Webdunia - Bharat's app for daily news and videos

Install App

ಮಗುವಿನ ಕೆಮ್ಮು ಶಮನಕ್ಕೆ ಜೇನುತುಪ್ಪ

Webdunia
ಮಂಗಳವಾರ, 4 ಡಿಸೆಂಬರ್ 2007 (19:57 IST)
WD
ಹಾಸಿಗೆಯಲ್ಲಿ ಮಗು ಮಲಗುವುದಕ್ಕೆ ಮುಂಚೆ ಒಂದು ಚಮಚ ಜೇನುತುಪ್ಪ ಕುಡಿಸಿದರೆ ಮಕ್ಕಳು ಸುಖವಾಗಿ ನಿದ್ರೆ ಮಾಡುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಜೇನುತುಪ್ಪ ಮಕ್ಕಳಿಗೆ ಕುಡಿಸಬೇಕೆಂದು ಅಜ್ಜಿ ಹೇಳುತ್ತಿದ್ದ ಮಾತು ನಿಜವಾಗಿದೆ ಎಂದು ಈಗ ಅನೇಕ ಕುಟುಂಬಗಳು ಉದ್ಗರಿಸಿವೆ.

" ಮಕ್ಕಳ ಮತ್ತು ಹದಿವಯಸ್ಕರ ಔಷಧಿ" ಎಂಬ ಮ್ಯಾಗಜಿನ್‌ನ ಡಿಸೆಂಬರ್ ಸಂಚಿಕೆಯಲ್ಲಿ ಈ ವಿಷಯ ಪ್ರಕಟವಾಗಿದೆ. 6 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಅತಿಯಾದ ಕೆಮ್ಮು ಮತ್ತು ಶೀತದ ವಿರುದ್ಧ ಔಷಧಿಗಳನ್ನು ಕೊಡಬಾರದು ಎಂದು ಅಮೆರಿಕದ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಕೆಲವು ಔಷಧಿ ಉತ್ಪಾದಕರು ಅಮೆರಿಕದ ಮಾರುಕಟ್ಟೆಯಿಂದ ತಮ್ಮ ಉತ್ಪನ್ನಗಳನ್ನು ಹಿಂಪಡೆದಿದ್ದಾರೆ.

ಪರ್ಯಾಯ ಔಷಧಿಯಾಗಿ ಜೇನುತುಪ್ಪವನ್ನು ಪ್ರಯತ್ನಿಸಲು ಮಕ್ಕಳ ತಜ್ಞರು ಪೋಷಕರಿಗೆ ಸಲಹೆ ಮಾಡಿದ್ದಾರೆ.ಸಂಶೋಧಕರು ಪೆನ್ಸಿಲ್ವೇನಿಯಾ ಕ್ಲಿನಿಕ್‌ನಿಂದ ಉಸಿರಾಟದ ಸೋಂಕಿಗೆ ಒಳಗಾದ 105 ಮಕ್ಕಳನ್ನು ಆಯ್ದುಕೊಂಡರು. ಪೋಷಕರಿಗೆ ಔಷಧ ಸಾಮಗ್ರಿಯಿರುವ ಪೇಪರ್ ಚೀಲ ನೀಡಲಾಯಿತು. ಅವುಗಳಲ್ಲಿ ಕೆಲವು ಖಾಲಿಯಾಗಿತ್ತು. ಕೆಲವು ವಯೋಮಾನಕ್ಕೆ ಸೂಕ್ತವಾದ ಚೇನುತುಪ್ಪದ ಸುವಾಸನೆಯ ಡೆಕ್ಸ್ಟ್ರೋಮೆಥೋರ್ಫಾನ್ ಹೊಂದಿರುವ ಕೆಮ್ಮಿನ ಔಷಧಿ ಹೊಂದಿತ್ತು.

ಇನ್ನೂ ಕೆಲವು ಜೇನುತುಪ್ಪದ ಡೋಸ್ ಹೊಂದಿದ್ದವು. ಮಕ್ಕಳ ನಿದ್ರೆ ಮತ್ತು ಕೆಮ್ಮಿನ ಲಕ್ಷಣಗಳನ್ನು ಹಾಸಿಗೆಯಲ್ಲಿ ಮಲಗುವುದಕ್ಕೆ ಮುನ್ನ ಮತ್ತು ಬಳಿಕ ಗಮನಿಸಲು ಪೋಷಕರಿಗೆ ತಿಳಿಸಲಾಯಿತು. ಜೇನುತುಪ್ಪ ಕುಡಿದ ಮಗುವಿನಲ್ಲಿ ಕೆಮ್ಮಿನ ಲಕ್ಷಣಗಳು ಬೇರೆ ಮಕ್ಕಳಿಗಿಂತ ಇಳಿಮುಖವಾಗಿದ್ದು ಕಂಡುಬಂತು.

ಇದರಿಂದ ಒಂದು ಚಮಚ ಜೇನುತುಪ್ಪದಿಂದ ಮಕ್ಕಳ ಕೆಮ್ಮು ಉಪಶಮನವಾಗುತ್ತದೆಂಬುದು ಸಂಶೋಧನೆಯಿಂದ ಪತ್ತೆಯಾಯಿತು. ಆದರೆ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜೇನುತುಪ್ಪ ಕೊಡುವುದರಿಂದ ಅಜೀರ್ಣ ಉಂಟಾಗುವ ಸಂಭವವಿದ್ದು ಅದನ್ನು ಕೊಡಬಾರದೆಂದು ವೈದ್ಯರು ಎಚ್ಚರಿಸಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments