Webdunia - Bharat's app for daily news and videos

Install App

ಮಕ್ಕಳ ಭಯ ತೊಲಗಿಸಲು 'ಪಿಶಾಚಿ ಆಟ'

Webdunia
ಮಂಗಳವಾರ, 5 ಆಗಸ್ಟ್ 2008 (21:10 IST)
PTI
ಹೆಚ್ಚಿನ ಮಕ್ಕಳು ರೋಲ್ ಸ್ಕೂಟರ್‌ಗಳಲ್ಲಿ ಆಟವಾಡುವುದನ್ನು ಮೆಚ್ಚುತ್ತಾರೆ ಅಥವಾ ಗೋಸ್ಟ್ ರೈಲುಗಳಲ್ಲಿ ಪಿಶಾಚಿಯ ಆಟಗಳನ್ನು ಆನಂದಿಸುತ್ತಾರೆ. ಇಂತಹ ಭಯ ಹುಟ್ಟಿಸುವ ಆಟಗಳನ್ನು ಮೆಚ್ಚದಿರುವವರು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕ್ವೀನ್‌ಲ್ಯಾಂಡ್ ತಾಂತ್ರಿಕ ವಿಶ್ವವಿದ್ಯಾಲಯ(ಕ್ಯೂಯುಟಿ), ಮಕ್ಕಳನ್ನು ಅವರು ಭಯ ಹುಟ್ಟಿಸುವಂತ ಚಟುವಟಿಕೆಗಳನ್ನು ಆನಂದಿಸುತ್ತಾರೆಯೇ ಎಂದು ಮತ್ತು ಪೋಷಕರನ್ನು ಅವರು ತಮ್ಮ ಮಕ್ಕಳು ಹೆಚ್ಚು ಹೆದರಿಕೊಳ್ಳುತ್ತಾರೆಯೇ ಎಂದು ಕೇಳಿದಾಗ ಈ ಮೇಲಿನ ಸಂಶೋಧನೆಗಳು ಹೊರಬಿದ್ದಿವೆ.

ಸುಮಾರು 18 ಪ್ರತಿಶತದಷ್ಟು ಮಕ್ಕಳು ಈ ಮೇಲೆ ಹೆಸರಿಸಲಾದಂತಹ ಚಟುವಟಿಕೆಗಳನ್ನು ಆನಂದಿಸುವುದಿಲ್ಲ ಎಂದು ಮತ್ತು ಅದಕ್ಕೆ ಸಮಾನಾನಂತರ ಸಂಖ್ಯೆಯಲ್ಲಿ ಪೋಷಕರು ತಮ್ಮ ಮಕ್ಕಳು ಬಹಳವಾಗಿ ಹೆದರಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

" ಇಂತಹ ಸಣ್ಣ ವಿಚಾರಗಳು ಸಹ ಅವರಿಗೆ ಆ‌ನ್‌ಕ್ಸ್ಯೆಟಿ(ಆತಂಕ) ಇದೆ ಎಂದು ಸೂಚಿಸುತ್ತವೆ" ಎಂದು ಸಹೊದ್ಯೋಗಿ ಲಿಂಡಾ ಗಿಲ್‌ಮೇರ್ ಅವರ ಜೊತೆ ಅಧ್ಯಯನ ನಡೆಸಿದ ಕ್ಯೂಯುಟಿಯ ಗೌರವ ಉಪನ್ಯಾಸಕರಾದ ಮಾರ್ಲಿನ್ ಕಾಂಪ್‌ಬೆಲ್ ಹೇಳಿದ್ದಾರೆ.

" ಸಾಮಾನ್ಯ ಭಯ ಹಾಗು ಆ‌ನ್‌ಕ್ಸ್ಯೆಟಿ(ಆತಂಕ) ಮತ್ತು ಹೆಚ್ಚಿನ ಮಕ್ಕಳು ಇಷ್ಟಪಡುವಂತಹ ಚಟುವಟಿಕೆಗಳ ಬಗ್ಗೆ ಭಯ ಪಡುವುದು ಇವುಗಳ ನಡುವೆ ಖಂಡಿತವಾಗಿಯೂ ಸಂಬಂಧವಿದೆ. ಈ ಅಧ್ಯಯನದ ಮುಖ್ಯ ಉದ್ದೇಶ ಪೋಷಕರು ತಮ್ಮ ಮಕ್ಕಳ ಮೇಲೆ ಗಮನ ಹರಿಸಿ ಅವರು ಆ‌ನ್‌ಕ್ಸ್ಯೆಟಿ(ಆತಂಕ) ಸಮಸ್ಯೆಯನ್ನು ಹೊಂದಿಲ್ಲವೆಂದು ಖಚಿತಪಡಿಸಿಕೊಳ್ಳಬೇಕು ಎಂಬುದು.

ಆ‌ನ್‌ಕ್ಸ್ಯೆಟಿ(ಆತಂಕ) ಬಂದರೆ ಜೀವನ ಪೂರ್ತಿ ಬಳಲಬೇಕಾಗುತ್ತದೆ ಮತ್ತು ಇದು ಸಾಧನೆಗೆ ಅಡಚಣೆಯೊಡ್ಡುತ್ತದೆ, ಅದ್ದರಿಂದ ಇದನ್ನು ಅದಷ್ಟು ಬೇಗ ಗುರುತಿಸುವುದು ಮತ್ತು ಮಕ್ಕಳಿಗೆ ಅದರಿಂದ ಹೇಗೆ ಹೊರಬರಬೇಕೆಂದು ತಿಳಿಸಿಕೊಡವುದು ಉತ್ತಮ" ಎಂದು ಚಾಂಪಬೆಲ್ ಹೇಳಿದ್ದಾರೆ.

ತಮ್ಮ ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಆತಂಕ ಇರಬಹುದು ಎನ್ನುವ ಪೋಷಕರು ಕ್ರಮಬದ್ಧವಾದ ಮತ್ತು ನಿರಂತರವಾಗಿ ಅವರ ಭಯವನ್ನು ಕಡಿಮೆಗೊಳಿಸುವ (ಡಿಸೆನ್ಸಿಟೈಶೇಸನ್) ವಿಧಾನವನ್ನು ಅನುಸರಿಸುವುದು ಉತ್ತಮ ಎಂದು ಚಾಂಪ್‌ಬೆಲ್ ಹೇಳಿದ್ದಾರೆ.

ಮಕ್ಕಳನ್ನು ಭಯದಿಂದ ಹೊರತರಲು, ಗೋಸ್ಟ್ ರೈಲು ಮತ್ತು ಭಯ ಹುಟ್ಟಿಸುವ ರೈಡ್‌ಗಳಲ್ಲಿ ಭಾಗವಹಿಸುವಂತೆ ಹುರಿದುಂಬಿಸುವುದರಿಂದ ಇಂತಹ ಭಯವನ್ನು ಕ್ರಮೇಣ ಕಡಿಮೆಗೊಳಿಸಬಹುದು ಎಂದು ಅವರು ಹೇಳಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments