Webdunia - Bharat's app for daily news and videos

Install App

ಡಿ.1 ವಿಶ್ವ ಏಡ್ಸ್ ದಿನ; ರಾಜ್ಯದಲ್ಲಿ 25 ಲಕ್ಷ ಎಚ್ಐವಿ ಪೀಡಿತರು

Webdunia
ಗುರುವಾರ, 1 ಡಿಸೆಂಬರ್ 2011 (15:54 IST)
PR
ಇಂದು (ಡಿ.1) ವಿಶ್ವ ಏಡ್ಸ್ ದಿನಾಚರಣೆ. ವಿಶ್ವದ ಅತಿ ದೊಡ್ಡ ಸಮಸ್ಯೆ ಎಚ್ಐವಿ-ಏಡ್ಸ್‌ಗೆ ಹೆಚ್ಚಿನ ಯುವಜನರು ತುತ್ತಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ದೇಶದಲ್ಲಿ ಲೈಂಗಿಕ ಶಿಕ್ಷಣ ನೀಡಿಕೆ ಬಗ್ಗೆ ಜಾಗೃತಿ ಮೂಡುತ್ತಿದ್ದರೂ ಇನ್ನೂ ಏಳಿಗೆ ಕಂಡಿಲ್ಲ.

ಭಾರತ ಏಶ್ಯದ ಅತಿ ಹೆಚ್ಚಿನ ಏಡ್ಸ್ (ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೊಮ್) ರೋಗಿಗಳು ಇರುವ ದೇಶಗಳ ಪೈಕಿ ಒಂದಾಗಿದ್ದು, 1996ರಲ್ಲಿ ಅತ್ಯಂತ ಗರಿಷ್ಠ ಸಂಖ್ಯೆಯ ಎಚ್ಐವಿ ಸೋಂಕು ತಗಲಿತ್ತು. ಈಗ ಆ ಸಂಖ್ಯೆಗಿಂತ ಶೇ.56ದಷ್ಟು ಕಡಿಮೆಯಾಗಿದೆ. ವಿಶ್ವಸಂಸ್ಥೆಯ ವಿಶ್ವ ಏಡ್ಸ್ ದಿನ ವರದಿ 2011ರ ವರದಿ ಪ್ರಕಾರ, ಏಶ್ಯದ ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್‌ನ ಸಂಕ್ಷಿಪ್ತ ರೂಪ) ಬಾಧಿತರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಅದರಲ್ಲಿ ಭಾರತ ಮುಂಚೂಣಿಯಲ್ಲಿದೆ.

ಎಚ್ಐವಿ-ಏಡ್ಸ್ ವಿಷಯದಲ್ಲಿ ವಿಶ್ವದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ. ನಂತರದ ಸ್ಥಾನ ಭಾರತದ್ದು. ಚೆನ್ನೈನ ಲೈಂಗಿಕ ಕಾರ್ಯಕರ್ತೆಯೊಬ್ಬಳು ವಿದೇಶಿಯೊಬ್ಬನ ಜತೆ ನಡೆಸಿದ ಲೈಂಗಿಕ ಸಂಪರ್ಕದ ನಂತರ ಭಾರತದಲ್ಲಿ ಮೊದಲ ಬಾರಿಗೆ ಎಚ್ಐವಿ ಸೋಂಕು ಪತ್ತೆಯಾಗಿತ್ತು.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕವೂ ಸೇರಿದಂತೆ ದೇಶದ ಎಂಟು ರಾಜ್ಯಗಳಲ್ಲಿ ಎಚ್ಐವಿ-ಏಡ್ಸ್ ವ್ಯಾಪಕವಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರಗಳಲ್ಲದೆ ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಜೋರಾಂ ಮತ್ತು ನಾಗಲ್ಯಾಂಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳಿದ್ದಾರೆ.

ಅಧಿಕೃತ ಮೂಲದ ಪ್ರಕಾರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಸುಮಾರು 17 ಸಾವಿರ ಮಂದಿ ಎಚ್ಐವಿ-ಏಡ್ಸ್ ಪೀಡಿತರಿದ್ದಾರೆ. ಬಾಗಲಕೋಟೆ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿರುವ ಜಿಲ್ಲೆ. ಕರ್ನಾಟಕದಲ್ಲಿ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಈ ರೋಗದ ಲಕ್ಷಣಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿರುವುದು ಇದಕ್ಕೆ ಒಂದು ಕಾರಣವಷ್ಟೇ.

2003 ರಲ್ಲಿ ಎಚ್ಐವಿ ಸೋಂಕಿತರ ಪ್ರಮಾಣ ಶೇ.1.6ರಷ್ಟಿತ್ತು. ಇದು 2008ರ ವೇಳೆಗೆ ಶೇ.0.8ಕ್ಕೆ ಇಳಿದಿದೆ. ರಾಜ್ಯದಲ್ಲಿ ಪ್ರಸ್ತುತ 25 ಲಕ್ಷ ಎಚ್ಐವಿ ಸೋಂಕು ಪೀಡಿತರಿದ್ದಾರೆ. ಬಾಗಲಕೋಟೆ, ವಿಜಾಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಿದೆ ಎಂದು ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಅಂಕಿ ಅಂಶ ತಿಳಿಸಿದೆ.

ನೂತನ ಎಚ್ಐವಿ ಸೋಂಕು ಮತ್ತು ಏಡ್ಸ್ ಸಂಬಂಧಿ ಸಾವುಗಳಲ್ಲೂ ಶೇ.21ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ. ಏಡ್ಸ್ ಕಾರಣದಿಂದಾಗಿ ಸಾಯುವ ಜನರ ಸಂಖ್ಯೆ 2010ರಲ್ಲಿ 18 ಲಕ್ಷಕ್ಕಿಳಿದಿದೆ. ಅದು 2000ದ ದಶಕದ ಮಧ್ಯಭಾಗದಲ್ಲಿ 22 ಲಕ್ಷದಷ್ಟಿದೆ. ಅದು 2000 ದಶಕದ ಮಧ್ಯಭಾಗದಲ್ಲಿ 22 ಲಕ್ಷದಷ್ಟಿತ್ತು.

ವಿಶ್ವದಾದ್ಯಂತ ಪ್ರತಿದಿನ 7000 ಹೊಸ ಹೆಚ್.ಐ.ವಿ. ಸೋಂಕಿತರು ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ 36 ಲಕ್ಷ ಮಕ್ಕಳಿಂದ ಸೇರಿ 220 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಭಾರತದಲ್ಲಿ 25ಲಕ್ಷ ಸೋಂಕಿತರಿದ್ದಾರೆಂಬ ಅಂದಾಜಿದೆ. ಈ ಪರಿಸ್ಥಿತಿಗೆ ಮುಖ್ಯ ಕಾರಣ. ಈ ಕಾಯಿಲೆಗೆ ಅಂಟಿದ ಕಳಂಕ ಇದರಿಂದಾಗಿ ರೋಗಿ ತನಗಾಗಿರುವ ಕಾಯಿಲೆ ಬಗ್ಗೆ ಇತರರೊಂದಿಗೆ ಚರ್ಚಿಸಲು, ಚಿಕಿತ್ಸೆ ಪಡೆಯಲು ವಿಳಂಬ ಮಾಡುತ್ತಿರುವುದು. ಮಹಾಮಾರಿ ಎಂದು ಹೆಸರಾದ ಹೆಚ್.ಐ.ವಿ/ ಏಡ್ಸ್ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಡಿಸೆಂಬರ್ 1ಅನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ.

ಹೆಚ್.ಐ.ವಿ. ಮತ್ತು ಏಡ್ಸ್‌ಗೆ ಇರುವ ವ್ಯತ್ಯಾಸ:
ಹೆಚ್.ಐ.ವಿ. ರೋಗಾಣುವಿನ ಹೆಸರು. ಹೆಚ್.ಐ.ವಿ. ತಗುಲಿದೆ ಎಂದರೆ, ರಕ್ತದಲ್ಲಿ ಈ ರೋಗಾಣುಗಳಿದ್ದು, ದೇಹದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಸದೃಢತೆ ಮತ್ತು ಚಟುವಟಿಕೆಯಿಂದಿರುತ್ತಾರೆ.

ರಕ್ತದಲ್ಲಿ ರೋಗಾಣುಗಳಿದ್ದು, ಇದರ ಜೊತೆ ದೇಹದಲ್ಲಿ ತೂಕದ ಇಳಿತ, ಸತತ ಕೆಮ್ಮು, ಜ್ವರ, ನಿಲ್ಲದ ಅತಿಸಾರ ಇತ್ಯಾದಿ ಬದಲಾವಣೆಗಳಿದ್ದರೆ ಏಡ್ಸ್ ಎನ್ನುತ್ತಾರೆ. ಹೆಚ್.ಐ.ವಿ.ಯ ಅಂತಿಮ ಹಂತವೆ ಏಡ್ಸ್.

ಹೆಚ್.ಐ.ವಿ. ಹೇಗೆ ಹರಡುತ್ತದೆ?
ಅಸುರಕ್ಷಿತ ಲೈಂಗಿಕ ಸಂಬಂಧಗಳ ಮೂಲಕ
ಹೆಚ್.ಐ.ವಿ. ಹೊಂದಿರುವ ರಕ್ತವನ್ನು ಅಥವಾ ರಕ್ತದ ಉತ್ಪನ್ನಗಳನ್ನು ಪಡೆಯುವುದರಿಂದ
ಕುದಿಸಿ, ಶುದ್ಧೀಕರಣಗೊಳಿಸಲ್ಲದ ಸೂಜಿಗಳು:ಸೀರಂಜ್‌ಗಳನ್ನು ಉಪಯೋಗಿಸುವುದರಿಂದ ಹೆಚ್.ಐ.ವಿ ಸೋಂಕು ಹೊಂದಿರುವ ತಾಯಿಯಿಂದ ಮಗುವಿಗೆ ಹರಡುತ್ತದೆ.

ಹೆಚ್.ಐ.ವಿ. ಸೋಂಕಿತರನ್ನು ಮುಟ್ಟುವುದರಿಂದ, ಜೊತೆಯಾಗಿ ಭೋಜನ ಸೇವಿಸುವುದರಿಂದ, ಶೌಚಾಲಯ ಬಳಸುವುದರಿಂದ, ಹರಡುವುದಿಲ್ಲ. ಏಡ್ಸ್ ಎಂದ ತಕ್ಷಣ ಭಯಭೀತರಾಗದೆ, ಸೋಂಕು ತಗಲದಂತೆ ಎಚ್ಚರಿಕೆ ವಹಿಸುವುದರೊಂದಿಗೆ , ಸೋಂಕಿತರನ್ನು ಕೀಳಾಗಿ ಕಾಣದೆ , ಮಾನಸಿಕ ಸ್ಥೈರ್ಯ ತುಂಬಿ, ಬದುಕಿನಲ್ಲಿ ಉತ್ಸಾಹ ಮೂಡಿಸಿ, ಸಮಾಜದಲ್ಲಿ ಎಲ್ಲರಂತೆ ಬದುಕಿ-ಬಾಳಲು ಅವಕಾಶ ನೀಡುವುದು ತುಂಬಾ ಮುಖ್ಯವಾದದ್ದು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ