Select Your Language

Notifications

webdunia
webdunia
webdunia
webdunia

ಮಸಾಜ್ ಎಂಬ ಅಂಗಮರ್ಧನ ಶಾಸ್ತ್ರ

ಆರೋಗ್ಯ

ಇಳಯರಾಜ

ಔಷಧಸೇವನೆ ರಹಿತ ಚಿಕಿತ್ಸಾ ವಿಧಾನಗಳಲ್ಲಿ ಅಂಗ ಮರ್ಧನ ಎಂಬ ಮಸಾಜ್‌ ಚಿಕಿತ್ಸೆ ಪ್ರಧಾನವಾಗಿದೆ. ಭಾರತೀಯ ವೈದ್ಯಶಾಸ್ತ್ರ ಆಯುರ್ವೇದದಲ್ಲೂ ಇದಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ.

ಪ್ರಾಚೀನ ಭಾರತೀಯ ಚಿಕಿತ್ಸಾ ವಿಧಾನಗಳಲ್ಲಿ ಅಂಗಮರ್ಧನ ಶಾಸ್ತ್ರಕ್ಕೆ ಪ್ರತ್ಯೇಕ ಸ್ಥಾನಮಾನವಿತ್ತು. ಆದರೆ ಆ ಬಳಿಕ ಇದನ್ನು ವೈದ್ಯಪದ್ಧತಿಯ ಭಾಗವಾಗಿ ಪರಿಗಣಿಸಲಾಯಿತು. ದೇಹದಲ್ಲಿನ ಅಂತರವಯವಗಳ ದೋಷ, ಎಲುಬುಗಳ ಊನ, ನೋವು ನಿವಾರಣೆ ಇತ್ಯಾದಿಗಳ ನಿವಾರಣೆಗಾಗಿ ದೇಹದ ನಿರ್ದಿಷ್ಟ ಬಾಹ್ಯ ಅವಯವಗಳನ್ನು ತಿಕ್ಕಿ-ತೀಡುವುದು, ಮಸಾಜ್‌ ಮಾಡುವುದು ರೂಡಿಯಲ್ಲಿರುವ ವಿಧಾನ.

ಎಲುಬು ಅಥವಾ ಕೀಲುಮುರಿತ, ದೇಹದ ಅಂತರವಯವಗಳಾದ ಜೀರ್ಣಾಂಗ, ಹೃದಯ-ನರವ್ಯವಸ್ಥೆಯಲ್ಲಿನ ದೋಷ, ದೇಹದ ಬಾಹ್ಯ ಸೌಂದರ್ಯ ವೃದ್ದಿಗಾಗಿ ಅಂಗಮರ್ಧನ ಎನ್ನುವ ಮಸಾಜ್‌ ಚಿಕಿತ್ಸೆ ರೂಢಿಯಲ್ಲಿದೆ. ಮಸಾಜ್‌ ವೇಳೆ ತೈಲ (ಎಣ್ಣೆ),ಗಿಡಮೂಲಿಕೆಗಳ ದ್ರಾವಣ ಬಳಸಿ ಮಸಾಜ್‌ ಮಾಡುವುದು ರೂಢಿಯಾಗಿದೆ.

ಅಂಗಮರ್ಧನ ತಜ್ಞರಿಗೆ ರಾಜಮಹಾರಾಜರ ಆಸ್ಥಾನಗಳಲ್ಲಿ ವಿಶೇಷ ಮರ್ಯಾದೆ ಇತ್ತು. ನವಿಲುಗರಿ ತೈಲದಂತಹ ದ್ರಾವಣಗಳನ್ನು ಬಳಸಿ ಎಲುಬು ಊನಗಳನ್ನು ಮಸಾಜ್‌ನಿಂದಲೇ ಗುಣಪಡಿಸುವ ಆಯುರ್ವೇದ ವೈದ್ಯರು, ಗಿಡಮೂಲಿಕೆ ಬಳಸಿ ಮಸಾಜ್‌ ಮಾಡುವ ನಾಟಿ ಚಿಕಿತ್ಸಾ ತಜ್ಞರು ಹಿಂದೆ ಇದ್ದರು.

ಇಂದಿನ ದಿನಮಾನದಲ್ಲಿ ಮಸಾಜ್‌ಗಂತೂ ವಿಶೇಷ ಬೇಡಿಕೆ ಇದೆ. ಮಸಾಜ್‌ ಕೇಂದ್ರಗಳ ಸಂಖ್ಯೆಯೂ ಹೆಚ್ಚಿದೆ. ಆದರೆ ತಜ್ಞರ ಕುರಿತು ಗ್ರಾಹಕರೇ ನಿರ್ಧರಿಸಬೇಕಷ್ಟೇ.

Share this Story:

Follow Webdunia kannada