Webdunia - Bharat's app for daily news and videos

Install App

ಮಾನಸಿಕ ಒತ್ತಡ ನಿವಾರಣೆಗೆ ಡೈಲಿ ಪ್ಲಾನ್

Webdunia
ಮಂಗಳವಾರ, 27 ನವೆಂಬರ್ 2007 (19:28 IST)
ಮಾನಸಿಕ ಒತ್ತಡ, ಕಳವಳ, ಉದ್ವೇಗ ಮಾನವನನ್ನು ಬಿಡದೇ ಬೆಂಬೆತ್ತುವ ಸಮಸ್ಯೆಗಳು. ಮಾನಸಿಕ ಒತ್ತಡ ಮತ್ತು ಆತಂಕ ಅನೇಕ ಕಾಯಿಲೆಗಳಿಗೆ ದಾರಿ ಕಲ್ಪಿಸುತ್ತಾದ್ದರಿಂದ ಮನಸ್ಸಿನಲ್ಲಿ ಚಿಂತೆ, ಕಳವಳಕ್ಕೆ ಆಸ್ಪದ ನೀಡದೇ ಶಾಂತ ಸ್ಥಿತಿಯಲ್ಲಿ ಮನಸ್ಸನ್ನು ಇಟ್ಟುಕೊಳ್ಳುವುದನ್ನು ನಾವು ಕಲಿಯಬೇಕಾಗಿದೆ. ಇದಕ್ಕಾಗಿ ಒಂದು ತಂತ್ರವನ್ನು ಪ್ರಯೋಗಿಸಬಹುದು.

ಅದೇ ಡೈಲಿ ಪ್ಲಾನ್ ಅಥವಾ ದಿನನಿತ್ಯದ ಯೋಜನೆಯ ಪ್ರಾಯೋಗಿಕ ತಂತ್ರ. ಡೈಲಿ ಪ್ಲಾನ್ ಜೀವನದಲ್ಲಿ ಅನುಷ್ಠಾನಕ್ಕೆ ತರುವುದರಿಂದ ರಾತ್ರಿ ನಿದ್ರೆಗೆ ಜಾರುವುದಕ್ಕೆ ಮುಂಚೆ ನಮ್ಮ ಆಲೋಚನಾ ವಿಧಾನವನ್ನು ವ್ಯವಸ್ಥಿತವಾಗಿ ಇಟ್ಟು ನಿದ್ರಾಹೀನತೆಯನ್ನು ನಿವಾರಿಸಬಹುದು.

ನೀವು ಅವುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವ ಅಗತ್ಯವೂ ಇಲ್ಲ. ಇದು ಪ್ರತಿದಿನವೂ ನೀವು ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಕಾಗದದ ಮೇಲೆ ಬರೆದಿಟ್ಟು ಆ ಪ್ರಕಾರವೇ ದಿನಚರಿಯನ್ನು ನಡೆಸುವ ಮೂಲಕ ನಿಮ್ಮ ತಲೆಯಲ್ಲಿ ನುಸುಳುವ ಚಿಂತೆಯ ಹುಳುವನ್ನು ತೊಡೆದು ಅನಗತ್ಯ ಮಾನಸಿಕ ಚಟುವಟಿಕೆಗಳನ್ನು ತಗ್ಗಿಸುವುದು.

ದಿನನಿತ್ಯದ ಯೋಜನೆಯು ನಿಮ್ಮ ಚಟುವಟಿಕೆಗಳಿಗೆ ಆದ್ಯತೆ ನೀಡಿ, ಅವುಗಳ ಬಗ್ಗೆ ಸ್ಪಷ್ಟ ಯೋಚನೆ ಮಾಡಿ, ಅನಗತ್ಯ ಆಲೋಚನೆಗಳಿಗೆ ಕಡಿವಾಣ ಹಾಕುವ ಮೂಲಕ ನಿಮ್ಮ ಸಮಯ ಮತ್ತು ಆಲೋಚನೆಯ ನಿರ್ವಹಣೆಗೆ ಸಹಾಯ ಮಾಡುತ್ತದೆ. ಮಾನಸಿಕ ಒತ್ತಡ ನಿರ್ವಹಣೆ ಕಾರ್ಯಕ್ರಮವನ್ನು ದಿನನಿತ್ಯದ ಯೋಜನೆ ಮೂಲಕ ಆರಂಭಿಸುವುದು ಒಂದು ಅದ್ಭುತ ವಿಧಾನ.

ಏಕೆಂದರೆ ನೀವು ಮುಂಚಿತವಾಗಿಯೇ ಮಾಡಬೇಕಾದ ಕೆಲಸಗಳ ಬಗ್ಗೆ ಯೋಜಿಸುವುದರಿಂದ ವ್ಯವಸ್ಥಿತ ಪ್ರಜ್ಞೆ ಬೆಳೆಯುತ್ತದೆ ಮತ್ತು ಇನ್ನೂ ಹೆಚ್ಚು ಸಾಧಿಸಬೇಕೆಂಬ ಅಪೇಕ್ಷೆ ಉಂಟಾಗುತ್ತದೆ.ನಿಮ್ಮ ಯೋಜನೆಯಲ್ಲಿ ನೀವು ನಿರೀಕ್ಷಿಸಿರದ ಘಟನೆಗಳು ಜರುಗುತ್ತವೆ ಎನ್ನುವುದು ನಿಜ. ಈ ವಿಧಾನವನ್ನು ಅಳವಡಿಸಿದ ಮೊದಲ ಕೆಲವು ವಾರಗಳಲ್ಲಿ ನಾವು ನಿರೀಕ್ಷಿಸದೇ ಇರುವುದು ಸಂಭವಿಸಬಹುದು.

ಆದರೆ ಅದನ್ನು ಅಭ್ಯಾಸದ ಮೂಲಕ ಮುಂಚೆಯೇ ನಿರೀಕ್ಷಿಸುವ ಮೂಲಕ ಅನಿರೀಕ್ಷಿತ ಸಂದರ್ಭಗಳಿಗೆ ಸಾಕಷ್ಟು ಸಮಯಾವಕಾಶ ನೀಡುವ ನೈಪುಣ್ಯವನ್ನು ಕಲಿಯಬಹುದು. ಡೈಲಿ ಪ್ಲಾನ್‌ನಲ್ಲಿ ಸುಮಾರು 10 ನಿಮಿಷಗಳನ್ನು ಪ್ರತಿದಿನ ಸಂಜೆ ಮರುದಿನ ನಾವು ಗಮನನೀಡಬೇಕಾದ ವಿಷಯಗಳನ್ನು ಪಟ್ಟಿ ಮಾಡಲು ವಿನಿಯೋಗಿಸುತ್ತೇವೆ.

ನಿಮ್ಮ ಕೇವಲ 10 ನಿಮಿಷಗಳ ಬಂಡವಾಳದಿಂದ ಅತ್ಯುತ್ತಮ ಪ್ರತಿಫಲ ಸಿಗುವುದರಲ್ಲಿ ಸಂಶಯವಿಲ್ಲ. ಡೈಲಿ ಪ್ಲಾನ್‌ನಿಂದ ಮಾನಸಿಕವಾಗಿ ನಿರಾತಂಕದಿಂದ ಇರಲು, ಮನರಂಜನಾ ಸಮಯವನ್ನು ಸಂತೋಷದಿಂದ ಕಳೆಯಲು ನೆರವು ನೀಡುತ್ತದೆ. ಮುಂದಿನ ಕೆಲಸಕ್ಕೆ ಸಜ್ಜಾಗಲು ನಿಮ್ಮ ಸುಪ್ತ ಮನಸ್ಸು ಬಳಕೆಯಾಗುತ್ತದೆ. ವಿವಿಧ ವಿಷಯಗಳ ಬಗ್ಗೆ ಚಿಂತೆ ನಿಮ್ಮನ್ನು ಗೊಂದಲಕ್ಕೆ ದೂಡುವುದಿಲ್ಲ. ರಾತ್ರಿ ಎಚ್ಚರವಾಗಿದ್ದು, ಮರುದಿನ ಏನುಮಾಡಬೇಕೆಂದು ಚಿಂತಿಸುವ ಪ್ರಮೇಯವೂ ಇರುವುದಿಲ್ಲ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments