ್ತಾರೆ. ಆದರೆ ಈ ಸಂಖ್ಯೆಯಲ್ಲಿ ಸುಮಾರು ಕಾಲುಭಾಗದಷ್ಟು ಜನ ಸರಿಯಾದ ಔಷಧವನ್ನು ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಾರೆ.

' ಅಮೆರಿಕಾದಲ್ಲಿ ರಕ್ತದೊತ್ತಡಕ್ಕೆ ಧ್ಯಾನವೇ ಸುಲಭ ಮದ್ದು, ಆದರೆ ಹೆಚ್ಚಿನ ಪಾಲಿನ ಜನರು ಇದನ್ನೂ ಮಾಡುವುದಿಲ್ಲ' ಎಂಬುದು ಡ್ಯೂಕ್ ವಿಶ್ವವಿದ್ಯಾಲಯದ ಹೃದ್ರೋಗ ತಜ್ಞರಾದ ಕ್ರಿಸ್ಟೋಫರ್ ಗ್ರ್ಯಾಂಗರ್ ಅವರ ಅಭಿಪ್ರಾಯ.

ಸೈನ್ಸ್ ಡೈಲಿಯ ವರದಿ ಪ್ರಕಾರ, ರಕ್ತದೊತ್ತಡ ಇರುವ ರೋಗಿಗಳ ಕೆಲವು ಅಂಗಗಳಿಗೆ ಈಗಾಗಲೇ ಹಾನಿಯಾಗಿರುತ್ತದೆ. ಇದರಿಂದಾಗಿ ಕೆಲವು ರೋಗಿಗಳು ಆಸ್ಪತ್ರೆಯಲ್ಲಿಯೇ ಮರಣವನ್ನಪ್ಪುತ್ತಿದ್ದಾರೆ. ಉಳಿದ ರೋಗಿಗಳು ಸ್ವಲ್ಪ ಸಮಯ ಚಿಕಿತ್ಸೆ ಪಡೆದು ಸುಧಾರಿಸಿ ಮನೆಗೆ ತೆರಳಿ, ವೈದ್ಯರು ತಿಳಿಸಿರುವ ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ಶೇ.41 ಜನರು ಮೂರು ತಿಂಗಳೊಳಗೆ ಮರಳಿ ಆಸ್ಪತ್ರೆ ಸೇರುತ್ತಾರೆ.

ರಕ್ತದೊತ್ತಡ ಎಂಬುದು ಸಾಮಾನ್ಯ ರೋಗ. ಆದರೆ ನಾವು ಅದರ ಬಗ್ಗೆ ತಿಳಿದಿರುವುದು ಬಹಳ ಕಡಿಮೆಯಾಗಿದೆ. ಇದರಿಂದಾಗಿ ಇನ್ನೂ ಹೆಚ್ಚು ತಿಳಿಯುವ ಅಗತ್ಯವಿದೆ ಎಂದು ಗ್ರ್ಯಾಂಗರ್ ವಿವರಿಸುತ್ತಾರೆ.

ರಕ್ತದೊತ್ತಡ ರೋಗಿಗಳಲ್ಲಿನ ಆಕುಂಚನ ರಕ್ತದೊತ್ತಡವು ಕೆಲವೊಮ್ಮೆ 95 ಕ್ಕಿಂತ ಕೆಳಗಿಯುತ್ತಿದ್ದು, ಕೆಲವು ಬಾರಿ 135 ದಾಟುತ್ತದೆ. ಇದರಿಂದಾಗಿ ಮುಂದಿನ ಅವಧಿಯಲ್ಲಿ ಇದು ಸಾವಿಗೆ ಕಾರಣವಾಗುವ ದೊಡ್ಡ ರೋಗವಾಗಲಿದೆ ಎಂದು ಡ್ಯೂಕ್‌‌‌ನ ಅರಿವಳಿಕೆ ತಜ್ಞರು ಅಭಿಪ್ರಾಯಪಡುತ್ತಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments