Webdunia - Bharat's app for daily news and videos

Install App

ಜೀರ್ಣಕ್ರಿಯೆಗೆ ಸುಲಭೋಪಾಯಗಳು

Webdunia
ಮಂಗಳವಾರ, 22 ಜನವರಿ 2008 (20:29 IST)
WD
1. ತಣ್ಣಗಿನ ಅಥವಾ ಹಸಿ ಆಹಾರ ಸೇವಿಸುವುದಕ್ಕಿಂತ ಬೇಯಿಸಿದ ಆಹಾರ ಸೇವಿಸಿ.

ತಂಪಾದ ಮತ್ತು ಹಸಿ ಆಹಾರಗಳನ್ನು ಬೇಯಿಸಿದ ಆಹಾರಕ್ಕಿಂತ ಹೆಚ್ಚು ಬಿಸಿಮಾಡಬೇಕು. ಏಕೆಂದರೆ ಅವು ಜೀರ್ಣಕ್ರಿಯೆಯ ಬೆಂಕಿಯನ್ನು ದುರ್ಬಲಗೊಳಿಸುತ್ತದೆ. ಜೀರ್ಣಕ್ರಿಯೆ ದುರ್ಬಲವಾಗಿರುವ ವ್ಯಕ್ತಿ ಹಸಿ ಮತ್ತು ತಂಪಾದ ಆಹಾರ ಸೇವಿಸಲೇಬಾರದು. ಅದರ ಅರ್ಥವೇನೆಂದರೆ ಬೇಯಿಸಿದ ತರಕಾರಿ ಮತ್ತು ಹಣ್ಣುಗಳನ್ನು ತಿನ್ನಬೇಕು ಮತ್ತು ಬಿಸಿಯಾದ ಸೂಪ್, ಹುರುಳಿಕಾಯಿ ಅಥವಾ ಧಾನ್ಯದ ತಿನಿಸುಗಳನ್ನು ಸೇವಿಸಬೇಕು. ಸ್ಯಾಂಡ್‌ವಿಚ್ ಮತ್ತು ಸ್ನ್ಯಾಕ್ ರೀತಿಯ ಬೋಜನ ಹಿತಕಾರಿಯಲ್ಲ. ಆಹಾರದ ಜತೆ ಐಸ್‌ನೀರು ಸೇವಿಸುವುದು ಜೀರ್ಣಕ್ರಿಯೆಯನ್ನು ಕುಂದಿಸುತ್ತದೆ.

2) ಆಹಾರವನ್ನು ಚೆನ್ನಾಗಿ ಅಗಿದು ತಿನ್ನಿ ಮತ್ತು ಮಿತವಾದ ವೇಗದಲ್ಲಿ ಸೇವಿಸಿ

ನಾವು ಪ್ರತಿಬಾರಿ ಬಾಯಿಗೆ ಹಾಕಿದ ಆಹಾರವನ್ನು 30 ಬಾರಿ ಜಗಿಯಬೇಕು. ಅದನ್ನು ಸಣ್ಣ ಚೂರುಗಳಾಗಿ ಅಗಿದು ಆಹಾರದ ಪಚನಕ್ಕೆ ಜೊಲ್ಲುರಸ ವೃದ್ಧಿಗೆ ಅವಕಾಶ ಕಲ್ಪಿಸುತ್ತದೆ
.
3) ಶಾಂತಿಯುತ ಮತ್ತು ರಿಲಾಕ್ಸ್ ಪರಿಸರದಲ್ಲಿ ಆಹಾರ ಸೇವಿಸಿ. ಶಾಂತಿಯುತ ಮತ್ತು ಮೌನ ವಾತಾವರಣದಲ್ಲಿ ಆಹಾರ ಸೇವನೆ ಮಾಡಿದರೆ ನಿಮ್ಮ ಪಚನಕ್ರಿಯೆ ಸುಲಭವಾಗುತ್ತದೆ. ಆಹಾರ ಸೇವಿಸುವಾಗ ಟೆಲಿವಿಷನ್, ಓದುವಿಕೆ, ಕೆಲಸ ಮಾಡುವುದು, ವಾದ ಮಾಡುವುದಕ್ಕೆ ತಡೆ ವಿಧಿಸಿ.

4) ಸರಳವಾಗಿ ಊಟ ಮಾಡಿ

ವಿವಿಧ ಬಗೆಯ ಮಿಶ್ರಣದ ಆಹಾರ ಸೇವನೆಯಿಂದ ಪಚನ ಕ್ರಿಯೆಗೆ ತೊಂದರೆಯಾಗುತ್ತದೆ. 2 ಅಥವಾ 3 ಭಿನ್ನ ತಿನಿಸುಗಳೊಂದಿಗೆ ಸರಳ ಆಹಾರವನ್ನು ಮಾತ್ರ ಸೇವಿಸಿ.

5. ಆಹಾರದ ಮಧ್ಯೆ ಬೇಯಿಸಿದ ಹಣ್ಣು ಸೇವನೆ ಹಸಿ ಹಣ್ಣುಗಳು ಜೀರ್ಣಕ್ರಿಯೆ ಬೆಂಕಿಯನ್ನು ಶಮನಗೊಳಿಸುತ್ತದೆ. ವಿಶೇಷವಾಗಿ ಶೀತಹವೆಯಲ್ಲಿ ಹಸಿ ಹಣ್ಣು ಒಳ್ಳೆಯದಲ್ಲ. ಜೀರ್ಣಕ್ರಿಯೆ ದುರ್ಬಲವಾಗಿರುವ ವ್ಯಕ್ತಿಗಳು ಹಸಿ ಹಣ್ಣುಗಳನ್ನು ಆಹಾರದ ಜತೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ ತೊಂದರೆ ಉಂಟಾಗುತ್ತದೆ.

6) ಬಿಸಿ ನೀರನ್ನು ಸೇವಿಸಿ ಮತ್ತು ಬಿಸಿ ಹರ್ಬ್ ಚಹಾ ಸೇವಿಸಿ

ಬಿಸಿ ನೀರು ದೇಹ ವಿಷಕಾರಿ ವಸ್ತು ಹೊರಹಾಕಿ ಜೀರ್ಣ ಶಕ್ತಿ ನಿರ್ಮಾಣ ಮಾಡುತ್ತದೆ. ಬಿಸಿನೀರಿನಲ್ಲಿ ಕೆಲವು ಶುಂಠಿ ಬೇರುಗಳನ್ನು ಹಾಕಿ ಶುಂಠಿ ಬೇರಿನ ಚಹಾ ಸೇವನೆಯಿಂದ ಜೀರ್ಣಕ್ರಿಯೆಯನ್ನು ಉದ್ದೀಪನಗೊಳಿಸುತ್ತದೆ.


7. ಮಿತಿಮೀರಿ ತಿನ್ನಬೇಡಿ

ಮಿತಿಮೀರಿ ಆಹಾರ ಸೇವನೆಯು ಇಡೀ ಜೀರ್ಣಕ್ರಿಯೆಗೆ ಹೊರೆಯಾಗುತ್ತದೆ. ಪ್ರಾಚೀನ ಆಯುರ್ವೇದ ವೈದ್ಯದಲ್ಲಿ ಯಾವುದೇ ಊಟದಲ್ಲಿ ಎರಡು ಮುಷ್ಠಿ ಹಿಡಿಸುವ ಆಹಾರ ಸೇವಿಸುವಂತೆ ಶಿಫಾರಸು ಮಾಡಿದೆ. ಸ್ವಲ್ಪ ಮಟ್ಟಿಗೆ ನಿಮ್ಮ ಹಸಿವು ಇಂಗಿದ ಕೂಡಲೇ ಮೇಜಿನಿಂದ ದೂರಸರಿಯಲು ಕಲಿಯಿರಿ.

8) ಆಹಾರ ಸೇವನೆ ಬಳಿಕ ವಿಶ್ರಾಂತಿ

ಆಹಾರ ಸೇವಿಸಿದ ಬಳಿಕ ಸ್ವಲ್ಪ ಕಾಲ ವಿಶ್ರಮಿಸುವುದು ಪಚನದ ಜಟಿಲ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

9) ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ವೈದ್ಯರನ್ನು ಭೇಟಿಮಾಡಿ

ಇಂತಹ ಸರಳ ಸ್ವಯಂಸಹಾಯ ಕ್ರಮಗಳಿಂದ ನಿಮ್ಮ ಪಚನಕ್ರಿಯೆ ಸಮಸ್ಯೆಗಳು ನಿವಾರಣೆಯಾಗದಿದ್ದರೆ ವೈದ್ಯರನ್ನು ಅಥವಾ ಪೌಷ್ಠಿಕಾಂಶ ತಜ್ಞರನ್ನು ಭೇಟಿಯಾಗುವುದು ಒಳಿತು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments