Webdunia - Bharat's app for daily news and videos

Install App

ಡಯಾಬಿಟಿಸ್: ಪತಿ, ಪತ್ನಿ ಮತ್ತು ವ್ಯಥೆ

Webdunia
ಮಾಡರ್ನ್ ಜಗತ್ತಿನ ಮದುವೆಗಳು ಮುರಿಯಲು ಇರುವ ಕಾರಣಗಳು ಸಾಲದೆಂಬಂತೆ, ಇನ್‌ಸುಲಿನ್ ಅಧಾರಿತ ಟೈಪ್-1 ಡಯಾಬಿಟಿಸ್‌ನ ಕಾರಣದಿಂದಾಗಿ ದೆಹಲಿಯಲ್ಲಿ ಬಹಳಷ್ಟು ದಂಪತಿಗಳು ಬೇರೆಯಾಗುತ್ತಿದ್ದಾರೆಂದು ದೆಹಲಿ ಡಯಾಬಿಟಿಸ್ ಸಂಶೋಧನಾ ಕೇಂದ್ರ (ಡಿಡಿಆರ್‌ಸಿ) ಇತ್ತೀಚಿಗೆ ನಡೆಸಿದ ಸಮೀಕ್ಷೆಯು ತಿಳಿಸುತ್ತದೆ.

" ಪರಿವಾರದ ಯಾವುದೇ ಸದಸ್ಯರಿಗೆ ಡಯಾಬಿಟಿಸ್ ಇರುವುದಾಗಿ ಪತ್ತೆಯಾದರೆ ಕುಟುಂಬವೆಲ್ಲ ಈ ಬಗ್ಗೆ ಚಿಂತಿತವಾಗುತ್ತದೆ. ಇದಕ್ಕೆ ಮೊದಲ ಪ್ರತಿಕ್ರಿಯೆ ಆಕಾಶವೇ ಕಳಚಿಬಿದ್ದಂತ ಭಾವನೆ - ಭೀತಿ, ಇದು ಎಲ್ಲಾ ಸಮಸ್ಯೆಗೆ ಕಾರಣವಾಗುತ್ತದೆ" ಎಂದು ಡಿಡಿಆರ್‌ಸಿ ಮುಖ್ಯಸ್ಥ ಡಾ.ಅಶೋಕ್ ಜಿಂಗನ್ ಹೇಳುತ್ತಾರೆ.

ಜನರಿಗೆ ಈ ಬಗ್ಗೆ ತಿಳಿದಿದೆ, ಆದ್ದರಿಂದಲೇ ಮದುವೆಗೆ ಮುಂಚೆ ಡಯಾಬಿಟಿಸ್ ಪತ್ತೆಯಾದರೆ ಹೆಚ್ಚಿನ ಸಂದರ್ಭದಲ್ಲಿ ಅದನ್ನು ತಮ್ಮ ಜೀವನ ಸಂಗಾತಿಯಾಗುವವರಿಂದ ಮತ್ತು ಅವರ ಮನೆಯವರಿಂದ ಮುಚ್ಚಿಡಲಾಗುತ್ತದೆ. ಮದುವೆಯ ನಂತರ ಈ ಬಗ್ಗೆ ಸಂಗಾತಿಗೆ ತಿಳಿದು ಬಂದಾಗ ಅವರು ಡಯಾಬಿಟಿಸ್ ರೋಗಿಯನ್ನು ಒಬ್ಬಂಟಿಯಾಗಿಸಿ ಬಿಟ್ಟು ಹೋಗುತ್ತಾರೆ ಎಂದು ಬಹಳ ಸಮಯದಿಂದ ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ವೈದ್ಯರ ತಂಡ ಕಂಡುಕೊಂಡಿದೆ.

ಡಯಾಬಿಟಿಸ್‌ನ ನಿರ್ವಹಣೆ ಕೇವಲ ಔಷಧಗಳಿಗೆ ಸಂಬಂಧಿಸಿದ್ದಲ್ಲ, ಇದರಲ್ಲಿ ಪರಿವಾರ ಸದಸ್ಯರು ಮತ್ತು ಸ್ನೇಹಿತರ ಬೆಂಬಲ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಹ ಅವರು ಅಭಿಪ್ರಾಯಪಡುತ್ತಾರೆ.

ಡಿಡಿಆರ್‌ಸಿ, ಸ್ವಯಂ ಸೇವಕರ ಮೂಲಕ ಡಯಾಬಿಟಿಸ್ ಪೀಡಿತರು, ಅವರ ಪರಿವಾರದ ಸದಸ್ಯರು ಮತ್ತು ಸ್ನೇಹಿತ ವರ್ಗದಲ್ಲಿ ಇಂತಹ ಜನರು ಎದುರಿಸುವ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವ ಹೊಸ ವಿಶಿಷ್ಟ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಕುತೂಹಲಕಾರಿಯಾಗಿ ಈ ಸ್ವಯಂ ಸೇವಕರು ಸ್ವತಃ ಡಯಾಬಿಟಿಸ್ ಹೊಂದಿದ್ದು, ತಮ್ಮ ಕಾಯಿಲೆಯ ಜೊತೆ ಧನಾತ್ಮಕವಾದ ಹೋರಾಟ ನಡೆಸುವಲ್ಲಿ ಯಶಸ್ವಿಯಾದವರಾಗಿದ್ದಾರೆ.

" ಸಂಪನ್ಮೂಲಗಳ ಕೊರತೆ ಇರುವ ನಮ್ಮಂತಹ ರಾಷ್ಟ್ರಗಳಲ್ಲಿ ಅಗತ್ಯವಿರುವವರಿಗೆ ಸಲಹೆ ಸೂಚನೆಗಳನ್ನು ಒದಗಿಸಲು ಸ್ವಯಂ ಸೇವಕರಿಗೆ ಕರೆ ನೀಡುವುದು ಮಹತ್ವದ ನಡೆ" ಎಂದು ಡಾ. ಜಿಂಗನ್ ಹೇಳಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments