Select Your Language

Notifications

webdunia
webdunia
webdunia
webdunia

ಮಾನಸಿಕ ಒತ್ತಡದಿಂದ ಚರ್ಮ ರೋಗ, ಕೂದಲು ಉದುರುವಿಕೆ

ಮಾನಸಿಕ ಒತ್ತಡದಿಂದ ಚರ್ಮ ರೋಗ, ಕೂದಲು ಉದುರುವಿಕೆ
ವಾಷಿಂಗ್ಟನ್ , ಸೋಮವಾರ, 12 ನವೆಂಬರ್ 2007 (18:12 IST)
ಮಾನಸಿಕ ಒತ್ತಡವು ವ್ಯಕ್ತಿಯೊಬ್ಬನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ, ಕೆಲವು ಚರ್ಮದ ಕಾಯಿಲೆಗಳಾದ ಮೊಡವೆ, ಕೂದಲು ಉದುರುವಿಕೆ ಮತ್ತು ದುರ್ಬಲ ಉಗುರುಗಳಿಗೆ ದಾರಿ ಕಲ್ಪಿಸುತ್ತದೆ ಎಂದು ಪ್ರಮುಖ ಚರ್ಮರೋಗ ತಜ್ಞರೊಬ್ಬರು ಎಚ್ಚರಿಸಿದ್ದಾರೆ.

ಚರ್ಮರೋಗಶಾಸ್ತ್ರದ ಅಕಾಡೆಮಿಯಲ್ಲಿ ಮಾತನಾಡುತ್ತಿದ್ದ ಚರ್ಮರೋಗ ತಜ್ಞೆ ಫ್ಲೋರ್ ಎ.ಮೇಯೊರಾಲ್ ಚರ್ಮ, ಕೂದಲು ಮತ್ತು ಉಗುರಿನ ಮೇಲೆ ಒತ್ತಡದ ಲಕ್ಷಣಗಳನ್ನು ಕುರಿತು ಚರ್ಚಿಸಿ ಒತ್ತಡ ನಿರ್ವಹಣೆ ಮಾಡುವ ವಿಧಾನದ ಬಗ್ಗೆ ಟಿಪ್ಸ್ ನೀಡಿದರು.

ಕಜ್ಜಿ, ಮೊಡವೆ, ಸೋರಿಯಾಸಿಸ್ ಮುಂತಾದ ಚರ್ಮರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಾನಸಿಕ ಒತ್ತಡವು ಹೇಗೆ ಚರ್ಮವನ್ನು ಉದ್ದೀಪನಗೊಳಿಸುತ್ತದೆ ಮತ್ತು ಇನ್ನಷ್ಟು ಒತ್ತಡವನ್ನು ಉಂಟುಮಾಡುತ್ತದೆಂಬುದರ ಬಗ್ಗೆ ಪ್ರಥಮ ಮಾಹಿತಿ ತಮಗೆ ಸಿಕ್ಕಿತೆಂದು ಅವರು ಹೇಳಿದ್ದಾರೆ. ಚರ್ಮದ ಮೇಲೆ ಒತ್ತಡದ ಪರಿಣಾಮವನ್ನು ನಿಭಾಯಿಸುವುದನ್ನು ಕಲಿಯುವ ಮೂಲಕ ಮೂಲಕ ಉದ್ವೇಗ ಮತ್ತು ಲಕ್ಷಣಗಳನ್ನು ನಿವಾರಿಸಬಹುದು ಎಂದು ಅವರು ನುಡಿದರು.

ಚರ್ಮದ ಮೇಲೆ ಒತ್ತಡದ ಪರಿಣಾಮವನ್ನು ಕುರಿತು ಗಮನಸೆಳೆದ ಅವರು, ದೇಹದ ಒತ್ತಡದ ಹಾರ್ಮೋನ್(ಕಾರ್ಟಿಸಲ್) ದೇಹದಲ್ಲಿ ತೈಲ ಅಂಶವನ್ನು ಹೆಚ್ಚು ಉತ್ಪಾದಿಸುವ ಮೂಲಕ ತೈಲಪೂರಿತ ಚರ್ಮ, ಮೊಡವೆ ಮುಂತಾದ ಚರ್ಮದ ಸಮಸ್ಯೆಗಳಿಗೆ ಅವಕಾಶ ಕಲ್ಪಿಸುತ್ತದೆ.

2001ರ ಜನವರಿಯಲ್ಲಿ ಕೈಗೊಂಡ ಅಧ್ಯಯನವೊಂದನ್ನು ಅವರು ಉದಾಹರಿಸಿ ಮಾನಸಿಕ ಒತ್ತಡವು ಚರ್ಮದ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ನೀರಿನ ಅಂಶ ನಷ್ಟವಾಗುವುದರಿಂದ ಗಾಯ ಮಾಗುವ ಚರ್ಮದ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ ಎಂದು ಹೇಳಿದ್ದಾರೆ. ಕಾರಣವಿಲ್ಲದೇ ಕೂದಲು ಉದುರುವುದಕ್ಕೂ ಮಾನಸಿಕ ಒತ್ತಡ ಕಾರಣವೆಂದು ಡಾ. ಮೆಯೋರಾಲ್ ಹೇಳಿದ್ದಾರೆ.

ಯಾವುದಾದರೂ ಮಾನಸಿಕ ಒತ್ತಡದ ವಿದ್ಯಮಾನ ಸಂಭವಿಸಿದಾಗ ಕೂದಲು ಉದುರುವ (ಟೆಲೊಜನ್) ಹಂತವನ್ನು ಮುಟ್ಟುತ್ತದೆ. ಮಾನಸಿಕ ಒತ್ತಡವು ಭಿನ್ನ ರೀತಿಯಲ್ಲಿ ದುಷ್ಪರಿಣಾಮ ಉಂಟುಮಾಡುತ್ತದೆ. ಕೆಲವರಿಗೆ ಹೊಟ್ಟೆಯ ಹುಣ್ಣು ಅಥವಾ ಹೃದಯಾಘಾತ ಅಥವಾ ಕೂದಲು ಉದುರುವಿಕೆ ಉಂಟಾಗುತ್ತದೆ. ಒತ್ತಡಕ್ಕೆ ಕೂದಲು ಉದುರುವುದು ಸಹಜ ಪ್ರತಿಕ್ರಿಯೆಯಾಗಿದೆ ಎಂದು ಅವರು ನುಡಿದರು.

Share this Story:

Follow Webdunia kannada