Webdunia - Bharat's app for daily news and videos

Install App

ಜೀವರಕ್ಷಕ ಆಂಟಿಯೊಕ್ಸಿಡೆಂಟ್‌‌ಗಳು

Webdunia
ಡ ಾ| ರಶ್ಮಿ ಸುಧಾ, ನವದೆಹಲಿ
ND
ಫ್ರಿರ‌್ಯಾಡಿಕಲ್‌ಗಳಿಂದ ಉಂಟಾಗಬಲ್ಲ ಹಾನಿಕಾರಕ ಪರಿಣಾಮಗಳಿಂದ ಜಿವಕೋಶಗಳನ್ನು ತಡೆಯಬಲ್ಲಂತಹ ಒಂದು ಪದಾರ್ಥ ಆಂಟಿಯೊಕ್ಸಿಡೆಂಟ್‌ಗಳು. ಫ್ರೀ ರ‌್ಯಾಡಿಕಲ್‌ಗಳು ಅತ್ಯಂತ ಅಸ್ಥಿರವಾಗಿರುವ ಸಂಕೀರ್ಣ ವಸ್ತುಗಳಾಗಿದ್ದು, ನಮ್ಮ ನೈಸರ್ಗಿಕ ಪಚನಕ್ರಿಯೆಯ ಸಂದರ್ಭ ಮತ್ತು ಮಾಲಿನ್ಯ, ಕೀಟನಾಶಕಗಳು ಹಾಗೂ ರೇಡಿಯೇಶನ್ ಮುಂತಾದ ಪರಿಸರ ಸಂಬಂಧಿ ಚಟುವಟಿಕೆಗಳಿಂದ ಉತ್ಪತ್ತಿಯಾಗುತ್ತವೆ.

ಸಿಗರೇಟು ಸೇವನೆ ಕೂಡ ಹಾನಿಕಾರಕ ಫ್ರೀ ರ‌್ಯಾಡಿಕಲ್‌ಗಳನ್ನು ನಿಮ್ಮ ದೇಹದಲ್ಲಿ ಉತ್ಪಾದಿಸುತ್ತದೆ. ಫ್ರೀ ರಾಡಿಕಲ್‌ಗಳು ನಿಮ್ಮ ದೇಹಗಳ ಜೀವಕೋಶಗಳಿಗೆ ಸುಲಭವಾಗಿ ಪ್ರತ್ರಿಕ್ರಿಯಿಸಬಹುದಾಗಿದೆ. ಅಲ್ಲದೆ ಸರಣಿ ಪ್ರತಿಕ್ರಿಯೆಗಳು ನಿಮ್ಮ ದೇಹದ ಜೀವಕೋಶಗಳನ್ನು ಹಾನಿ ಮಾಡುತ್ತವಲ್ಲದೆ, ಕ್ಯಾನ್ಸರ್, ಹೃದ್ರೋಗಗಳು ಮತ್ತು ಮಧುಮೇಹಗಳಂತಹ ಕಾಯಿಲೆಗೆ ಕಾರಣವಾಗಬಹುದು. ಆಂಟಿಯೊಕ್ಸಿಡೆಂಟ್‌ಗಳು ಫ್ರಿ ರ‌್ಯಾಡಿಕಲ್‌ಗಳನ್ನು ತಟಸ್ಥಗೊಳಿಸುವ ಮೂಲಕ ಜೀವಕೋಶಗಳ ಹಾನಿಯನ್ನು ತಡೆಗಟ್ಟುತ್ತವೆ.

ಆಂಟಿಯೋಕ್ಸಿಡೆಂಟ್‌ಗಳು ಎಲ್ಲಿ ಸಿಗುತ್ತವೆ?
ಆಂಟಿಯೋಕ್ಸಿಡೆಂಟ್‌ಗಳು ಹಣ್ಣು, ತರಕಾರಿ, ಧಾನ್ಯಗಳು ಮತ್ತು ಕಡಲೆ ಗೋಡಂಬಿ ಮುಂತಾದ ಬೀಜಪದಾರ್ಥಗಳಲ್ಲಿ ಹೇರಳವಾಗಿರುತ್ತವೆ. ಸೊಪ್ಪು ತರಕಾರಿಗಳಲ್ಲೂ ಆಂಯಿಯೊಕ್ಸಿಡೆಂಟ್‌ಗಳು ಧಾರಳವಾಗಿದೆ. ಕೆಲವು ಸಾಮಾನ್ಯ ಆಂಟಿಯೋಕ್ಸಿಡೆಂಟ್‌ಗಳೆಂದರೆ ಬೀಟಾ-ಕೆರೋಟಿನ್, ಲಿಕೆಪೇನ್, ಲುಟೈನ್, ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಸಿ.

ಬೀಟಾ-ಕೆರೋಟಿನ್
ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣದ ಆಹಾರವಸ್ತುಗಳಲ್ಲಿ ಬೀಟಾಕೆರೋಟಿನ್ ಲಭ್ಯವಿದೆ. ಕಿತ್ತಳೆ ಹಣ್ಣು, ಕ್ಯಾರೆಟ್, ಕುಂಬಳಕಾಯಿ, ಮಾವಿನ ಹಣ್ಣು, ಸಿಹಿಗೆಣಸು, ಪಪ್ಪಾಯಿ, ಸಾಸಿವೆ ಸೊಪ್ಪು, ಆಪ್ರಿಕಾಟ್, ಬಸಳೆ, ಪಾಲಕ್ ಸೊಪ್ಪುಗಳಲ್ಲಿ ಬೀಟಾ ಕೆರೋಟಿನ್ ಧಾರಾಳವಾಗಿದೆ.

ಲುಟೈನ್
ಲುಟೈನ್ ಬಸಳೆ, ಪಾಲಕ್ ಮುಂತಾದ ಹಸಿರು ಸೊಪ್ಪು ತರಕಾರಿಗಳಲ್ಲಿರುತ್ತವೆ. ಇವುಗಳು ಆರೋಗ್ಯಯುತ ಕಣ್ಣುಗಳಿಗೂ, ಪಚನಕ್ರಿಯೆಗೂ ಅತ್ಯುತ್ತಮ.

ಲಿಕೆಪೇನ್
ಟೊಮ್ಯಾಟೋ, ಕಲ್ಲಂಗಡಿ, ದ್ರಾಕ್ಷಿಹಣ್ಣುಗಳು, ಪೇರಳೆ ಮುಂತಾದ ಕೆಂಪು ಹಣ್ಣುಗಲ್ಲಿ ಲಿಕೆಪೇನ್ ದೊರೆಯುತ್ತದೆ

ಸೆಲೆನಿಯಮ್
ಸೆಲೆನಿಯಮ್ ಆಂಟಿಯೊಕ್ಸಿಡೆಂಟನ್ನು ತಟಸ್ಥಗೊಳಿಸುವುದಿಲ್ಲ, ಆದರೆ ಇದು ಖನಿಜವನ್ನು ದೇಹಕ್ಕೆ ಒದಗಿಸುತ್ತದೆ. ಅಕ್ಕಿ, ಗೋಧಿ, ಕಡಲೆ, ಗೋಡಂಬಿ ಮುಂತಾದ ಬೀಜಗಳು, ಒಣಹಣ್ಣುಗಳಲ್ಲೂ ಇವುಗಳು ಇರುತ್ತವೆ. ಸೆಲೇನಿಯಂ ಹೇರಳವಾಗಿರುವ ಮಣ್ಣಿನಲ್ಲಿ ಬೆಳೆದಿರುವ ತರಕಾರಿಗಳಲ್ಲೂ ಸೆಲೆನಿಯಂ ಅಧಿಕವಾಗಿರುತ್ತದೆ.

ವಿಟಮಿನ್ ಎ
ಲಿವರ್, ಸಿಹಿಗೆಣಸು, ಕ್ಯಾರೆಟ್, ಆಪ್ರಿಕಾಟ್‌ಗಳು, ಕಿತ್ತಳೆ ಹಣ್ಣು, ಪೇರಳೆ, ಪಪ್ಪಾಯಿ, ಹಾಲು, ಬೆಣ್ಣೆ, ಮೊಟ್ಟೆಯ ಹಳದಿ, ಚೀಸ್‌ಗಳಲ್ಲಿ ವಿಟಮಿನ್ ಎ ದೊರೆಯುತ್ತದೆ.

ವಿಟಮಿನ್ ಇ
ಬಾದಮಿ, ಸೂರ್ಯಕಾಂತಿ ಎಣ್ಣೆ, ಜೋಳ, ಸೋಯಾಬೀನ್ ಎಣ್ಣೆ, ಮೀನೆಣ್ಣೆ, ಹೂಕೋಸು ಮೊದಲಾದವುಗಳಲ್ಲಿ ಮತ್ತು ಮಾವು, ಬ್ರಕೋಲಿಗಳಲ್ಲಿ ವಿಟಮಿನ್ ಇ ಇರುತ್ತದೆ.

ವಿಟಮಿನ್ ಸಿ
ಇದನ್ನು ದೇಹದಲ್ಲಿ ಸಂಗ್ರಹಿಸಿಡಲು ಆಗದ ಕಾರಣ ಇದನ್ನು ದಿನನಿತ್ಯ ಸೇವಿಸಬೇಕಾಗುತ್ತದೆ. ಕಿತ್ತಳೆ, ನಿಂಬೆಹಣ್ಣು ಮುಂತಾದ ಹಣ್ಣುಗಳಲ್ಲಿ, ಹೂಕೋಸು, ಹಸಿರು ಸೊಪ್ಪು ತರಕಾರಿಗಳು, ಸ್ಟ್ರಾಬರಿ, ಹಸಿ ನೆಲಕೋಸು, ಮತ್ತು ಆಲೂಗಡ್ಡೆಗಳ ಸೇವನೆಯಿಂದ ವಿಟಮಿನ್ ಸಿ ನಮ್ಮ ದೇಹವನ್ನು ಸೇರುತ್ತದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments